News Karnataka Kannada
Saturday, April 27 2024
ಅಡುಗೆ ಮನೆ

ತಕ್ಷಣಕ್ಕೆ ತಯಾರಾಗುವ ಮಾವಿನಕಾಯಿ ತಂಬುಳಿ

ಈಗ ಮಾವಿನ ಕಾಲವಾಗಿದ್ದು, ಅಲ್ಲಲ್ಲಿ ಮಾವಿನ ಕಾಯಿ ಮತ್ತು ಹಣ್ಣುಗಳು ಮಾರಾಟಕ್ಕೆ ಬರುತ್ತಿವೆ. ಹೀಗಾಗಿ ಇವುಗಳಿಂದ ಹಲವಾರು ಪದಾರ್ಥವನ್ನು ತಯಾರಿಸುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅದರಲ್ಲೂ ಮಾವಿನಕಾಯಿಯ ತಂಬುಳಿ ಸುಲಭವಾಗಿ ತಕ್ಷಣಕ್ಕೆ ಮಾಡಬಹುದಾದ ಖಾದ್ಯವಾಗಿರುವುದರಿಂದ ಯಾರು ಬೇಕಾದರೂ ಮಾಡಬಹುದು.
Photo Credit : By Author

ಬೇಕಾಗುವ ಪದಾರ್ಥಗಳು: ಮಾವಿನಕಾಯಿ-1, ಮೊಸರು- ಒಂದು ಬಟ್ಟಲು, ಒಣ ಮೆಣಸು- 4-5, ಕಾಯಿತುರಿ- ಅರ್ಧ ಬಟ್ಟಲು, ಇಂಗು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು_ ಸ್ವಲ್ಪ

ಮಾಡುವುದು ಹೇಗೆ?: ಮೊದಲಿಗೆ ಮಾವಿನ ಕಾಯಿ ಮತ್ತು  ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಬೇಕು. ಬಳಿಕ ಮಾವಿನಕಾಯಿ ಹಾಗೂ  ಕಾಯಿ ತುರಿಯೊಂದಿಗೆ ಉಪ್ಪು, ಇಂಗು, ಒಣಮೆಣಸು ಎಲ್ಲವನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಬೇಕು. ಆ ನಂತರ ಅದನ್ನು ಮೊಸರಿನೊಂದಿಗೆ ಮಿಕ್ಸ್ ಮಾಡಬೇಕು ಇದಾದ ಬಳಿಕ  ಕೊತ್ತಂಬರಿ ಸೊಪ್ಪನ್ನು ಅದರ ಮೇಲೆ ಉದುರಿಸಿದರೆ ಮಾವಿನ ಕಾಯಿ ತಂಬುಳಿ ಸವಿಯಲು ಸಿದ್ದ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು