Categories: ಕ್ರೈಮ್

ಮನೆ ನಿರ್ಮಿಸಿಕೊಡುವುದಾಗಿ ಮಹಿಳೆಗೆ ಹಿಂದೂ ಸಂಘಟನೆ ಹೆಸರು ಬಳಸಿಕೊಂಡು ದೋಖಾ

ಸುಳ್ಯ: ಬಡ ಮಹಿಳೆಯೊಬ್ಬರು ಕೂಡಿಟ್ಟಿದ್ದ ಹಣವನ್ನು ಬಿಜೆಪಿ ಮುಖಂಡರೊಬ್ಬರು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಸುಳ್ಯ ಜಾಲ್ಸೂರಿನ ಕುಂದ್ರುಕೋಡಿಯ ಲಕ್ಷ್ಮೀ ಎಂಬುವರಿಗೆ ಸುಳ್ಯದ ಲತೇಶ್ ಗುಂಡ್ಯ ಉಚಿತವಾಗಿ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿ ವಂಚನೆ ಮಾಡಿದ್ದಾರೆ.

ಹಿಂದೂ ಸಂಘಟನೆಗಳ ಹೆಸರನ್ನು ಬಳಸಿಕೊಂಡು ಲಕ್ಷ್ಮಿ ಅವರಿಗೆ ಮನೆ ನಿರ್ಮಿಸಿಕೊಡುವುದಾಗಿ ಲತೇಶ್‌ ಭರವಸೆ ನೀಡಿದ್ದ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಲಕ್ಷ್ಮೀ ಅವರಿಂದಲೇ 52 ಸಾವಿರ ಹಣ ಪಡೆದು ವಂಚಿಸಿದ್ದಾನೆ ಎಂಬುದು ಮಹಿಳೆ ಆರೋಪ.

ಲಕ್ಷ್ಮಿ ಅವರು ಈ ಮೊದಲು ಜೋಪಡಿಯೊಂದರಲ್ಲಿ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದರು. ಈ ಸಂದರ್ಭ ಲತೇಶ್‌ ಗುಂಡ್ಯ ಸಂಘಟನೆ ಸಹಯೋಗದಲ್ಲಿ ಹೊಸ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದ. ಬಳಿಕ ಹಣ ನಮ್ಮಲ್ಲಿ ಕಡಿಮೆ ಇರುವುದಾಗಿ ಹೇಳಿ ಲಕ್ಷ್ಮೀ ಅವರಿಂದಲೇ 10 ಸಾವಿರ ಹಣ ಪಡೆದಿದ್ದ. ಇದಾದ ಬಳಿಕ ಹತ್ತು ಸಾವಿರ ಸಾಕಾಗುವುದಿಲ್ಲ, ನೀವು ಗ್ರಾ.ಪಂ. ಗೆ ಅರ್ಜಿ ಹಾಕಿ ಮಂಜೂರಾಗಿರುವ ಹಣವನ್ನು ನೀಡಿ ಎಂದು ಹೇಳಿದ್ದರು.

ಇದನ್ನೇ ನಂಬಿದ ಬಡ ಮಹಿಳೆ ಲಕ್ಷ್ಮೀ ಮತ್ತೆ 42 ಸಾವಿರದ 800 ರೂ. ಹಣವನ್ನೂ ಲತೇಶ್ ಗುಂಡ್ಯ ಅವರಿಗೆ ನೀಡಿದ್ದಾರೆ. ಇಷ್ಟೆಲ್ಲ ಹಣ ನೀಡಿದ ಬಳಿಕ ಮನೆ ನಿರ್ಮಿಸಿ ಕೊಡದೆ ಫೋನ್ ಸಂಪರ್ಕಕ್ಕೂ ಸಿಗದೆ ವಂಚಿಸಿದ್ದಾನೆ. ಅತ್ತ ಹೊಸ ಮನೆ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಹೇಳಿ ಹಳೆಯ ಜೋಪಡಿಯನ್ನು ಕೆಡವಿಬಿಡಿ ಎಂದು ಲತೇಶ್‌ ಹೇಳಿದ್ದು, ಅತ್ತ ಜೋಪಡಿಯೂ ಇಲ್ಲ ಇತ್ತ ಹೊಸ ಮನೆಯೂ ಇಲ್ಲ ಎಂಬ ಸ್ಥಿತಿ ಎದುರಾಗಿದೆ.

ಇದೀಗ ಆತನಲ್ಲಿ ಕೇಳಿದರೆ ಬಾಡಿಗೆ ಮನೆಯಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಲತೇಶ್‌ ಗುಂಡ್ಯ ವಂಚನೆ ಕುರಿತು ಮಹಿಳೆ ಲಕ್ಷ್ಮಿ ಇದೀಗ ಹಿಂದು ಮುಖಂಡರಿಗೆ ದೂರು ನೀಡಿದ್ದಾರೆ. ಅಲ್ಲದೆ ನ್ಯಾಯ ಒದಗಿಸಿಕೊಡುವಂತೆ ಮಾಧ್ಯಮದವರನ್ನು ಕೇಳಿಕೊಂಡಿದ್ದಾರೆ. ಈ ಲತೇಶ್‌ ಕಳೆದ ವಿಧಾನಸಭೆ ಚುನಾವಣೆ ವೇಳೆ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಂಎಲ್ ಎ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂಬ ವಿಚಾರ ತಿಳಿದು ಬಂದಿದೆ.

Ashika S

Recent Posts

ಮಕ್ಕಳು ಬೇಸಿಗೆ ರಜೆಯಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು : ಶಿಕ್ಷಕ ಬಾಲಾಜಿ

ಬೇಸಿಗೆ ರಜೆಯಲ್ಲಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಸಂಸ್ಥೆಗಳ ಬೇಸಿಗೆ ತರಬೇತಿ ಶಿಬಿರಗಳಿಗೆ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕಳಿಸುವುದು ಸಾಮಾನ್ಯ.…

4 mins ago

ಚರಂಡಿ ಸ್ವಚ್ಛಗೊಳಿಸುವಂತೆ ಸಾರ್ವಜನಿಕರ ಆಗ್ರಹ

ಪಟ್ಟಣದ ವಿವಿಧ ವಾರ್ಡ್‌ಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಧಿಕಾರಿಗಳ…

16 mins ago

ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​ : ಕಾರಣ ಇಲ್ಲಿದೆ

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು…

28 mins ago

ಹಾಡಹಗಲೇ ಮನೆಗೆ ನುಗ್ಗಿ‌ದ ದುಷ್ಕರ್ಮಿಗಳು : ಜೀಪ್​ಗೆ ಬೆಂಕಿ ಹಚ್ಚಿ ಪರಾರಿ

ಹಾಡಹಗಲೇ ದುಷ್ಕರ್ಮಿಗಳು ಮನೆಗೆ ನುಗ್ಗಿ‌ ಟಿವಿ, ಫ್ರಿಡ್ಜ್ ಹಾಳು ಮಾಡಿರುವ ಘಟನೆ ಪಂಚಾಕ್ಷರಿ ನಗರದಲ್ಲಿ ನಡದಿದೆ.

31 mins ago

ಮ್ಯಾಗಿ ತಿಂದು 10 ವರ್ಷದ ಬಾಲಕ ಸಾವು : 6 ಮಂದಿ ಅಸ್ವಸ್ಥ

ಉತ್ತರ ಪ್ರದೇಶದ ಪಿಲಿಬಿತ್‌ ಜಿಲ್ಲಯಲ್ಲಿ ಒಂದು ದಾರುಣ ಘಟನೆ ನಡೆದಿದ್ದು 10 ವರ್ಷದ ಅಪ್ರಾಪ್ತ ಬಾಲಕ ಅನ್ನದೊಂದಿಗೆ ಮ್ಯಾಗಿ ತಿಂದ…

46 mins ago

ಪಲ್ಟಿಯಾದ ಲಾರಿಯಲ್ಲಿ 7 ಕೋ. ಹಣ ಪತ್ತೆ: ವಶಕ್ಕೆ ಪಡೆದ ಪೊಲೀಸರು

ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

1 hour ago