ಆರೋಗ್ಯ

ವ್ಯಾಯಾಮದ ಜೊತೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿ

ಬೇಸಿಗೆಯಲ್ಲಿ ದೇಹದಿಂದ ಹೆಚ್ಚು ನೀರಿನ ಅಂಶ ಬಿಡುಗಡೆಯಾಗುವುದರಿಂದ ದೇಹಕ್ಕೆ ನೀರಿನ ಅಂಶವಿರುವ ಪದಾರ್ಥಗಳನ್ನು ನಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚಾಗಿ ಸೇರಿಕೊಳ್ಳಬೇಕು. ಅದರಲ್ಲೂ ದೇಹವನ್ನು ಹೆಚ್ಚು ದಂಡಿಸುವಾಗ ಅಥವಾ ದೇಹಕ್ಕೆ ಹೆಚ್ಚು ಶ್ರಮ ಕೊಡುವಂಥ ಕೆಲಸ ಮಾಡುವಾಗ ನಾವು ಆಹಾರದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕಾಗುತ್ತದೆ. ಬೇಸಿಗೆ ಕಾಲದಲ್ಲಿ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು.

ಬೇಸಿಗೆಯ ಕಾಲದಲ್ಲಿ ನಮ್ಮ ದೇಹದಿಂದ ಸಾಕಷ್ಟು ಪ್ರಮಾಣದ ನೀರು ಬೆವರಿನ ರೂಪದಲ್ಲಿ ಹೊರ ಹೋಗುವುದರಿಂದ ವ್ಯಾಯಾಮ ಮಾಡಿ ನಮ್ಮ ದೇಹವನ್ನು ಇನ್ನೂ ಹೆಚ್ಚಾಗಿ ದಂಡಿಸುವುದರಿಂದ ನಮ್ಮ ದೇಹದಲ್ಲಿನ ಶಕ್ತಿ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ದೇಹಕ್ಕೆ ಕೆಲಸ ಕೊಡಬೇಕಾಗುತ್ತದೆ. ಉತ್ತಮವಾದ ನ್ಯೂಟ್ರೀಷಿಯಸ್ ಭರಿತ ಆಹಾರಗಳು ವ್ಯಾಯಾಮ ಮಾಡುವ ದೇಹಕ್ಕೆ ತುಂಬಾ ಉಪಯುಕ್ತ. ಮುಖ್ಯವಾಗಿ ಪ್ರೋಟಿನ್ ತುಂಬಿರುವಂತಹ ಆಹಾರಗಳು ಶರೀರದ ಬೆಳವಣಿಗೆಯ ಜೊತೆಗೆ ಮಾಂಸಖಂಡಗಳ ಬೆಳವಣಿಗೆಗೆ ಸಹಕಾರಿಯಾಗಿದೆ, ಎಂದು ಡಾ. ಅನುರಾಧ ಹೇಳಿದರು.

ನಿತ್ಯದ ಆಹಾರ ಶೈಲಿಯಲ್ಲಿ ಮಾಂಸಹಾರಿಗಳಿಗೆ ಪ್ರೋಟಿನ್‍ನ ಮೂಲ ಮೊಟ್ಟೆ ಅಥವಾ ಕೋಳಿಯನ್ನು ಸೇವಿಸುವುದು ಉತ್ತಮ. ಮುಖ್ಯವಾಗಿ ಸಾವಯವ ಮೂಲಗಳಿಂದ ಉತ್ಪನ್ನವಾದಂತಹ ಆಹಾರಗಳು ಉತ್ತಮವಾಗಿರುತ್ತವೆ. ಸಾವಯವ ಅಲ್ಲದ, ನಮ್ಮ ದೇಹಕ್ಕೆ ಸೇರಿಸುವ ಆಹಾರ ಪದಾರ್ಥಗಳಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಕಾಣಬಹುದು. ಮುಖ್ಯವಾಗಿ ಮೊಟ್ಟೆ ಮಾಂಸಗಳಿಂದ ಹೆಣ್ಣುಮಕ್ಕಳು ಬಹು ಬೇಗ ಋತುಮತಿಯಾಗುವುದು, ಪುರುಷರಲ್ಲಿ ಗೈನಕೋಮಾಸ್ಟಿಯಾದಂತಹ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹೀಗಾಗಿ ಸಾಧ್ಯವಾದಷ್ಟು ಸಾವಯವವಾಗಿ ಸಿಗುವ ಆಹಾರ ಪದಾರ್ಥಗಳನ್ನು ದೇಹಕ್ಕೆ ಸೇರಿಸುವುದು ಉತ್ತಮ.

ವ್ಯಾಯಾಮದ ಶರೀರಕ್ಕೆ ಬಾದಮಿ, ನೆಲಕಡ್ಲೆ, ಹಾಗೂ ಬೀಜಗಳನ್ನು ಬೆಳಗಿನ ತಿಂಡಿಗೆ ಸೇರಿಸಿಕೊಳ್ಳುವುದು ಉತ್ತಮ. ನಾವು ತಿನ್ನುವ ಪ್ರತಿಯೊಂದು ಆಹಾರವು ಕೂಡ ನಮ್ಮ ಜೀರ್ಣಕ್ರಿಯೆಗೆ ಅನುಗುಣವಾಗಿರಬೇಕಾಗುತ್ತದೆ. ಇಲ್ಲವಾದಲ್ಲಿ ತಿಂದಂತಹ ಆಹಾರಗಳ ಸೈಡ್ ಎಫೆಕ್ಟ್‍ಗಳನ್ನು ಎದುರಿಸಬೇಕಾಗುತ್ತದೆ.

ತರಕಾರಿಗಳಿಲ್ಲದೆ ಯಾವುದೆ ಆಹಾರಗಳು ಪೂರ್ಣವಾಗುವುದಿಲ್ಲ. ಆರೋಗ್ಯಕರ ಶರೀರಕ್ಕೆ ತರಕಾರಿಗಳೂ ಸಹ ಒಂದು ಮುಖ್ಯ ಅಂಶವಾಗಿದೆ. ಇನ್ನು ಅಡುಗೆಯಲ್ಲಿ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಬಳಸುವುದರಿಂದ ಶರೀರದಲ್ಲಿ ಕೋಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ ಎನ್ನುವ ತಪ್ಪು ಕಲ್ಪನೆಯೊಂದಿದೆ. ಮುಖ್ಯವಾಗಿ ದೇಹಕ್ಕೆ ಸ್ವಲ್ಪ ಪ್ರಮಾಣದ ಎಣ್ಣೆ ಅಂಶ ತುಂಬ ಅವಶ್ಯಕ. ಆದರೆ ಈ ಎಣ್ಣೆ ಅಂಶಗಳು ರಾಸಾಯನಿಕ ಮುಕ್ತವಾಗಿದ್ದು ಕಲಬೆರಕೆ ಇಲ್ಲದ ಆಹಾರಗಳನ್ನು ನಮ್ಮ ದೇಹಕ್ಕೆ ಒದಗಿಸುವುದು ಉತ್ತಮ. ವ್ಯಾಯಾಮ ಮಾಡುವವರು ಹೆಚ್ಚಾಗಿ ಸಕ್ಕರೆಯ ಅಂಶವಿರುವ ಪದಾರ್ಥಗಳು ಚಾಕೊಲೇಟ್, ಕೇಕ್, ಹಾಗೂ ಮೈದಾದಿಂದ ಮಾಡಿದ ಆಹಾರ ಪದಾರ್ಥಗಳಿಗೆ ಬದಲಾಗಿ ನ್ಯೂಟ್ರಿಷಿಯಸ್‍ಯುಕ್ತ ಆಹಾರಗಳನ್ನು ಉಪಯೋಗಿಸಿಕೊಳ್ಳುವುದು ಒಳ್ಳೆಯದು.

ಹೆಚ್ಚು ವ್ಯಾಯಾಮ ಮಾಡುವವರು ಅವರ ಶರೀರದ ತೂಕಕ್ಕೆ ಅನುಗುಣವಾಗಿ ಪ್ರೋಟಿನ್‍ಗಳನ್ನು ದೇಹಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ.ಮನುಷ್ಯನ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ವ್ಯಾಯಾಮವು ಸಹ ಅಷ್ಟೇ ಮುಖ್ಯ. ಆದರೆ ಎಲ್ಲವು ಸಮ ಪ್ರಮಾಣದಲ್ಲಿದ್ದರೆ ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.

Ashika S

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

7 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

9 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

9 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

9 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

9 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

10 hours ago