Categories: ಆರೋಗ್ಯ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?

ಮನುಷ್ಯನ ಅಂಗಾಂಗಗಳಲ್ಲಿ ಕಣ್ಣು ಬಹುಮುಖ್ಯವಾಗಿದ್ದು, ಕಣ್ಣಿಲ್ಲಾಂದ್ರೆ ಜಗತ್ತೇ ಶೂನ್ಯವಾಗಿ ಬಿಡುತ್ತದೆ. ಇಂತಹ ಕಣ್ಣನ್ನು ನಾವೆಲ್ಲರೂ ಜತನದಿಂದ ನೋಡಿಕೊಳ್ಳಬೇಕಿದೆ.

ಕಣ್ಣಿನ ಮಹತ್ವ ಅರಿತು ಅಕ್ಟೋಬರ್ 8ರಂದು ವಿಶ್ವ ದೃಷ್ಠಿ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭ ನಾವು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಕಾಳಜಿ ವಹಿಸುವುದು ಆಗತ್ಯವಿದೆ.

ದಿನ ನಿತ್ಯದ ನಮ್ಮ ಕಾರ್ಯ ಚಟುವಟಿಕೆಯ ನಡುವೆಯೂ ಒಂದಷ್ಟು ಜಾಗ್ರತೆ ಹಾಗೂ ಮತ್ತೊಂದಷ್ಟು ಕ್ರಮಗಳನ್ನು ಅನುಸರಿಸಿದರೆ ಕಣ್ಣನ್ನು ನಾವು ಯಾವುದೇ ತೊಂದರೆಯಾಗದಂತೆ ರಕ್ಷಿಸಿಕೊಳ್ಳಬಹುದಲ್ಲದೆ, ಕಣ್ಣನ್ನು ಬಾಧಿಸುವ ಕೆಲವು ತೊಂದರೆಗಳಿಂದಲೂ ಮುಕ್ತರಾಗ ಬಹುದಾಗಿದೆ.

ಇಷ್ಟಕ್ಕೂ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಏನು ಮಾಡಬೇಕೆಂದರೆ, ಮೊದಲಿಗೆ ಕಣ್ತುಂಬ ನಿದ್ದೆ ಮಾಡಬೇಕು. ನಾವು ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಮಾಡುವುದರಿಂದ ಕಣ್ಣಿನ ಕೆಳಗೆ ಚರ್ಮದಲ್ಲಿನ ಕಣಗಳು ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಅದು ಬಿಟ್ಟು ಅನಾವಶ್ಯಕವಾಗಿ ತಡ ರಾತ್ರಿವರೆಗೂ ಮೊಬೈಲ್, ಟಿವಿ ನೋಡಿ ಕಣ್ಣಿಗೆ ಒತ್ತಡ ನೀಡದೆ, ಪ್ರತಿಯೊಬ್ಬರು ಅಗತ್ಯ ನಿದ್ದೆಯನ್ನು ಮಾಡಲೇ ಬೇಕಾಗುತ್ತದೆ. ಅಗತ್ಯ ನಿದ್ದೆ ಮಾಡದೆ ಹೋದರೆ ಮಾರನೆಯ ದಿನ  ಹೆಚ್ಚಿನ ಬಳಲಿಕೆ ಕಾಣಿಸುವುದೇ ಕಣ್ಣಿನಲ್ಲಿ ಎಂದರೆ ತಪ್ಪಾಗಲಾರದು.

ಕಣ್ಣಿನ ಆರೋಗ್ಯ ನೀಡುವ ತರಕಾರಿ ಕ್ಯಾರೆಟ್  ಹೆಚ್ಚು ತಿನ್ನುವುದರಿಂದ ಕಣ್ಣಿನ ನೋಟ ಚುರುಕುಗೊಳ್ಳುತ್ತದೆ. ಕ್ಯಾರೆಟ್‍ನಲ್ಲಿ ಕಣ್ಣಿಗೆ ಅಗತ್ಯವಾದ ವಿಟಮಿನ್ ‘ಎ’ ಇರುತ್ತದೆ. ವಿಟಮಿನ್ ‘ಬಿ’ ಇರುವ ಸೊಪ್ಪು ತರಕಾರಿಗಳು, ಮಾವಿನಕಾಯಿ, ಕೋಳಿಮೊಟ್ಟೆ ಸಹ ಒಳ್ಳೆಯದು. ಕಣ್ಣಿನ ಸುತ್ತ ಇರುವ ಅತಿ ಸೂಕ್ಷ್ಮವಾದ ಚರ್ಮ ಒತ್ತಡಕ್ಕೆ ವಾತಾವರಣದಲ್ಲಿನ ಮಾಲಿನ್ಯದ ಪ್ರಭಾವ ಕಣ್ಣಿನ ಮೇಲುಂಟಾಗಿ ತೊಂದರೆಗಳಾಗುತ್ತವೆ  ಯಾದರೂ ವ್ಯಾಯಾಮ, ಒಳ್ಳೆಯ ಆಹಾರವನ್ನು ಸೇವಿಸುವುದು ಅಷ್ಟೇ ಮುಖ್ಯ.

ಸಾಮಾನ್ಯವಾಗಿ ಕಣ್ಣಿನ ಸುತ್ತಲಿನ ಪ್ರದೇಶ ಸ್ವಲ್ಪ ಲಿಂಫಾಟಿಕ್ ದ್ರವದಿಂದ ಉಬ್ಬುತ್ತದೆ. ಇದಕ್ಕೆ ತಲೆಯ ಕೆಳಗೆ ಸರಿಯಾಗಿ ದಿಂಬುಗಳನ್ನಿಟ್ಟುಕೊಂಡು ಮಲಗುವುದು ಒಳ್ಳೆಯದು. ವಯಸ್ಸಾದಂತೆ ಕಣ್ಣಿನ ಕೆಳಗೆ ಮೂಡುವ ಕೊಬ್ಬಿನಿಂದಾಗಿ ಈ ಚೀಲಗಳು ಬೆಳೆಯುತ್ತವೆ. ಇದನ್ನು ಮೇಕಪ್‍ನಿಂದ ಕನ್‍ಸೀಲರ್ ಬಳಸಿ ಮುಚ್ಚಿ ಹಾಕಬಹುದಾಗಿದೆ.

ಬಹಳಷ್ಟು ಮಂದಿಗೆ ಪಿಗ್ಮೆಂಟ್ಸ್‍ನಿಂದಾಗಿ ಸಹ ಕಣ್ಣಿನ ಕೆಳಗೆ ವಲಯಗಳೇರ್ಪಡುತ್ತವೆ. ಮೆಲಾನಿನ್ ಪಿಗ್ಮೆಂಟ್ಸ್ ಈ ಪ್ರದೇಶದಲ್ಲಿ ಸೇರಿಕೊಳ್ಳುವುದರಿಂದಲೇ ಹೀಗಾಗುತ್ತದೆ. ಕಣ್ಣಿನ ಕೆಳಗೆ ಸೌತೆಕಾಯಿ ಬಳಸುವುದರಿಂದಲೂ ಒಳ್ಳೆಯದಾಗುತ್ತದೆ.

ಕೆಲವರ ಕಣ್ಣುಗಳಲ್ಲಿ ಕೆಂಪು ಗೆರೆಗಳು ಇರುತ್ತವೆ. ಇದಕ್ಕೂ ಸಹ ಸೌತೆಕಾಯಿಯೇ ದಿವ್ಯ ಔಷಧಿ. ಸೌತೆಕಾಯಿ ರಕ್ತನಾಳಗಳನ್ನು ತಂಪಾಗಿಡುತ್ತದೆ. ಜತೆಗೆ ಹೆಚ್ಚು ಉಪ್ಪು ಇರುವ ಆಹಾರ ಸೇವಿಸಬೇಕು. ಆಲ್ಕೋ ಹಾಲ್ ಸೇವನೆ ಕಡಿಮೆ ಮಾಡಬೇಕು. ಇದರಿಂದ ಕಣ್ಣಿನ ಕೆಳಗೆ ದ್ರವಗಳು ಸಂಗ್ರಹವಾಗುವುದಿಲ್ಲ.

ಕಣ್ಣಿನ ರಕ್ಷಣೆಗೆ ಕೆಲವು ಜಾಗ್ರತೆಗಳನ್ನು ನಾವು ವಹಿಸಿಕೊಳ್ಳವುದು ಒಳ್ಳೆಯದು. ಓದುವಾಗ ಅಗತ್ಯ ಬೆಳಕಿರುವಂತೆ ನೋಡಿಕೊಳ್ಳಬೇಕು. ಮಂದ ಬೆಳಕಿನಲ್ಲಿ ಓದುವ ಸಾಹಸ ಮಾಡಬಾರದು. ಅಗತ್ಯ ಬಿದ್ದಾಗಲೆಲ್ಲಾ ಕನ್ನಡಕ ಬಳಸುವುದು ಒಳ್ಳೆಯದು. ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕುಳಿತುಕೊಳ್ಳುವದರಿಂದ ಕಣ್ಣಿಗೆ ಹಾನಿಯಾಗುವುದಿಲ್ಲ ಆದರೆ ಹೆಚ್ಚು ಹೊತ್ತು ಬೆಳಕು ಬೀರುವ ಸ್ಕ್ರೀನ್ ಕಡೆ ನೋಡುವುದರಿಂದ ಕಣ್ಣುಗಳು ಬೇಗ ಆಯಾಸಗೊಳ್ಳುತ್ತವೆ. ಹೆಚ್ಚು ಸಮಯ ಸ್ಕ್ರೀನ್ ಮುಂದೆ ಕೆಲಸಮಾಡುವಾಗ ಮಧ್ಯೆ ಮಧ್ಯೆ ಕಣ್ಣಿಗೆ ವಿಶ್ರಾಂತಿ ನೀಡುವುದು, ಆಗಾಗ ಅತ್ತ ಇತ್ತ ನೋಡುವುದು ಒಳ್ಳೆಯದು. ಕಣ್ಣಿನ ಸಮಸ್ಯೆ ಉಂಟಾದಾಗ  ಉದಾಸೀನ ತೋರದೆ, ಸ್ವಯಂ ಔಷಧಿ ಮಾಡಿಕೊಳ್ಳದೆ ಕೂಡಲೇ ಕಣ್ಣಿನ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದನ್ನು ಮರೆಯಬಾರದು.

Desk

Recent Posts

ಮಲೆ ಮಾದಪ್ಪನಿಗೆ ಬೆಳ್ಳಿ ಆರತಿ ತಟ್ಟೆ ನೀಡಿದ ದಾನಿ : ಹೇಗಿದೆ ಗೊತ್ತಾ?

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ನಾಗಮಣಿ.ಎಂ ಮತ್ತು ಕುಟುಂಬ 01 ಕೆಜಿ…

2 mins ago

ಭಯಾನಕ ದೃಶ್ಯ : ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಬೆಂಕಿ ತಗುಲಿ 10 ಮಂದಿಗೆ ಗಾಯ

  ಬೈಕ್ ಸ್ಫೋಟಗೊಂಡು ಸುಮಾರು ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ಭಯಾನಕ ಘಟನೆ…

18 mins ago

ಗುಂಡ್ಲುಪೇಟೆ ಪೊಲೀಸರಿಂದ ಕಾರ್ಯಾಚರಣೆ : ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ

ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಪೊಲೀಸರು ದಾಳಿ 2 ಕೆ.ಜಿ‌ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು…

39 mins ago

13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ : ಪೊಲೀಸ್‌ ಅಲರ್ಟ್‌

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ ಭಾನುವಾರ ಇ-ಮೇಲ್‌ ಮೂಲಕ ಬೆದರಿಕಯೊಂದು ಬಂದಿದ್ದು ಅದರಂತೆ ದೇಶಾದ್ಯಂತ 13 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ…

46 mins ago

ಮೂರು ಕೊಲೆ ಕೇಸ್‌ : ಬೆಳ್ಳಂ ಬೆಳಗೆ ಆರೋಪಿ ಕಾಲಿಗೆ ಪೊಲೀಸ್‌ ಗುಂಡೇಟು

ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್‌ ಕಾಲಿಗೆ…

1 hour ago

ಅಮೇರಿಕಾದಿಂದ ತಿರಸ್ಕೃತಗೊಂಡ ಎಂಡಿಎಚ್​ ಮಸಾಲ : ಕಾರಣ ಇಲ್ಲಿದೆ

ಅಮೇರಿಕಾದಲ್ಲಿ ಎಂಡಿಎಚ್​ ಸಾಂಬಾರ್ ಮಸಾಲ ಪದಾರ್ಥಗಳು ತಿರಸ್ಕೃತಗೊಂಡಿವೆ. ಈ ಮಸಾಲಗಳಲ್ಲಿ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ ಕಂಡುಬಂದಿದ್ದರಿಂದ ಅಮೆರಿಕದ ಆಹಾರ ಹಾಗೂ ಔಷಧ…

2 hours ago