Categories: ಕ್ರೈಮ್

ಉತ್ತರ ಪ್ರದೇಶ: ಢಾಬಾಗೆ ಟ್ರಕ್​ ನುಗ್ಗಿ ಮೂವರು ಸಾವು

ಉತ್ತರ ಪ್ರದೇಶ: ಢಾಬಾಗೆ ಟ್ರಕ್​ ನುಗ್ಗಿದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಮೂರು ಮಂದಿಗೆ ಗಂಭೀರ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಟ್ರಕ್​ ಹೋಗುತ್ತಿದ್ದ ಲೇನ್​ನಿಂದ ಬೇರೆಡೆಗೆ ತಿರುಗಿ ಢಾಬಾಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ. ಟ್ರಕ್ ಜಾರ್ಖಂಡ್ ನಂಬರ್ ಪ್ಲೇಟ್ ಹೊಂದಿದೆ ಎಂದು ಇಟಾವಾ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಸಂಜಯ್ ಕುಮಾರ್ ವರ್ಮಾ ಅವರು ಹೇಳಿದರು.

ಮೃತಪಟ್ಟ ಮೂವರ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ. ಆತ ಮದ್ಯದ ಅಮಲಿನಲ್ಲಿದ್ದ ಎಂಬುದು ತಿಳಿದು ಬಂದಿದೆ.

ಶವಗಳನ್ನು ಅವಶೇಷಗಳಡಿಯಿಂದ ಹೊರತೆಗೆಯಲು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದೆ. ಬುಲ್ಡೋಜರ್​ನಿಂದ ಢಾಬಾದ ಇಟ್ಟಿಗೆಗಳು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸಲಾಗಿದೆ.

 

Ashika S

Recent Posts

ಮತದಾರನಿಗೆ ಹೊಡೆಯಲು ಹೋಗಿ ಕಪಾಳಕ್ಕೆ ಹೊಡಿಸಿಕೊಂಡ ಶಾಸಕ; ವಿಡಿಯೋ ವೈರಲ್‌

ಕಳೆ ದಿನ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಿತು. ಈ ವೇಳೆ ಆಡಳಿತಾರೂಢ ವೈಎಸ್‌ಆರ್‌ಸಿಪಿ ಶಾಸಕರೊಬ್ಬರು ಮತದಾರನ ಮೇಲೆ ಹಲ್ಲೆ…

9 mins ago

ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ಆಗಿರುವ ತೊಂದರೆ ಬಗ್ಗೆ ಎಸ್ಪಿಗೆ ಮನವಿ

ಈ ಬಾರಿಯ ಲೋಕಸಭಾ ಚುನಾವಣೆಯ ಮತದಾನ ಸಂದರ್ಭ ಮತಗಟ್ಟೆಗಳಲ್ಲಿ ಮಾಧ್ಯಮದವರಿಗೆ ಆಗಿರುವ ತೊಂದರೆ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ…

13 mins ago

ಕಾರ್ಯಕರ್ತರ ಮುಂದೆ ಕಣ್ಣೀರಿಟ್ಟ ಹೆಚ್‌.ಡಿ ರೇವಣ್ಣ

ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಹೆಚ್‌.ಡಿ ರೇವಣ್ಣ ಅವರು ನೇರವಾಗಿ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ತಂದೆ-ತಾಯಿ ಜೊತೆ…

28 mins ago

ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ ವೇಳೆ ಪಕ್ಕದಲ್ಲಿ ಕುಳಿತಿರುವ ಗಡ್ಡಧಾರಿ ಯಾರು?

ಪ್ರಧಾನಿ ಮೋದಿ ಉತ್ತರ ಪ್ರದೇಶದ ವಾರಣಾಸಿಯಿಂದ ಮೂರನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೋದಿ ನಾಮಿನೇಶನ್‌ ಮಾಡುವ…

28 mins ago

ಮೋದಿಗೆ ಚುನಾವಣೆ ಸ್ಪರ್ಧೆಯಿಂದ ನಿಷೇಧ ಹೇರುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ

ದ್ವೇಷ ಭಾಷಣ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆಯಲ್ಲಿ ಸ್ಪರ್ಧೆಯಿಂದ ನಿಷೇಧ ಹೇರುವಂತೆ…

43 mins ago

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವ್ಲಾಖಾಗೆ ಜಾಮೀನು

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಗೌತಮ್ ನವ್ಲಾಖಾಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಕಳೆದ ನಾಲ್ಕು ವರ್ಷಗಳಿಂದ…

1 hour ago