News Karnataka Kannada
Sunday, April 14 2024
Cricket
ತಮಿಳುನಾಡು

ಬಿರಿಯಾನಿ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Karnataka youth orders second-hand iPhone online, murders delivery boy
Photo Credit : News Kannada

ಚೆನ್ನೈ: ಬಿರಿಯಾನಿ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನ ಕೊಲೆಯಾಗಿರುವ ಘಟನೆ ತಮಿಳುನಾಡಿನ ಚೆನ್ನೈನ ಮಣ್ಣೂರುಪೇಟೆ ಬಸ್ ನಿಲ್ದಾಣದ ಬಳಿ ನಡೆದಿದೆ. ಮೃತರನ್ನು ಬಾಲಾಜಿ (22)ಎಂದು ಗುರತಿಸಲಾಗಿದೆ.

ಈ ಯುವಕ ರಾತ್ರಿ ಊಟ ಮಾಡಲು ಮಣ್ಣೂರುಪೇಟೆ ಬಸ್ ನಿಲ್ದಾಣದ ಬಳಿ ಸ್ನೇಹಿತರೊಂದಿಗೆ ಬಂದು ಬೀದಿಬದಿಯ ಸ್ಟಾಲ್​​ ಒಂದರಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದಾನೆ, ಇದೇ ಸಮಯಕ್ಕೆ ಮದ್ಯಪಾನ ಮಾಡಿರುವ ಮೂವರು ವ್ಯಕ್ತಿಗಳು ಅದೇ ಸ್ಟಾಲ್​​​ಗೆ ಬಂದು, ಅವರು ಕೂಡ ಆರ್ಡರ್ ಮಾಡಿದ್ದಾರೆ. ಸ್ಟಾಲ್​​ ಮಾಲೀಕ ಮೊದಲು ಆರ್ಡರ್ ಮಾಡಿದವರಿಗೆ ಬಿರಿಯಾನಿ ನೀಡಿದ್ದಾನೆ.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈ ಮೂವರು ಕುಡುಕರು ಬಾಲಾಜಿಗೆ ರಾಡ್​​ನಿಂದ ಹೊಡೆದಿದ್ದಾರೆ. ಬಲವಾದ ಏಟು ಬಿದ್ದ ಪರಿಣಾಮ ಯುವಕ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.ಕುಡಿದ ಅಮಲಿನಲ್ಲಿದ್ದ ವ್ಯಕ್ತಿಗಳು ಬಾಲಾಜಿ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂರತೆ ಚೆನ್ನೈ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು