ಕ್ರೈಮ್

ವಿಮಾನದಲ್ಲಿ ಕಳೆದುಕೊಂಡ ವಾಲೆಟ್ ನಲ್ಲಿ ಬಾಂಬ್ ಇದೆ ಎಂದ ಪ್ರಯಾಣಿಕನ ಬಂಧನ

ಬೆಂಗಳೂರು:  ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ತಮ್ಮ ವಾಲೆಟ್ ಕಳೆದುಕೊಂಡಿದ್ದು,  ಈ ಬಗ್ಗೆ ಕಾಲ್ ಸೆಂಟರ್ ಸಿಬ್ಬಂದಿಗೆ ದೂರು ನೀಡಿದ್ದರು ಪ್ರಯೋಜನವಾಗದೇ ಆಕ್ರೋಶಗೊಂಡ ಪ್ರಯಾಣಿಕ ತನ್ನ ವಾಲೆಟ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ ವಿಚಿತ್ರ ಘಟನೆ  ನಡೆದಿದೆ.

ಪ್ರಯಾಣಿಕ ಶ್ರೇಯಾಂಶ್ ಚಮಾರಿಯಾ ಅವರು ತಮ್ಮ ವ್ಯಾಲೆಟ್‌ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿದ್ದರು. ಹೀಗಾಗಿ ನಿನ್ನೆ ಅವರನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 26 ರಂದು ಬೆಳಗ್ಗೆ 9.20 ಕ್ಕೆ ಚಮರಿಯಾ ಎಸ್‌ಜಿ 8536 ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ತಮ್ಮ ವಾಲೆಟ್ ಕಾಣೆಯಾಗಿದೆ ಎಂದು ಅರಿತ ಅವರು ಗುರುಗ್ರಾಮ್‌ನಲ್ಲಿರುವ ಸ್ಪೈಸ್‌ಜೆಟ್ ಕಾಲ್ ಸೆಂಟರ್‌ಗೆ ಬೆಳಗ್ಗೆ 10.16ಕ್ಕೆ ಕರೆ ಮಾಡಿದ್ದಾರೆ. “ಕರೆಗೆ ಉತ್ತರಿಸಿದ ವ್ಯಕ್ತಿ ಅವರಿಗೆ ಎಂದಿನಂತೆ ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಕಾಲ್ ಅನ್ನು ಹೊಲ್ಡ್ ಮಾಡಿದ್ದಾರೆ. ತನ್ನ ಕರೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ವಾಲೆಟ್ ಮರಳಿ ಪಡೆಯಲು ಸಾಧ್ಯವಾಗದೆ ಹತಾಶನಾಗಿ, ಅದರಲ್ಲಿ ಬಾಂಬ್ ಇದೆ ಮತ್ತು ಅದನ್ನು ತಕ್ಷಣವೇ ಪತ್ತೆ ಮಾಡುವಂತೆ ಕೇಳಿಕೊಂಡಿದ್ದಾನೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾಲ್ ಸೆಂಟರ್ ಸಿಬ್ಬಂದಿ ಬಾಂಬ್ ಇರುವ ಸ್ಥಳವನ್ನು ಕೇಳಿದಾಗ, ಪ್ರಯಾಣಿಕ ಚಮಾರಿಯಾ, ಹಿಂದಿಯಲ್ಲಿ ಉತ್ತರಿಸಿ, “ನಾನು ನಿಮಗೆ ಹೇಳುವುದಿಲ್ಲ. ಅದು ಯಾವಾಗ ಬೇಕಾದಾರೂ ಸ್ಫೋಟವಾಗಬಹುದು” ಎಂದು ಹೇಳಿದ್ದಾನೆ. ತಕ್ಷಣ ಸ್ಪೈಸ್ ಜೆಟ್ ಅಧಿಕಾರಿಗಳು ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಏತನ್ಮಧ್ಯೆ, ಸ್ಪೈಸ್ ಜೆಟ್ ಸಿಬ್ಬಂದಿ ಬೆಳಗ್ಗೆ 10.59 ಕ್ಕೆ ವಿಮಾನದೊಳಗೆ ವಾಲೆಟ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಮಾಹಿತಿ ನೀಡಿದ್ದು, ಅವರು ವಿಶೇಷ ಬಾಂಬ್ ಪತ್ತೆ ತಂಡವನ್ನು ಕರೆಯಿಸಿ ಪರಿಶೀಲಿಸಿ, ಹುಸಿ ಬಾಂಬ್ ಕರೆ ಎಂದು ಹೇಳಿದ್ದಾರೆ.

Ashika S

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

2 hours ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

2 hours ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

2 hours ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

3 hours ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

3 hours ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

3 hours ago