Categories: ಇತರೆ

ನೋಕಿಯಾದ ಹೊಸ 4 ಜಿ‌ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಲಾಂಚ್

ಮೊಬೈಲ್ ಕ್ಷೇತ್ರಕ್ಕೆ ನೋಕಿಯಾ ಕಂಪೆನಿ ಮೊದಲು ಪಾದಾರ್ಪಣೆ ಮಾಡಿದರೂ, ಇತ್ತೀಚಿನ ಮುಂದುವರಿದ ಈ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿ ಅಷ್ಟೇನು ಖ್ಯಾತಿ ಗಳಿಸಲು ಸಾಧ್ಯವಾಗಿಲ್ಲ. ಆದರೆ. ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿಯೂ ತನ್ನ ಚಾಪನ್ನು ಮೂಡಿಸಲು ತಯಾರಾಗಿರುವ ನೋಕಿಯಾ, ಇದೀಗ ಎರಡು ಹೊಸ ಮಾದರಿಯ ಸ್ಮಾರ್ಟ್‌ಪೋನ್ ಗಳನ್ನು ಬಿಡುಗಡೆ ಮಾಡಿದೆ. “ನೋಕಿಯಾ ಜಿ10” ಮತ್ತು “ನೋಕಿಯಾ ಸಿ-01 ಪ್ಲಸ್” ಎನ್ನುವ ಎರಡು ಬಗೆಯ ಸ್ಮಾರ್ಟ್‌ಫೋನ್‌ಗಳು ತಾಂತ್ರಿಕವಾಗಿ ಸುಧಾರಿತ ಹಾಗೂ ಹೊಸತನದಲ್ಲಿ ಕಾಲಿಟ್ಟಿವೆ ಎಂದು ಕಂಪೆನಿ ಹೇಳಿದೆ.

ಭಾರತೀಯ ಗ್ರಾಹಕರ ಅಗತ್ಯವನ್ನು ಪೂರೈಸಲು ಬಂದಿರುವ ಈ ಎರಡು”ನೋಕಿಯಾ ಜಿ10″ ಮತ್ತು “ನೋಕಿಯಾ ಸಿ-01 ಪ್ಲಸ್” ಸ್ಮಾರ್ಟ್‌ಫೋನ್‌ಗಳು ಮಧ್ಯಮ ಬೆಲೆ ಮತ್ತು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದ್ದು, “ನೋಕಿಯಾ ಜಿ10” ಎನ್ನುವ ಮಾಡೆಲ್ ಮಧ್ಯಮ ಬೆಲೆಯ ಸ್ಮಾರ್ಟ್ ಫೋನ್ ಆಗಿದ್ದರೆ, “ನೋಕಿಯಾ ಸಿ-01 ಪ್ಲಸ್” ಸ್ಮಾರ್ಟ್‌ಫೋನ್ ಪ್ರಾಥಮಿಕ ಹಂತದ ಆಂಡ್ರಾಯ್ಡ್ ಫೋನ್ ರೂಪದಲ್ಲಿದೆ. ಈ ಎರಡೂ ಫೋನ್‌ಗಳ ಕ್ರಮವಾಗಿ 12,149 ರೂ. ಹಾಗೂ 5999 ರೂ.ಗಳ ಬೆಲೆಗಳನ್ನು ಹೊಂದಿದ್ದು, ಗ್ರಾಹಕರು ನೀಡುವ ಹಣಕ್ಕೆ ತಕ್ಕಂತಹ ಫೀಚರ್ಸ್ ಹೊತ್ತು ಬಂದಿವೆ.

ನೋಕಿಯಾ ಜಿ10 ಫೋನ್ ವಿಶೇಷತೆಗಳನ್ನು ನೋಡುವುದಾದರೆ, ನೋಕಿಯಾ ಜಿ10 6.5 ಇಂಚಿನ ವಾಟರ್ ಡ್ರಾಪ್ ನಾಚ್ ಡಿಸ್‌ಪ್ಲೇ ಮತ್ತು ಹೆಚ್‌ಡಿ ಪ್ಲಸ್ ರೆಸಲ್ಯೂಶನ್ ನಿಂದ ಕೂಡಿರುತ್ತದೆ. ಹಿಂಬದಿಯಲ್ಲಿ ವೃತ್ತಾಕಾರದ ಕ್ಯಾಮೆರಾ, 13 ಎಂಪಿ ಪ್ರೈಮೆರಿ ಲೆನ್ಸ್, 2 ಎಂಪಿ ಮ್ಯಾಕ್ರೋ ಸೆನ್ಸರ್ ಮತ್ತು 2 ಎಂಪಿ ಡೆಪ್ತ್ ಸೆನ್ಸರ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ಲೆನ್ಸ್ ಅನ್ನು ಹೊಂದಿದೆ. ಇನ್ನು ಮೀಡಿಯಾ ಟೆಕ್ ಹೆಲಿಯೊ ಜಿ 25 ಚಿಪ್‌ಸೆಟ್, 4 ಜಿಬಿ ಎಲ್‍ಪಿಡಿಡಿಆರ್ 4 ಎಕ್ಸ್ ರ್ಯಾಮ್ ಮತ್ತು 64 ಜಿಬಿ ಇಎಂಎಂಸಿ 5.1 ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ.ಇದರಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 512 ಜಿಬಿ ವರೆಗೆ ಹೆಚ್ಚುವರಿ ಸಂಗ್ರಹಣೆ ಮಾಡಬಹುದಾಗಿದ್ದು, ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್ ಆದ ಇದು 4ಜಿ ವೋಲ್ಟ್ ಅನ್ನು ಬೆಂಬಲಿಸುತ್ತದೆ. ಬ್ಲೂಟೂತ್ ವಿ5 ಹೊಂದಿರುವ ಈ ಫೋನ್ 5,050 ಎಮ್‍ಎಹೆಚ್ ಬ್ಯಾಟರಿ ಸಾಮಥ್ರ್ಯವನ್ನು ಹೊಂದಿದೆ ಹಾಗೂ 10ಡಬ್ಲ್ಯೂ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಇದು ಆಡಿಯೋ 3.5 ಎಂ ಎಂ ಹೆಡ್ ಫೋನ್ ಜ್ಯಾಕ್ ಮತ್ತು ಚಾರ್ಜ್ ಮಾಡಲು ಯುಎಸ್‍ಬಿ ಟೈಪ್ ಸಿ ಫೋರ್ಟ್ ಹೊಂದಿದೆ. ಕೆಲವು ನೋಕಿಯಾ ಆಪ್‍ಗಳನ್ನು ಮೊದಲೇ ಲೋಡ್ ಮಾಡಲಾಗಿದೆ..

ಕಡಿಮೆ ಬೆಲೆಯ ನೋಕಿಯಾ ಸಿ 01 ಪ್ಲಸ್ ವಿಶೇಷತೆಗಳನ್ನು ನೋಡುವುದಾದರೆ, ನೋಕಿಯಾ ಸಿ 01 ಪ್ಲಸ್ 5.45 ಇಂಚಿನ ಹೆಚ್‌ಡಿ+ ಡಿಸ್‌ಪ್ಲೇ ಪಡೆದುಕೊಂಡಿದೆ. ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ 5 MP ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಕ್ಟಾ- ಕೋರ್ ಚಿಪ್ ಸೆಟ್‍ನೊಂದಿಗೆ 2ಜಿಬಿ ರ್ಯಾಮ್ ಮತ್ತು 128ಜಿಬಿ ವರೆಗೆ ವಿಸ್ತರಣೆ ಮಾಡಬಹುದಾದ 16 ಜಿಬಿ ಆಂತರಿಕ ಸ್ಟೋರೇಜ್. 3000 ಎಮ್‍ಎಹೆಚ್ ಬ್ಯಾಟರಿ ಸಾಮರ್ಥ್ಯ 4ಜಿ ಸಂಪರ್ಕ್, 3.5 ಎಮ್‍ಎಮ್ ಹೆಡ್‍ಫೋನ್ ಜ್ಯಾಕ್, ಚಾರ್ಜಿಂಗ್, ಮೈಕ್ರೋ ಯುಎಸ್‍ಬಿ ಫೋರ್ಟ್‍ ಫೀಚರ್ಸ್ ಅನ್ನು ಒಳಗೊಂಡಿದೆ.

Swathi MG

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

3 hours ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

3 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

3 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

4 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

5 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

5 hours ago