News Karnataka Kannada
Saturday, April 20 2024
Cricket
ಕ್ರೈಮ್

ಚಾಕುವಿನಿಂದ ಇರಿದು ಸೋದರ ಮಾವನನ್ನು ಕೊಲೆಗೈದ ಅಳಿಯ

Murdeder
Photo Credit : News Kannada

ಹಾಸನ: ಚಾಕುವಿನಿಂದ ಇರಿದು ಸೋದರ ಮಾವನನ್ನು ಅಳಿಯ ಕೊಲೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ನಡೆದಿದೆ. ಪ್ರಭುಸ್ವಾಮಿ (50) ಕೊಲೆಯಾದ ಮಾವ ಎಂದು ತಿಳಿದು ಬಂದಿದೆ. ಅಜಯ್ (22) ಕೊಲೆಗೈದ ಅಳಿಯ. ಗಂಜಿಗೆರೆ ಗ್ರಾಮದ ಸಾವಿತ್ರಮ್ಮ ಎಂಬುವರು ಏಳು ವರ್ಷದ ಹಿಂದೆ ಪತಿಯನ್ನು ಬಿಟ್ಟು ತವರು ಮನೆಗೆ ಬಂದಿದ್ದರು. ಸಾವಿತ್ರಮ್ಮ ಮತ್ತು ಅಣ್ಣ ಪ್ರಭುಸ್ವಾಮಿ ಅಕ್ಕಪಕ್ಕದ ಮನೆಯಲ್ಲಿ ವಾಸವಾಗಿದ್ದರು. ಪ್ರಭುಸ್ವಾಮಿ ಜಮೀನು ವಿಚಾರವಾಗಿ ತಂಗಿ ಜೊತೆ ಜಗಳವಾಡುತ್ತಿದ್ದರು.

ಪ್ರಭುಸ್ವಾಮಿ ಕುಡಿದು ಬಂದು ತಂಗಿ ಮತ್ತು ಆಕೆಯ ಮಗಳನ್ನು ಜಗಳವಾಡುತ್ತಿದ್ದ. ಗಲಾಟೆ ವಿಚಾರವನ್ನು ಸಾವಿತ್ರಮ್ಮ ತನ್ನ ಮಗ ಅಜಯ್​ಗೆ​ ಹೇಳಿದ್ದರು. ಬೇರೊಂದು ಊರಲ್ಲಿ ವಾಸವಾಗಿದ್ದ ಮಗ ಅಜಯ್​ ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಬಂದಿದ್ದನು. ತನ್ನ ತಾಯಿಯೊಂದಿಗೆ ಜಗಳವಾಡುತ್ತಿರುವುದಕ್ಕೆ ಅಜಯ್​, ಮಾವ ಪ್ರಭುಸ್ವಾಮಿಯ ಜೊತೆ ಜಗಳ ತೆಗೆದಿದ್ದನು. ಜಗಳ ತಾರಕಕ್ಕೇರಿ ಅಜಯ್​, ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು