Categories: ಆರೋಗ್ಯ

ಹುಷಾರ್! ಈ  ಔಷಧಿಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ

ಬೆಂಗಳೂರು: ಈಗಾಗಲೇ ಬಳಕೆಯಲ್ಲಿರುವ ಕೆಲವೊಂದು ಔಷಧಿಗಳನ್ನು ಅವುಗಳು ಗುಣಮಟ್ಟದಲ್ಲ ಎಂಬುದು ತಿಳಿದು ಬಂದ ಹಿನ್ನಲೆಯಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅಪ್ಪಿತಪ್ಪಿಯೂ  ಈ ಔಷಧಿಗಳನ್ನು ಬಳಸದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಪ್ಯಾರ್‍ಕ್ಯೂರ್ -650 (ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್ ಐ.ಪಿ.-650 ಎಂಜಿ), ಆಮ್ಲೋಡಿಫೈನ್ ಬಿಸೈಲೆಟ್ ಟ್ಯಾಬ್ಲೆಟ್ಸ್ ಐಪಿ-5ಎಂಜಿ (ಆಮ್ಲೋಪ್ರೈಮ್ 5 ಟ್ಯಾಬ್ಲೆಟ್ಸ್), ಜುಕೋಕ್ಸ್-ಪಿ (ಎಟೋರಿಕೋಕ್ಸಿಬ್  ಅಂಡ್ ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್), ಟ್ಯಾಬ್‍ಡೋಜ್- ಎಲ್‍ಪಿ ಟ್ಯಾಬ್ಲೆಟ್ಸ್ ಲೋರ್‍ನೋಕ್ಸಿಕೆಮ್ ಅಂಡ್ ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್, ಓಮಸೆಲ್-ಡಿ (ಒಮೆಪ್ರಜೋಲ್ ಅಂಡ್ ಡೋಮ್‍ ಫೆರಿಡನ್ ಕ್ಯಾಪ್ಸೂಲ್ಸ್ ಐ.ಪಿ.), ಎಲ್‍ವಿಸಿಪ್- 500  (ಸಿಫ್ರೋಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ) ಆಮ್ಲೋಡಿಫೈನ್ ಅಂಡ್ ಅಟಿನೋಲೋಲ್ ಟ್ಯಾಬ್ಲೆಟ್ಸ್ ಐ.ಪಿ (ಅಮ್ಲೋರೆಡ್ ಅಟ್).

ಇಷ್ಟೇ ಅಲ್ಲದೆ,  ಪಿಯೋಗ್ಲಿಟಜೋಲ್ ಟ್ಯಾಬ್ಲೆಟಸ್ ಐ.ಪಿ 15 ಎಂಜಿ, ಶ್ವಾಸ್ (ಅಲ್ಬುಟೇರಾಲ್ ಎಟೋಫಿಲಿನ್ ಓರಲ್ ಲಿಕ್ವಿಡ್), ನಾಕ್ಟೈನ್ – ಪಿ ಸಸ್‍ಪೆನ್‍ಷನ್ (ಅಸೆಕ್ಲೋಫೆನಕ್ ಅಂಡ್  ಪ್ಯಾರಾಸೆಟಮೋಲ್ ಸಸ್‍ಪೆನ್‍ಷನ್), ಡೆಕ್ಸ್ಟ್ರೋಮೆಥೋರ್‍ಫಾನ್ ಹೈಡ್ರೋಬ್ರೋಮೈಡ್, ಕ್ಲೋರ್ಫೆನಿರಮಿನ್ ಮ್ಯಾಲೆಟ್ ಅಂಡ್ ಫೆನೈಲ್ಟ್ರಿನ್ ಹೈಡ್ರೋಕ್ಲೋರೈಡ್ ಸಿರಪ್ (ಸಾಂಬೆರಿ- ಎಕ್ಸ್‍ಎಲ್ ಸಿರಪ್), ರಾಬೆಫ್ರಜೋಲ್ ಸೋಡಿಯಂ & ಡೋಮ್‍ಫೆರಿಡಿನ್ ಎಸ್‍ಆರ್ ಕ್ಯಾಪ್ಸೂಲ್ಸ್ (20 ಎಂಜಿ/30ಎಂಜಿ), ಪೊವಿಡನ್ ಆಯೋಡಿನ್ ಸಲೂಷನ್ ಐ.ಪಿ.7.5%, ಡಿಸಲ್ಟಿರಾಮ್ ಟ್ಯಾಬ್ಲೆಟ್ಸ್ ಐ.ಪಿ.500 ಎಂಜಿ (ಕ್ರೋಟೋರಿಫ್), ಆಟ್ರೋಫಿನ್ ಸಲ್ಫೆಟ್ ಇನ್‍ಜೆಕ್ಷನ್ ಐಪಿ1 ಎಂಎಲ್, ಔಷಧಿಗಳು / ಕಾಂತಿವರ್ಧಕಗಳು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ.

ಈ ಎಲ್ಲ ಔಷಧಿ ಹಾಗೂ  ಕಾಂತಿವರ್ಧಕಗಳನ್ನು ಔಷಧಿ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ, ಅಲ್ಲದೆ, ಸಾರ್ವಜನಿಕರು ಈ ಔಷಧಗಳನ್ನು, ಕಾಂತಿವರ್ಧಕಗಳನ್ನು ಉಪಯೋಗಿಸಬಾರದು ಎಂದು ಔಷಧ ನಿಯಂತ್ರಕರಾದ ಭಾಗೋಜಿ ಟಿ. ಖಾನಾಪುರೆ ಅವರು ತಿಳಿಸಿದ್ದಾರೆ.

Ashika S

Recent Posts

ನ್ಯೂಸ್ ಕರ್ನಾಟಕ ವರದಿಯ ಫಲಶೃತಿ : ಗೋಳೂರು ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ತಾಲ್ಲೂಕಿನ ಗೋಳೂರು ಗ್ರಾಮದ ಅಂಬೇಡ್ಕರ್ ಬಡಾವಣೆಯಲ್ಲಿ ಗಬ್ಬೆದ್ದು ನಾರುತ್ತಿರುವ ಚರಂಡಿ ಅವ್ಯವಸ್ಥೆಯ ಬಗ್ಗೆ ನ್ಯೂಸ್ ಕರ್ನಾಟಕ ವಾಹಿನಿಯಲ್ಲಿ ಸುದ್ದಿಯನ್ನು ಪ್ರಸಾರ…

11 mins ago

ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು

ಮೊಬೈಲ್‌ ನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದಿದ್ದ ಕಣಗಿಲೆ ಹೂವನ್ನು ಕಿತ್ತು ತಿಂದ ಪರಿಣಾಮ ಯುವತಿಯೊಬ್ಬಳು ಪ್ರಾಣವನ್ನೇ ಕಳೆದುಕೊಂಡಿರುವ ಅಹಿತಕರ ಘಟನೆ…

38 mins ago

ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಲಷ್ಟನೆ ಏನು ?

ಸೋಷಿಯಲ್‌ ಮೀಡಿಯಾದಲ್ಲಿ ಹಸಿ ಬಿಸಿ ಫೋಟೋಗಳನ್ನು ಶೇರ್‌ ಮಾಡುತ್ತ, ಹಲ್‌ಚಲ್‌ ಸೃಷ್ಟಿಸುತ್ತಿದ್ದ ಕಿರುತೆರೆ ನಟಿ ಜ್ಯೋತಿ ರೈ, ಇದೀಗ ಖಾಸಗಿ…

51 mins ago

ಹುಬ್ಬಳ್ಳಿಯ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಒಂದು ಹ್ಯಾಟ್ಸ್ ಅಪ್

ಹುಬ್ಬಳ್ಳಿಯ ಕೇಶ್ವಾಪುರದ ಸರ್ವೋದಯ ಸರ್ಕಲ್ ನಿಂದ ದೇಸಾಯಿ ಬ್ರಿಡ್ಜ್ ವರೆಗೂ ಅಪರಿಚಿತ ವಾಹನವೊಂದರ ಇಂಜಿನ್ ಆಯಿಲ್‌ ಲೀಕ್ ಆಗಿ ರಸ್ತೆಯ…

1 hour ago

ಮಲ್ಪೆಯಲ್ಲಿ ಸಮುದ್ರದ ಅಲೆಗಳ ಆರ್ಭಟ ಹೆಚ್ಚಳ : ವಾಟರ್ ಸ್ಪೋರ್ಟ್ಸ್ ಸ್ಥಗಿತ

ಚಂಡಮಾರುತದ ಪ್ರಭಾವದಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಮುಂದಿನ ಆದೇಶದವರೆಗೆ ಮಲ್ಪೆಯಲ್ಲಿ ಎಲ್ಲ ರೀತಿಯ ವಾಟರ್ ಸ್ಪೋರ್ಟ್ಸ್ ಸ್ಥಗಿತಗೊಳಿಸಲಾಗಿದೆ.

1 hour ago

ಫೇಲ್​ ಆದ ವಿದ್ಯಾರ್ಥಿಗಳೇ ಟೆನ್ಶನ್​ ಬೇಡ; ಮರು ಪರೀಕ್ಷೆಯ ದಿನಾಂಕ ಪ್ರಕಟ

ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಪರೀಕ್ಷೆ ಬರೆದ 6,31,204 (73.40)ವಿದ್ಯಾರ್ಥಿಗಳು ತೇರ್ಗಡೆ ಹೊಂದಿದರೆ,…

1 hour ago