News Karnataka Kannada
Monday, April 29 2024
ಕ್ರೈಮ್

19 ವರ್ಷದ ಯುವತಿ ಮೇಲೆ ಐವರಿಂದ 20 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ

ಅಶೋಕನಗರ  ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾನಿಪುರಿ ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ 7 ವರ್ಷದ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ  ಎಸಗಿದ ಘಟನೆ  ನಡೆದಿದೆ.
Photo Credit : Pixabay

ಸಂಭಾಲ್: 19 ವರ್ಷದ ಯುವತಿಯನ್ನು ಐವರು ಪುರುಷರು 20 ದಿನಗಳ ಕಾಲ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರಪ್ರದೇಶದ ಸಂಭಾಲ್‌ ನಲ್ಲಿ ನಡೆದಿದೆ.

ಈ ಕೃತ್ಯದಲ್ಲಿ ಇಬ್ಬರು ಮಹಿಳೆಯರೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸಂಭಾಲ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಲ್ಲಾ ಏಳು ಮಂದಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಎಚ್‌ಒ ಅನೂಪ್ ಶರ್ಮಾ, ಏಳು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 27 ರಂದು ಮೊಹಮ್ಮದ್ ಅರ್ಷದ್ ಮತ್ತು ಅಸಿಮ್ ಯುವತಿಯನ್ನು ಅಪಹರಿಸಿದ್ದಾರೆ. ಇವರಿಬ್ಬರು ಆಕೆಯನ್ನು ಮೊರಾದಾಬಾದ್ ಜಿಲ್ಲೆಯ ತಮ್ಮ ಸ್ನೇಹಿತ ಆಶಿಕ್ ಖಾನ್ ಮನೆಗೆ ಕರೆದೊಯ್ದು ಅಲ್ಲಿ ಮೂವರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ನಂತರ, ಸೋನಿ ಹುಸೇನ್ ಮತ್ತು ಫೈಜ್ ಆಲಂ ಕೂಡ ಗುಂಪನ್ನು ಸೇರಿಕೊಂಡು ಅತ್ಯಾಚಾರ ನಡೆಸಿದ್ದಾರೆ.

ಈ ಆರೋಪಿಗಳಿಗೆ ಸಾಯಿರಾ ಬೇಗಂ ಮತ್ತು ಝೀಬಾ ಖಾನ್ ಎಂಬ ಇಬ್ಬರು ಮಹಿಳೆಯರು ಬೆಂಬಲ ನೀಡಿದ್ದಾರೆ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಅಕ್ಟೋಬರ್ 12 ರಂದು ಆರೋಪಿಗಳ ಮನೆಯಿಂದ ತಪ್ಪಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು