News Karnataka Kannada
Wednesday, April 17 2024
Cricket
ಅಡುಗೆ ಮನೆ

ರುಚಿಯಾದ ಅಂಜಲ್ ಫಿಶ್ ಫ್ರೈ ಮಾಡುವ ವಿಧಾನ ಇಲ್ಲಿದೆ

Fish Fry
Photo Credit : IANS

ರುಚಿಯಾದ ಅಂಜಲ್ ಫಿಶ್ ಫ್ರೈ ಮಾಡುವ ವಿಧಾನ ಇಲ್ಲಿದೆ. ಸುಲಭವಾದ ರೀತಿಯಲ್ಲಿ ಇದನ್ನು ಮಾಡಬಹುದು.

ಬೇಕಾಗುವ ಪದಾರ್ಥಗಳು : 1 ಕೆಜಿ-ಅಂಜಲ್, 1 ಟೇಬಲ್ ಸ್ಪೂನ್-ಖಾರದ ಪುಡಿ, 1 ಟೀ ಸ್ಪೂನ್-ಅರಿಶಿನ, 1 ಟೇಬಲ್ ಸ್ಪೂನ್-ಲಿಂಬೆಹಣ್ಣಿನ ರಸ, ಸ್ವಲ್ಪ-ಕೊತ್ತಂಬರಿಸೊಪ್ಪು , 1 ಹದ ಗಾತ್ರದ ಈರುಳ್ಳಿ, , 8-ಕೆಂಪು ಮೆಣಸು, 6-ಬೆಳ್ಳುಳ್ಳಿ ಎಸಳು, 1 ಇಂಚು-ಶುಂಠಿ, 1ಟೇಬಲ್ ಸ್ಪೂನ್-ಕಾಳುಮೆಣಸು, 1 ಟೇಬಲ್ ಸ್ಪೂನ್-ಜೀರಿಗೆ, 1 ಟೇಬಲ್ ಸ್ಪೂನ್-ಹುಣಸೆಹಣ್ಣು, ½ ಟೀ ಸ್ಪೂನ್-ಮೆಂತ್ಯ ಕಾಳು. ಎಣ್ಣೆ-ಸ್ವಲ್ಪ.

ಮಾಡುವ ವಿಧಾನ : ಮೊದಲಿಗೆ ಫಿಶ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿ.ನಂತರ ಒಂದು ಪ್ಲೇಟ್ ಗೆ ಖಾರದ ಪುಡಿ, ಅರಿಶಿನ ಪುಡಿ, ಲಿಂಬೆಹಣ್ಣಿನ ರಸ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ ಮೀನು ಸೇರಿಸಿ ಮಿಕ್ಸ್ ಮಾಡಿ 30 ನಿಮಿಷಗಳ ಕಾಲ ಇಡಿ. ಒಂದು ಮಿಕ್ಸಿ ಜಾರಿಗೆ ಈರುಳ್ಳಿ, ಒಣಮೆಣಸು, ಬೆಳ್ಳುಳ್ಳಿ, ಶುಂಠಿ, ಕಾಳುಮೆಣಸು, ಜೀರಿಗೆ, ಹುಣಸೆಹಣ್ಣು,ಮೆಂತ್ಯಕಾಳು ಹಾಕಿ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ.ರುಬ್ಬಿದ ಮಸಾಲವನ್ನು ಮೀನಿಗೆ ಹಚ್ಚಿ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತವಾಕ್ಕೆ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಮಸಾಲ ಹಚ್ಚಿದ ಮೀನನ್ನು ಹಾಕಿ ಎರಡೂ ಕಡೆ ಚೆನ್ನಾಗಿ ಕಾಯಿಸಿದರೆ ರುಚಿಯಾದ ಅಂಜಲ್ ಫಿಶ್ ಫ್ರೈ ಸವಿಯಲು ಸಿದ್ಧ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು