Categories: ಆರೋಗ್ಯ

ಚರ್ಮದ ಮೇಲೆ ಮೂಡುವ ಮೊಡವೆಗಳಿಗೆ ಕಾರಣ ಹಾಗೂ ಆರೈಕೆ

ಕೂದಲು ಕಿರುಚೀಲಗಳು(ಹೇರ್ ಫೋಲಿಕ್ಸ್) ಎಂದು ಕರೆಯಲ್ಪಡುವ ಚರ್ಮದಲ್ಲಿನ ಆಯಿಲ್ ಮತ್ತು ಡೆಡ್ ಸ್ಕಿನ್ ಜೊತೆ ಸೇರಿ ಸಣ್ಣ ರಂಧ್ರಗಳು ಮುಚ್ಚಿ ಹೋದಾಗ ಮೊಡವೆಗಳು ನಮ್ಮ ಚರ್ಮದಲ್ಲಿ ಉಂಟಾಗುತ್ತದೆ. ಇವು ನಮ್ಮ ಮುಖದ ಮೇಲೆ ವೈಟ್‍ಹೆಡ್, ಬ್ಲಾಕ್ ಹೆಡ್‍ಗಳಿಗೆ ಕಾರಣವಾಗುತ್ತದೆ.

ಮುಖ್ಯವಾಗಿ ಪ್ರೌಢಾವಸ್ಥೆಯಲ್ಲಿರುವ ಹುಡುಗ ಹುಡುಗಿಯರಲ್ಲಿ ಸಾಮಾನ್ಯವಾಗಿ ಈ ಸಮಸ್ಯೆಗಳನ್ನು ಕಾಣಬಹುದು ಎಂದು ಕಾಕುಂಜೆ ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ.

ಮೊಡವೆಗಳು ಫೇಸ್‍ಬಂಪ್ಸ್, ಕೀವು ತುಂಬಿದ ಮೊಡವೆಗಳು, ಗಟ್ಟಿ ಇರುವ ಹಾಗೂ ನೋವು ಜಾಸ್ತಿ ಇರುವಂತಹ ಮೊಡವೆಗಳು ಹಲವಾರು ಬಾರಿ ನಮ್ಮ ಮುಖದಲ್ಲಿರುವುದನ್ನು ನಾವು ಕಾಣಬಹುದು. ಈ ಮೊಡವೆಗಳು ಹೆಚ್ಚಾಗಿ ಕೆನ್ನೆ, ಹಣೆ, ಗಲ್ಲ, ಕಿವಿಯ ಬದಿಯಲ್ಲಿ, ಎದೆಯ ಮೇಲೆ, ಬೆನ್ನಿನ ಮೇಲೆ ಹಾಗೂ ಭುಜಗಳ ಮೇಲೆ ಬರುತ್ತದೆ.

ಮುಖ್ಯ ಕಾರಣಗಳು

ನಮ್ಮ ಮುಖದ ಮೇಲಿನ ಚರ್ಮದಲ್ಲಿ ಹೆಚ್ಚಿನ ಪ್ರಮಾಣದ ಎಣ್ಣೆ ಉತ್ಪತ್ತಿಯಾಗುವುದು ಈ ಮೊಡವೆಗಳಿಗೆ ಮುಖ್ಯ ಕಾರಣ. ಹಾಗೂ ಹೇರ್ ಫೋಲಿಕ್ಸ್‍ಗಳು ಕೊಳೆ ಮತ್ತು ಎಣ್ಣೆಯಿಂದ ಮುಚ್ಚಿ ಹೋಗಿ ಬ್ಯಾಕ್ಟೀರಿಯದಿಂದ ಮುಚ್ಚಿ ಹೋಗುವುದರಿಂದಲೂ ಮೊಡವೆಗಳು ಮುಖದಲ್ಲಿ ಮೂಡುತ್ತವೆ.

ನಮ್ಮ ದೇಹದಲ್ಲಿ ಆಗುವ ಹಾರ್ಮೋನಲ್ ಬದಲಾವಣೆಗಳು ಕೂಡ ಒಂದು ಮುಖ್ಯ ಕಾರಣವಾಗಿದೆ. ಹುಡುಗರಲ್ಲಿ ಆ್ಯಂಡ್ರೋಜನ್ ಎಂಬ ಹಾರ್ಮೋನು ಮೊಡವೆಗಳ ಉತ್ಪತ್ತಿಗೆ ಒತ್ತು ನೀಡುತ್ತದೆ.

ಹುಡಿಗಿರಲ್ಲೂ ಇದೇ ಹಾರ್ಮೋನ್ ಜಾಸ್ತಿಯಾದಾಗ ಹಾರ್ಮೋನಲ್ ಇಂಬ್ಯಾಲೆನ್ಸ್ ಉಂಟಾಗುತ್ತದೆ. ಕೆಲವೊಮ್ಮೆ ನಾವು ಬಳಸುವ ಮೆಡಿಸಿನ್ ಸ್ಟಿರಾಯ್ಡ್, ಟೆಸ್ಟೋಸ್ಟಿರಾನ್‍ನಂತಹ ಮೆಡಿಸಿನ್‍ನಿಂದಾಗಿಯೂ ಮೊಡವೆಗಳು ಉಂಟಾಗುತ್ತವೆ.

ಹಲವಾರು ಬಾರಿ ನಾವು ಸೇವಿಸುವ ಆಹಾರಗಲ್ಲಿ ಹೆಚ್ಚಿನ ಕಾಬ್ರೋಹೈಡ್ರೇಟ್ಸ್ ಇರುವ ಆಹಾರಗಳಾದ ಬ್ರೆಡ್, ಚಿಪ್ಸ್, ಸಿಹಿ ಪದಾರ್ಥಗಳನ್ನು ಸೇವಿಸುವುದರಿಂದ ಮೊಡವೆಗಳು ಉಂಟಾಗುತ್ತವೆ.

ಇವುಗಳ ಜೊತೆಗೆ ನಾವು ನಮ್ಮ ದೇಹಕ್ಕೆ ಎಷ್ಟು ಪ್ರಮಾಣದ ಒತ್ತಡವನ್ನು ನೀಡುತ್ತೇವೆ ಅಷ್ಟೇ ಪ್ರಮಾಣದ ನಿದ್ದೆಯೂ ಸಹ ಮುಖ್ಯವಾಗಿರುತ್ತದೆ. ನಿದ್ದೆ ಕಡಿಮೆಯಾದಲ್ಲಿ ಮೊಡವೆಗಳು ಬರುವ ಸಾಧ್ಯತೆಗಳಿರುತ್ತವೆ.

ಮುಖ್ಯವಾಗಿ ನಮ್ಮ ಚರ್ಮ ಯಾವರೀತಿಯದ್ದು ಎಂದು ತಿಳಿದುಕೊಂಡು ಅದಕ್ಕೆ ಆರೈಕೆ ಮಾಡುವುದು ಉತ್ತಮ.

Ashika S

Recent Posts

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತ

ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿ‌ಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.

3 mins ago

ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ : ಪರಿಚಯಸ್ಥರಿಂದಲೇ ಕೊಲೆ ಶಂಕೆ

ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ…

22 mins ago

ಬಿಜೆಪಿ ಈಗ ಬೆಳೆದು ನಿಂತಿದೆ ಅದಕ್ಕೆ ಆರ್ ಎಸ್ ಎಸ್ ಬೆಂಬಲ ಬೇಕಾಗಿಲ್ಲ: ಉದ್ಧವ್ ಠಾಕ್ರೆ

ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಶಿವಸೇನಾ ಯುಬಿಟಿ ಬಣದ…

27 mins ago

ನೇಹಾ, ಅಂಜಲಿ ಕೊಲೆ ಕೇಸ್​​ : ಎಡಿಜಿಪಿ ಆರ್.ಹಿತೇಂದ್ರ ಅಧಿಕಾರಿಗಳಿಗೆ ಕ್ಲಾಸ್​

ನೇಹಾ ಮತ್ತು ಅಂಜಲಿ ಅಂಬಿಗೇರ ಹತ್ಯೆ ಪ್ರಕರಣಗಳು ಬಾರಿ ಸಂಚಲನ ಮೂಡಿಸಿದ್ದವು ಈ ಹಿನ್ನೆಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ…

36 mins ago

ಕಲಬುರಗಿ: ಅಂಧ ಮಕ್ಕಳ ಶಾಲೆಗೆ 100% ಫಲಿತಾಂಶ

ನಗರದ ದಕ್ಷಿಣ ಭಾರತ ದಲಿತ ವಿದ್ಯಾ ಸಂಸ್ಥೆಯ ಸಿದ್ದಾರ್ಥ ಕಿವುಡ ಮತ್ತು ಮೂಕ ಮಕ್ಕಳ ವಸತಿಯುತ ಪ್ರೌಢಶಾಲೆಗೆ ಪ್ರಸ್ತುತ ಸಾಲಿನ…

46 mins ago

ಐಪಿಎಲ್ ಪ್ರಸಾರಕರ ಹಿಟ್​ಮ್ಯಾನ್​ ರೋಹಿತ್​ ಕಿಡಿ

ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಐಪಿಎಲ್ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ…

1 hour ago