Categories: ಆರೋಗ್ಯ

ಬೀದರ್ ಜನರಿಗೆ ಕಾಡುತ್ತಿದೆ ಮದ್ರಾಸ್ ಐ ಭಯ : 7 ಸಾವಿರ ಜನರಲ್ಲಿ ಸೋಂಕು ಪತ್ತೆ

ಬೀದರ್: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಮದ್ರಾಸ್‌ ಐ ಸೋಂಕು ಗಡಿ ಜಿಲ್ಲೆ ಬೀದರ್‌ನಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, 20 ದಿನಗಳ ಅವಧಿಯಲ್ಲಿ 7 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು‌ ಕಾಣಿಸಿಕೊಂಡಿದೆ.

ಕಣ್ಣಿನ‌ ಉರಿ, ನಿರಂತರ ನೀರು ಬರುವುದು ಸೇರಿದಂತೆ ಇತರ ರೋಗ ಲಕ್ಷಣಗಳನ್ನ ಹೊಂದಿರುವ ಮದ್ರಾಸ್ ಐ ಅಥವಾ ಕಂಜಕ್ಟಿವೈಟಿಸ್ ಸೋಂಕು ದಿನದಿಂದ ಉಲ್ಬಣಗೊಳ್ಳುತ್ತಿದೆ.

ಚಿಕ್ಕಮಕ್ಕಳು ಹಾಗೂ ವಯಸ್ಕರಲ್ಲಿ ಹೆಚ್ಚಿನದಾಗಿ ರೋಗಲಕ್ಷಣ ಕಂಡುಬರುತ್ತಿದೆ ಎಂದು ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಕಿರಣ ಪಾಟೀಲ ಹೇಳಿದ್ದಾರೆ.

ಬೀದರ್ ನಗರದ ಬ್ರಿಮ್ಸ್ ಜಿಲ್ಲಾಸ್ಪತ್ರೆಗೆ ಮದ್ರಾಸ್ ಐ ಸೋಂಕಿನ ರೋಗಲಕ್ಷಣ ಹೊಂದಿರುವ ಸುಮಾರು 150 ಕ್ಕೂ ಹೆಚ್ಚು ರೋಗಿಗಳು ಪ್ರತಿನಿತ್ಯ ಭೇಟಿ‌ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲೆಯ ಖಾಸಗಿ ಆಸ್ಪತ್ರೆ ಹಾಗೂ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿಗು ರೋಗಿಗಳು ಭೇಟಿ ನೀಡಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ.

ಶೇ.50 ರಷ್ಟು ಜನರಲ್ಲಿ ರೋಗಲಕ್ಷಣ

ಜಿಲ್ಲೆಯಲ್ಲಿ ಈಗಾಗಲೇ ಶೇ.50 ರಷ್ಟು ಜನರು ರೋಗ ಲಕ್ಷಣದಿಂದ ಗುಣಮುಖರಾಗಿದ್ದಾರೆ. ಸರಿ ಸುಮಾರು 4ರಿಂದ 5 ದಿನಗಳ ಕಾಲ ಕಾಣಿಸಿಕೊಳ್ಳುವ ಮದ್ರಾಸ್ ಐ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ. ಹಾಗಾಗಿ, ಸೋಂಕು‌ಹೊಂದಿರುವ ವ್ಯಕ್ತಿಯು ರೋಗ ಲಕ್ಷಣ ಕಂಡು ಬಂದ ಮೇಲೆ ಮನೆಯಲ್ಲಿ ಇದ್ದು, ವಿಶ್ರಾಂತಿ ಪಡೆಯುವುದು ಉತ್ತಮ. ಇದರಿಂದ ರೋಗ ಹರಡದಂತೆ ತಡೆಯಬಹುದು ಎಂದು ಕಿರಣ ಪಾಟೀಲ ಮಾಹಿತಿ ನೀಡಿದ್ದಾರೆ.

Sneha Gowda

Recent Posts

ನಿರ್ಮಾಪಕ ನನಗೆ ಬೆದರಿಕೆ ಹಾಕುತ್ತಿದ್ದಾರೆ : ʻಹೆಡ್‌ಬುಷ್‌́ ನಟಿ ಗಂಭೀರ ಆರೋಪ

ಪಂಜಾಬಿ ಬ್ಯೂಟಿ ಪಾಯಲ್‌ ರಜಪೂತ್‌ ಅವರು ನಿರ್ಮಾಪಕರ ವಿರುದ್ಧ ಹೆಡ್‌ಬುಷ್‌ ನಟಿ ಬೆದರಿಕೆ ಹಾಕುತ್ತಿದ್ದಾರೆಂದು ಹೆಡ್‌ಬುಷ್‌ ನಟಿ ಆರೋಪಿಸುತ್ತಿದ್ದಾರೆ. RX…

2 hours ago

ಟಿಪ್ಪರ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…

2 hours ago

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ…

2 hours ago

ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…

3 hours ago

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

3 hours ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

3 hours ago