Categories: ಶಿಕ್ಷಣ

ಕರ್ನಾಟಕ ರಾಜ್ಯ ಮುಕ್ತ ವಿವಿಯ ಹಗರಣ ಬಯಲು ಮಾಡಿದ ಪ್ರಾಧ್ಯಾಪಕರಿಗೆ ಶಿಕ್ಷೆ

ಕೆ.ಎಸ್.ಓ.ಯು. ಭಾರೀ ಹಗರಣಗಳು ನಡೆಯುತ್ತಿದ್ದು ಇದೀಗ ಹಗರಣಗಳ ಬಗ್ಗೆ ಅಲ್ಲಿನ‌ ಸಿಬ್ಬಂದಿಯೇ ದಾಖಲೆ ಸಮೇತ ಎಳೆ‌ಎಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದರು. ಈಗ ಅಂತಹ ಪ್ರಾಧ್ಯಾಪಕರಿಗೆ ಅಮಾನತು ಶಿಕ್ಷೆ ವಿಧಿಸಿದ್ದು, ಅದಷ್ಟೆ ಅಲ್ಲದೆ ಅವರ ಚೇಂಬರ್ ಗೆ ರಾತ್ರೋರಾತ್ರಿ ಎರಡೆರಡು ಬೀಗ ಜಡಿದಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ(VV) ಯಲ್ಲಿ ‌ಕೆಲ ದಿನಗಳ ಹಿಂದೆ ವಿವಿಯ ಬಳ್ಳಾರಿ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವೇಳೆ ವಿವಿಯಲ್ಲಿಯೇ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಸಾರ್ವಜನಿಕ ಆಡಳಿತ ವಿಭಾಗದ ಮುಖ್ಯಸ್ಥರಾಗಿರುವ ಜಗದೀಶ್ ಬಾಬು ಮಾಧ್ಯಮಗಳ ಮುಂದೆ ವಿವಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ್ದರು.

ಆದರೆ ಅವರನ್ನು ದಾಖಲೆ ಬಿಡುಗಡೆ ಮಾಡಿದರು -ವಿವಿ ವಿರುದ್ಧ ಮಾತನಾಡಿದರು’ ಅನ್ನೋ ಕಾರಣಕ್ಕೆ ನೋಟಿಸ್ ನೀಡಿ ಅಮಾನತು ಮಾಡಲಾಗಿದೆ. ಅದಷ್ಟೆ ಅಲ್ಲದೆ ಅವರ ಚೇಂಬರ್ ಗೂ ರಾತ್ರೋರಾತ್ರಿ ಮತ್ತೊಂದು ಬೀಗ ಹಾಕಲಾಗಿದೆ. ಸದ್ಯ ಜಗದೀಶ್ ಬಾಬು ಅವರು ಪ್ರತಿದಿನ ವಿವಿಯ ತಮ್ಮ ಕೊಠಡಿ ಬಳಿಗೆ ಬಂದು ಹೋಗುತ್ತಿದ್ದಾರೆ. ಮತ್ತೊಬ್ಬರಿಗೆ ವಿಭಾಗದ ಮುಖ್ಯಸ್ಥ ಸ್ಥಾನ ನೀಡಿ ತೆರವಾಗಬೇಕು ಎಂದು ಕೂಡ ನೋಟಿಸ್ ನೀಡಲಾಗಿದೆ. ಮತ್ತೊಬ್ಬರಿಗೆ ಚಾರ್ಜ್ ಕೊಡಲು ನಾನು ತಯಾರಿದ್ದೇನೆ, ಅದನ್ನು ಸ್ವೀಕಾರ ಮಾಡಲು ಯಾರೂ ತಯಾರಿಲ್ಲವಂತೆ!

ಇನ್ನು ಇದಷ್ಟೆ ಅಲ್ಲದೆ ನಾನು ಮಾಡಿದ ಆರೋಪಗಳಿಗೆ ದಾಖಲೆ ಇದೆ. ನಾನು ಕಾಯಂ ನೌಕರರ ಸಂಘದ ಅಧ್ಯಕನಾಗಿದ್ದೇನೆ. ಒಬ್ಬ ಅಧ್ಯಕ್ಷನಾಗಿ ನಾನು‌ ಮಾತಮಾಡಿದ್ದೇನೆ. ನಾನು ವಿವಿ ಹಿತದೃಷ್ಟಿಯಿಂದ ಮಾತನಾಡಿದ್ದೇನೆ. ನನ್ನ ಮೇಲೆ ಕ್ರಮ ತೆಗೆದುಕೊಂಡವರು ಪೇಪರ್ ಮಾರಿದವರ ಮೇಲೆ ಏಕೆ ಕ್ರಮ ಇಲ್ಲ ಅಂತ ಪ್ರಶ್ನೆ ಮಾಡಿದ್ದಾರೆ.

Gayathri SG

Recent Posts

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಯಾಕೆ ಒಪ್ಪಿಗೆ ನೀಡಿದ್ದು?

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ   ಅಮೆರಿಕ ಸೇರಿದಂತೆ ಹಲವು ಯೂರೋಪಿಯನ್ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು…

13 seconds ago

ಬೆಂಗಳೂರಿನಲ್ಲಿ ಭಾರಿ ಮಳೆ; ಆರ್​ಸಿಬಿ- ಡೆಲ್ಲಿ ಪಂದ್ಯ ರದ್ದು

ಐಪಿಎಲ್ 2024ರ 62 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಇಂದು ಸಂಜೆ…

15 mins ago

ದೇಶದ ಸಂಪೂರ್ಣ ಸಂಪತ್ತನ್ನು ಶ್ರೀಮಂತರಿಗೆ ಕೊಟ್ಟಿದ್ದಾರೆ ಮೋದಿ: ಪ್ರಿಯಾಂಕಾ ವಾಗ್ದಾಳಿ

ಇಲ್ಲಿನ ಕಾಂಗ್ರೆಸ್​ ಲೋಕಸಭಾ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ 'ಕೈ' ನಾಯಕ ರಾಹುಲ್ ಗಾಂಧಿ ಪರ ಪ್ರಚಾರ ಮಾಡಲು ಆಗಮಿಸಿದ ಅವರ…

41 mins ago

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ.  ಗುಟ್ಕಾ, ಎಲೆಅಡಿಕೆ, ತಂಬಾಕು ಅಗೆಯುವುದರಿಂದ, ಬೀಡಿ, ಸಿಗರೇಟ್ ಸೇದುವುದರಿಂದ ಹಲ್ಲುಗಳು ನೈಜ ಹೊಳಪು…

56 mins ago

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ವ್ಯಕ್ತಿ ಸಾವು

ವಿಶ್ವದಲ್ಲೇ ಮೊದಲ ಬಾರಿಗೆ ಹಂದಿ ಕಿಡ್ನಿ ಕಸಿ ಮಾಡಿಸಿಕೊಂಡಿದ್ದ 62 ವರ್ಷದ ರಿಚರ್ಡ್​ ಸ್ಲಾಯ್​​ಮನ್ ನಿಧನರಾಗಿದ್ದಾರೆ. ಕಳೆದ ಮಾರ್ಚ್​​ನಲ್ಲಿ ಅವರು…

1 hour ago

ಎಸ್‌ಐಟಿಯವರು ಅಪರಾಧಿಗಳನ್ನ ಬಂಧಿಸುತ್ತಿಲ್ಲ: ಬಸವರಾಜ ಬೊಮ್ಮಾಯಿ

ಪ್ರಜ್ವಲ್ ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿ ಇಲ್ಲ. ಎಸ್‌ಐಟಿಯ ತನಿಖೆಯ ದಿಕ್ಕು ತಪ್ಪುತ್ತಿದೆ. ಅಪರಾಧಿಗಳನ್ನ ಎಸ್‌ಐಟಿಯವರು ಬಂಧಿಸುತ್ತಿಲ್ಲ. ಎಂದು…

2 hours ago