News Karnataka Kannada
Wednesday, May 01 2024
ಅಡುಗೆ ಮನೆ

ಗರಿ -ಗರಿ ಜಿಲೇಬಿ

New Project 2021 09 26t210515.135
Photo Credit :

ಸಕ್ಕರೆ- 1.5 ಬಟ್ಟಲು
ಮೈದಾ ಹಿಟ್ಟು-2 ಬಟ್ಟಲು
ಮೊಸರು-1 ಬಟ್ಟಲು
ಬೇಕಿಂಗ್ ಸೋಡಾ- ಸ್ವಲ್ಪ
ಕೇಸರಿ ದಳ-15-20
ಹಾಲು- ಒಂದು ಸಣ್ಣ ಬಟ್ಟಲು
ನಿಂಬೆ ರಸ- ಸ್ವಲ್ಪ
ಏಲಕ್ಕಿ ಪುಡಿ- ಸ್ವಲ್ಪ
ಎಣ್ಣೆ-ಅಗತ್ಯಕ್ಕೆ ತಕ್ಕಷ್ಟು
ಸಾಸ್ ಬಾಟಲಿ- 1
ಮಾಡುವ ವಿಧಾನ…

ಮೊದಲಿಗೆ ಹಾಲನ್ನು ಕಾಯಿಸಿ ಅದಕ್ಕೆ ಕೇಸರಿ ದಳವನ್ನು ಹಾಕಿ ನೆನೆಯಲು ಬಿಡಿ. ನಂತರ ಒಂದು ಪಾತ್ರೆಗೆ 1.5 ಬಟ್ಟಲು ಸಕ್ಕರೆ ಹಾಗೂ 1 ಬಟ್ಟಲು ನೀರು ಹಾಕಿ ಅಂಟಿನ ಹದಕ್ಕೆ ಪಾಕವಾಗುವಂತೆ ಕಾಯಿಸಿ. ನಂತರ ಇದಕ್ಕೆ ಏಲಕ್ಕಿ ಪುಡಿ, ಹಾಗೂ ಹಾಲಿನಲ್ಲಿ ನೆನೆಸಿದ ಕೇಸರಿಯನ್ನು ಅರ್ಧ ಹಾಕಿ, ಮತ್ತರ್ಧ ತೆಗೆದಿಡಿ.

ಬಳಿಕ ಒಂದು ಪಾತ್ರೆಗೆ ಮೈದಾ ಹಿಟ್ಟು, ಮೊಸರು ಸ್ವಲ್ಪ ನೀರು ಹಾಕಿಕೊಂಡು ಇಡ್ಲಿ ಹಿಟ್ಟಿನಂತೆ ಮಾಡಿಕೊಳ್ಳಿ. ನಂತರ ಉಳಿದರ್ಧ ಕೇಸರಿ ಹಾಗೂ ಬೇಕಿಂಗ್ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಕಾಯಿಸಿಕೊಳ್ಳಿ. ನಂತರ ಹಿಟ್ಟನ್ನು ಸಾಸ್ ಬಾಟಲಿಗೆ ಹಾಕಿ ಎಣ್ಣೆಗೆ ಸುರುಳಿಯಾಕಾರದಲ್ಲಿ ಬಿಡಿ.ಎರಡೂ ಬದಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿರಿ. ನಂತರ ತೆಗೆದು ಸಕ್ಕರೆ ಪಾಕಕ್ಕೆ ಹಾಕಿ ಎರಡೂ ಬದಿಯಲ್ಲೂ ಎರಡೆರಡು ನಿಮಿಷ ನೆನೆಸಿ ತೆಗೆದರೆ ರುಚಿಕರವಾದ ಜಿಲೇಬಿ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು