Categories: ಆರೋಗ್ಯ

ದೈನಂದಿನ ಜೀವನದಲ್ಲಿ ಸರಿ ಎಂದು ತಿಳಿಯುವ ಆಹಾರ ಕ್ರಮಗಳು

ನಮ್ಮ ಜೀವನಶೈಲಿಯಲ್ಲಿ ನಾವು ಸೇವಿಸುವ ಆಹಾರಗಳು ನಮ್ಮ ದೈನಂದಿನ ಚಟುವಟಿಕೆಯ ಮೇಲೆ ಬಹಳಷ್ಟು ಪರಿಣಾಮವನ್ನು ಬೀರುತ್ತದೆ. ಸರಿಯಾದ ಆಹಾರ ಕ್ರಮಗಳು ನಮ್ಮ ದೇಹದ ಸೌಂದರ್ಯದ ಜೊತೆಗೆ ಆರೋಗ್ಯವನ್ನು ಉತ್ತಮಾವಾಗಿಸಲು ಸಹಾಯಕವಾಗುತ್ತದೆ.

ಕಾಕುಂಜೆ ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್ ವೈದ್ಯೆ ಡಾ. ಅನುರಾಧ ಅವರು ಹೇಳುವಂತೆ ನಾವು ಸರಿಯಾದ ಆಹಾರ ಕ್ರಮಗಳೆಂದು ಹಲವಾರು ತಪ್ಪು ಆಹಾರ ಕ್ರಮಗಳನ್ನು ಪಾಲಿಸುತ್ತೇವೆ. ಇವುಗಳು ನಮ್ಮ ಶರೀರದ ಜೀರ್ಣಕ್ರಿಯೆಗೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತವೆ. ಅವುಗಳಲ್ಲಿ ಮುಖ್ಯವಾಗಿ

• ಹಣ್ಣುಗಳ ಜೊತೆ ಹಾಲನ್ನು ಸೇರಿಸುವುದು: ಮಿಲ್ಕ್ ಶೇಕ್ ಗಳಲ್ಲಿ ಹಣ್ಣುಗಳ ಜೊತೆ ಹಾಲನ್ನು ಸೇರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಾವಿನ ಹಣ್ಣು, ಸ್ಟ್ರಾಬೆರಿ ಮುಂತಾದ ಹಣ್ಣುಗಳ ಜೊತೆ ಹಾಲನ್ನು ಸೇರಿಸಿ ಮಿಲ್ಕ್ ಶೇಕ್ ಮಾಡಿ ಉಪಯೋಗಿಸುವುದನ್ನು ಕಡಿಮೆ ಮಾಡಿಕೊಳ್ಳುವುದು ನಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮ.
• ಬೆಳಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಗೆ ನೀರು ಕುಡಿಯುವುದು: ಬೆಳಗ್ಗೆ ಎದ್ದ ಕೂಡಲೆ ನೀರು ಕುಡಿಯುವ ಅವಶ್ಯಕತೆ ನಮ್ಮ ದೇಹಕ್ಕೆ ಇರುವುದಿಲ್ಲ. ಬಾಯಾರಿಕೆಯಾದಾಗ ಮಾತ್ರ ನಮ್ಮ ದೇಹಕ್ಕೆ ಎಷ್ಟು ಪ್ರಮಾಣದ ನೀರು ಬೇಕು ಎಂದು ತಿಳಿದುಕೊಂಡು ಕುಡಿದರೆ ಉತ್ತಮ.

• ಅನ್ನದ ಜೊತೆ ಹಾಲು: ಉಪ್ಪು ಹಾಕಿದ ಅನ್ನದ ಜೊತೆ ಹಾಲನ್ನು ಬೆರೆಸಿ ತಿನ್ನುವುದು ಕೂಡ ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂತಹ ಆಹಾರ ಪದಾರ್ಥಗಳಿಂದ ಸಾಧ್ಯವಾದಷ್ಟು ದೂರವಿರುವುದು ಉತ್ತಮ.

• ಹಣ್ಣು ಮತ್ತು ತರಕಾರಿಗಳ ಮಿಶ್ರಣ ಮಾಡಿ ಸೇವಿಸುವುದು: ಈಗಿನ ಜೀವನ ಶೈಲಿಯಲ್ಲಿ ಹಣ್ಣು ತರಕಾರಿಗಳನ್ನು ಒಟ್ಟಿಗೆ ಮಿಶ್ರ ಮಾಡಿ ಸ್ಮೂದಿ ತಯಾರಿಸಿ ಸೇವಿಸುವುದು ಕೂಡ ಒಳ್ಳೆಯ ಅಭ್ಯಾಸವಲ್ಲ. ಹಣ್ಣು ತರಕಾರಿಗಳ ಮಿಶ್ರಣ ನಮ್ಮ ದೇಹದ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ.

• ಬೆಳಗ್ಗೆ ಎದ್ದ ಕೂಡಲೆ ಬೇಕರಿ ಪದಾರ್ಥ ತಿನ್ನುವುದು: ಸಮಯವಿಲ್ಲದ ಈ ಜಗತ್ತಿನಲ್ಲಿ ಎಲ್ಲವು ಫಾಸ್ಟ್ , ಹಾಗೇನೆ ತಿಂಡಿಯೂ ಕೂಡ ಬೇಗನೆ ತಯಾರಾಗಬೇಕು ಎನ್ನುವ ಸಲುವಾಗಿ ಮೈದಾದಿಂದ ಮಾಡಿದ ಬೇಕರಿ ತಿಂಡಿಗಳನ್ನು ತಿನ್ನುವುದು. ಉದಾ: ಬ್ರೆಡ್, ಬನ್, ಪರೋಟ ಇತ್ಯಾದಿಗಳು ನಮ್ಮ ಜೀರ್ಣ ಕ್ರಿಯೆಯಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ.

• ಅಗತ್ಯವಿಲ್ಲದ ಆಹಾರ ಸೇವನೆ: ಹೆಲ್ತ್ ಅನ್ನುವ ಹೆಸರಿನಲ್ಲಿ ಸುಖಾ ಸುಮ್ಮನೆ ಅಲೋವೆರಾ ಜೂಸ್, ನೆಲ್ಲಿಕಾಯಿ ಜೂಸ್, ಅಮೃತಬಳ್ಳಿಯ ಜೂಸ್ ಹೀಗೆ ಹಲವಾರು ತರಹದ ಜೂಸ್ ಗಳನ್ನು ಕುಡಿಯುವುದನ್ನು ಕೂಡ ಕಡಿಮೆ ಮಾಡಿಕೊಳ್ಳಬೇಕು.
ಅಗ ತ್ಯವಿದ್ದಾಗ ಮಾತ್ರ ಇವುಗಳ ಸೇವನೆ ನಮ್ಮ ದೇಹಕ್ಕೆ ಉಪಯುಕ್ತ.

• ಊಟದ ನಂತರ ಹಣ್ಣುಗಳ ಸೇವನೆ: ಊಟದ ನಂತರ ಹಣ್ಣುಗಳನ್ನು ಸೇವಿಸುವುದರ ಬದಲು ಊಟದ ಮುಂಚೆ ಸೇವಿಸಿದರೆ ನಮ್ಮ ಹೊಟ್ಟೆ ಎಷ್ಟು ಪ್ರಮಾಣದಲ್ಲಿ ಆಹಾರ ಬೇಕು ಅಷ್ಟು ಪ್ರಮಾಣದಲ್ಲಿ ಮಾತ್ರ ಸೇರುತ್ತದೆ. ಊಟದ ನಂತರ ಸೇವಿಸುವುದು, ತುಂಬಿದ ಹೊಟ್ಟೆಯನ್ನು ಮತ್ತಷ್ಟು ತುಂಬಿಸುತ್ತದೆ.

• ಮಲಗುವ ಮುಂಚೆ ಹಾಲು ಕುಡಿಯುವುದು: ಇದು ಉತ್ತಮ ಅಭ್ಯಾಸವಲ್ಲ. ಸಾಧ್ಯವಾದಷ್ಟು 6 ಗಂಟೆಯ ಮುಂಚಿತವಾಗಿ ಹಾಲು ಕುಡಿಯುವುದು ಉತ್ತಮವಾಗಿರುತ್ತದೆ.

• ರಾತ್ರಿ ತಡವಾಗಿ ಊಟ ಮಾಡುವುದು: ರಾತ್ರಿ ತಡವಾಗಿ ಊಟ ಮಾಡಿ ಮಲಗುವುದರಿಂದ ಜೀರ್ಣಕ್ರಿಯೆಗೆ ಬಹಳಷ್ಟು ತೊಂದರೆಗಳಾಗುತ್ತವೆ. ಇದರಿಂದ ನಮ್ಮ ದೇಹಕ್ಕೆ ಗ್ಯಾಸ್ಟ್ರಿಕ್‍ನಂತಹ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ ರಾತ್ರಿಯ ಸಮಯದಲ್ಲಿ ಸಾಧ್ಯವಾದಷ್ಟು ಮಿತ ಆಹಾರ ಸೇವಿಸುವುದು ಉತ್ತಮ.

ನಮ್ಮ ದೈನಂದಿನ ಜೀವನದಲ್ಲಿ ಆಹಾರಗಳನ್ನು ಯಾವ ರೀತಿಯಾಗಿ ಎಷ್ಟು ಪ್ರಮಾಣದಲ್ಲಿ ಸೇವಿಸ ಬೇಕು ಹಾಗೂ ಆಹಾರ ಸೇವನೆಯ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಆಹಾರ ಸೇವಿಸುವುದು ಉತ್ತಮ.

Ashika S

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

2 hours ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

2 hours ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

2 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

3 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

3 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

3 hours ago