News Karnataka Kannada
Thursday, April 25 2024
ಅಡುಗೆ ಮನೆ

ಫಟಾ ಫಟ್ ಎಂದು ತಯಾರು ಮಾಡಿ ರುಚಿ ರುಚಿಯಾದ ಹೆಸರುಬೆಳೆ ಪಾಯಸ

Kheer
Photo Credit :

ಸುಲಭವಾಗಿ ಮತ್ತು ರುಚಿಯಾಗಿ ಫಟಾ ಫಟ್ ಎಂದು ತಯಾರಿಸುವ ಹೆಸರುಬೆಳೆ ಪಾಯಸ ಮಾಡಿ ಸವಿಯಲು ಇಲ್ಲಿದೆ ಸುಲಭ ವಿಧಾನ,

ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ – 1ಕಪ್, ಸಬ್ಬಕ್ಕಿ – 1ಕಪ್, ಬೆಲ್ಲ- 2 ಕಪ್, ಒಣದ್ರಾಕ್ಷಿ, ಗೋಡಂಬಿ, ಬಾದಾಮಿ- ಸ್ವಲ್ಪ, ಏಲಕ್ಕಿ 4 (ಕುಟ್ಟಿ ಪುಡಿ ಮಾಡಿದ್ದು), ತುಪ್ಪ- ಅರ್ಧ ಕಪ್, ಹಾಲು- 2 ಕಪ್.

ಮಾಡುವ ವಿಧಾನ:

ಸಬ್ಬಕ್ಕಿಯನ್ನು ಅರ್ಧ ಗಂಟೆಗಳ ಕಾಲ ನೆನೆಸಿಡಿ. ನಂತರ ಹೆಸರುಬೇಳೆ ತೊಳೆದು ಇಟ್ಟುಕೊಳ್ಳಬೇಕು. ಈಗ ಸ್ಟವ್ ಮೇಲೆ ಕುಕ್ಕರ್ ಇರಿಸಿ ಅದಕ್ಕೆ ತುಪ್ಪ ಹಾಕಿ. ಅದಕ್ಕೆ ಹೆಸರುಬೇಳೆ ಹಾಕಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ಇದಕ್ಕೆ 2ಕಪ್ ನೀರು ಸೇರಿಸಿ. ನಂತರ ಅದಕ್ಕೆ ನೆನೆದ ಸಬ್ಬಕ್ಕಿ ಹಾಕಿ 4 ವಿಷಲ್ ಕೂಗಿಸಿ. ಈಗ ಪಾತ್ರೆಯೊಂದಕ್ಕೆ ಬೆಲ್ಲ, 1 ಕಪ್ ನೀರು ಹಾಕಿ ಕರಗಿಸಿಕೊಳ್ಳಿ. ಈಗ ಕುಕ್ಕರ್‌ಗೆ ಹಾಲು, ಕರಗಿಸಿದ ಬೆಲ್ಲ ನೀರು, ಏಲಕ್ಕಿ ಪುಡಿ, ಸೇರಿಸಿ ಮಿಶ್ರಣ ಮಾಡಿ. ಈಗ ತುಪ್ಪದಲ್ಲಿ ಒಣ ದ್ರಾಕ್ಷಿ, ಗೋಡಂಬಿ, ಬಾದಾಮಿ ಹುರಿದು ಪಾಯಸಕ್ಕೆ ಸೇರಿಸಿ ಚೆನ್ನಾಗಿ ಕುದಿಸಿದರೆ ರುಚಿಯಾದ ಪಾಯಸ ಸವಿಯಲು ಸಿದ್ಧವಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು