Categories: ಆರೋಗ್ಯ

ಮಹಿಳೆಯರೇ ಮುಖದ ಸೌಂದರ್ಯದತ್ತ ನಿಗಾವಿರಲಿ

ಪ್ರತಿನಿತ್ಯ ಕೆಲಸ ಮಾಡಲೆಂದು ಮನೆಯಿಂದ ಹೊರಗೆ ಹೋಗುವ ಉದ್ಯೋಗಸ್ಥ ಮಹಿಳೆಯರು ಬೇಸಿಗೆಯ ಈ ಸಮಯದಲ್ಲಿ ತಮ್ಮ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನಹರಿಸುವುದು ಅಗತ್ಯವಾಗಿದೆ. ಕೆಲಸದ ಒತ್ತಡದ ನಡುವೆ ಬಿಸಿಲ ಧಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದರೊಂದಿಗೆ ಮುಖದ ಸೌಂದರ್ಯದತ್ತವೂ ನಿಗಾ ವಹಿಸಬೇಕಾಗುತ್ತದೆ.

ಮನೆಯಿಂದ ಹೊರಗೆ ಕಾಲಿಟ್ಟರೆ ನೆತ್ತಿ ಸುಡುವ ಬಿಸಿಲಿಗೆ ಮೈಬೆವರುವುದರೊಂದಿಗೆ ಮುಖಕ್ಕೆ ಮಾಡಿದ ಮೇಕಪ್ ಎಲ್ಲವೂ ಬೆವರಿನಲ್ಲಿ ಕರಗಿ ಹೋಗುತ್ತದೆ. ಜತೆಗೆ ವಾಹನಗಳ ಧೂಳು, ಮೈಕಾಂತಿ ಮೇಲೆ ಪರಿಣಾಮ ಬೀರದಿರದು. ಇಂತಹ ಸಂದರ್ಭದಲ್ಲಿ ಬಿಸಿಲಿನ ಬೇಗೆಯ ನಡುವೆಯೂ ಮುಖದ ಕಾಂತಿಯನ್ನು ಕಾಪಾಡಿಕೊಳ್ಳುವುದು ಹೆಣ್ಮಕ್ಕಳಿಗೆ ಸವಾಲ್ ಎಂದರೆ ತಪ್ಪಾಗಲಾರದು.

ಹಾಗಾದರೆ ಬಿಸಿಲಿನ ಬೇಗೆಯಿಂದ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳುವುದು ಹೇಗೆ? ಎಲ್ಲದಕ್ಕೂ ಪ್ರತಿ ದಿನವೂ ಬ್ಯೂಟಿ ಪಾರ್ಲರ್ ಗೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಮನೆಯಲ್ಲಿದ್ದುಕೊಂಡೇ ತಮ್ಮ ಕೈಗೆಟುಕುವ ಪದಾರ್ಥಗಳನ್ನೇ ಬಳಸಿ ಮುಖದ ಕಾಂತಿಯನ್ನು ಉಳಿಸಿಕೊಳ್ಳುವುದು ಜಾಣತನವಾಗುತ್ತದೆ.

ಸಮಯ ಸಿಕ್ಕಾಘ ತುಳಸಿ, ಬೇವಿನ ಫೇಸ್ ಪ್ಯಾಕ್ ಬಳಸಬೇಕಾಗುತ್ತದೆ. ಆ ನಂತರ ತಣ್ಣೀರಿನಿಂದ ರೋಸ್ ವಾಟರ್‌ ನಿಂದ ಮುಖ ತೊಳೆದುಕೊಂಡರೆ ಚರ್ಮದ ಕಾಂತಿ ಹೊಳೆಯುತ್ತಿರುತ್ತದೆ. ಇದು ಕೇವಲ ಚರ್ಮಕ್ಕೆ ಕಾಂತಿ ನೀಡುವುದಲ್ಲದೇ, ಮುಖದಲ್ಲಿ ರಕ್ತ ಸಂಚಾರಕ್ಕೂ ಸಹಾಯ ಮಾಡಲಿದೆ.

ಬಿಸಿಲಿನಲ್ಲಿ ಹೊರ ಓಡಾಡುವ ಮಹಿಳೆಯರು ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬಾರದು. ಇದು ಮಾರುಕಟ್ಟೆಯಲ್ಲಿ ಸುಲಭವಾಗಿಯೇ ದೊರೆಯಲಿದೆ. ಇನ್ನು ಮನೆಯಲ್ಲೇ ಹಣ್ಣುಗಳಿಂದ ಫೇಶಿಯಲ್ ಮಾಡಿಕೊಳ್ಳಬಹುದು. ಇದರಿಂದ ತ್ವಚೆಯ ನಿರ್ಜೀವ ಚರ್ಮ ಹೋಗಿ ಚರ್ಮ ಕಾಂತಿಯುತವಾಗಲಿದೆ.

ಇನ್ನು ದಿನವಿಡೀ ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ತಮ್ಮ ಹ್ಯಾಂಡ್ ಬ್ಯಾಗ್ ಗಳಲ್ಲಿ ಕೆಲ ಸೌಂದರ್ಯ ವರ್ಧಕಗಳನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಅಲ್ಲದೆ ತಮಗೆ ಸೂಕ್ತವಾದ ಪೌಡರ್ ನ್ನು ಆಗಾಗ್ಗೆ ಹಚ್ಚುತ್ತಿರಬೇಕು. ಇದರಿಂದ ಧೂಳು ಮುಖದಲ್ಲಿ ತುಂಬಿಕೊಳ್ಳುವುದನ್ನು ತಡೆಯಬಹುದಾಗಿದೆ.

ಇನ್ನು ಬಿಸಿಲಿನಲ್ಲಿ ಕೂದಲಿನ ಸಮಸ್ಯೆ ಹೆಚ್ಚು ಕಾಡುತ್ತದೆ. ಏಕೆಂದರೆ ಬಿಸಿಲಿನಲ್ಲಿ ಓಡಾಡುವಾಗ ಕೂದಲು ಉದುರುವಿಕೆ ಹೆಚ್ಚು ಕಂಡು ಬರುತ್ತದೆ ಇದನ್ನು ತಡೆಯಬೇಕಾದರೆ, ಮೊದಲಿಗೆ ಕೂದಲನ್ನು ನೀಟಾಗಿ ಬಾಚಿ ಜಡೆ ಹೆಣೆಯ ಬೇಕಾಗುತ್ತದೆ ಇದರಿಂದ ಕೂದಲು ಉದುರುವುದಿಲ್ಲ, ಜತೆಗೆ ಕವಲು ಒಡೆಯುವುದಿಲ್ಲ.

ಇಷ್ಟೇ ಅಲ್ಲದೆ ಬೇಸಿಗೆಯಲ್ಲಿ ಮೈಬೆವರುವುದರಿಂದ ದುರ್ವಾಸನೆಯೂ ಬೀರಬಹುದು. ಹೀಗಾಗಿ ಬಿಸಿಲಿನಲ್ಲಿ ನಡೆಯುವಾಗ ಛತ್ರಿ ಬಳಕೆ ಒಳ್ಳೆಯದು. ಜತೆಯಲ್ಲಿ ನೀರಿಟ್ಟುಕೊಂಡು ಆಗಾಗ್ಗೆ ಕುಡಿಯುವುದು ಒಳ್ಳೆಯದು. ಬಿಸಿಲು ನೇರವಾಗಿ ಮುಖದ ಮೇಲೆ ಬೀಳದಂತೆ ನೋಡಿಕೊಳ್ಳುವುದು ಒಳ್ಳೆಯದು. ಒಟ್ಟಾರೆ ಬೇಸಿಗೆಯ ಈ ದಿನಗಳಲ್ಲಿ ಒಂದಷ್ಟು ಎಚ್ಚರಿಕೆ ವಹಿಸದೆ ಹೋದರೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಬಹುದು ಆದ್ದರಿಂದ ಅತ್ತ ನಿಗಾವಹಿಸಬೇಕಾಗುತ್ತದೆ.

Nisarga K

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

28 mins ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

45 mins ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

60 mins ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

1 hour ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

3 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

3 hours ago