ಇತರೆ

‘ಎಸ್‌1’ ಹಾಗೂ ‘ಎಸ್‌1 ಪ್ರೊ’ ಎಲೆಕ್ಟ್ರಿಕ್‌ ಸ್ಕೂಟರ್‌ 2022 ರ ಜನವರಿಯಿಂದ ಜನರಿಗೆ ತಲುಪಲಿದೆ : ಓಲಾ ಕಂಪನಿ

ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲಿದೆ ಎಂದು ನಿರೀಕ್ಷೆ ಮೂಡಿಸಿರುವ ಓಲಾ ಕಂಪನಿಯ ‘ಎಸ್‌1’ ಹಾಗೂ ‘ಎಸ್‌1 ಪ್ರೊ’ ಸ್ಕೂಟರ್‌ ಗಳನ್ನು ಕೋಟಿಗಟ್ಟಲೆ ಭಾರತೀಯರು ಮುಂಚಿತವಾಗಿಯೇ ಬುಕ್‌ ಮಾಡಿಕೊಂಡು ಕಾಯುತ್ತಿದ್ದಾರೆ. 2022 ರ ಜನವರಿಯಿಂದ ಸ್ಕೂಟರ್‌ ಗಳು ಜನರಿಗೆ ತಲುಪಲು ಆರಂಭವಾಗಲಿದೆ ಎಂದು ಕಂಪನಿ ಈಗಾಗಲೇ ಹೇಳಿದೆ.‌

ಆದರೆ ಬಹಳ ಆಕರ್ಷಕ ವಿನ್ಯಾಸದ, ಅತಿ ವೇಗವಾದ ಓಲಾ ಸ್ಕೂಟರ್‌ಗಳ ಟೆಸ್ಟ್‌ ಡ್ರೈವ್‌ ಯಾವಾಗ ಕೊಡುತ್ತೀರಿ ಎಂದು ಲಕ್ಷಾಂತರ ಮಂದಿ ಕಂಪನಿಗೆ ಮೇಲಿಂದ ಮೇಲೆ ಪ್ರಶ್ನೆ ಕೇಳುತ್ತಿದ್ದರು. ಜನರ ಮನಃಸ್ಥಿತಿಯನ್ನು ಅರಿತ ಕಂಪನಿಯು ‘ಓಲಾ ಎಸ್‌1 ‘ ಮತ್ತು ‘ಓಲಾ ಎಸ್‌1 ಪ್ರೊ’ ಸ್ಕೂಟರ್‌ಗಳ ಟೆಸ್ಟ್‌ ಡ್ರೈವ್‌ ಲಭ್ಯತೆ ದಿನಾಂಕವನ್ನು ಕಡೆಗೂ ಘೋಷಿಸಿದೆ.

ನವೆಂಬರ್‌ 10ರಿಂದ ಮೆಟ್ರೋ ನಗರಗಳು ಮತ್ತು ಪ್ರಮುಖ ನಗರಗಳಲ್ಲಿ ಮಾತ್ರವೇ ಓಲಾ ಸ್ಕೂಟರ್‌ಗಳು ಪೂರ್ವ ನೋಂದಣಿ ವ್ಯವಸ್ಥೆ ಅಡಿಯಲ್ಲಿ ‘ಟೆಸ್ಟ್‌ ಡ್ರೈವ್‌ ‘ ಗೆ ಲಭ್ಯವಾಗಲಿವೆ. ಈಗಾಗಲೇ ಸ್ಕೂಟರ್‌ ಬುಕ್‌ ಮಾಡಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು ಎನ್ನಲಾಗುತ್ತಿದ್ದರೂ, ಸ್ಪಷ್ಟವಾಗಿಲ್ಲ.

ಸದ್ಯಕ್ಕೆ ಅಡ್ವಾನ್ಸ್‌ ಮೊತ್ತ ಮಾತ್ರವೇ ನೀಡಿ ಬುಕ್ಕಿಂಗ್‌ಗೆ ಓಲಾ ಕಂಪನಿಯು ಅವಕಾಶ ಮಾಡಿಕೊಟ್ಟಿದೆ. ಟೆಸ್ಟ್‌ ಡ್ರೈವ್‌ ಮಾಡಿದ ದಿನಗಳಂದೇ ಬಾಕಿ ಮೊತ್ತ ಪಾವತಿಗೂ ಕೂಡ ಗ್ರಾಹಕರಿಗೆ ಕಂಪನಿ ಅವಕಾಶ ಒದಗಿಸಲಿದೆ. ಅಗತ್ಯವಾಗಿ ಚಾಲನಾ ಪರವಾನಗಿಯನ್ನು ತೋರಿಸಿದವರಿಗೆ ಮಾತ್ರವೇ ಟೆಸ್ಟ್‌ ಡ್ರೈವ್‌ ಭಾಗ್ಯ ಲಭ್ಯವಾಗಲಿದೆ.

ಸೆಪ್ಟೆಂಬರ್‌ನಲ್ಲಿ ಓಲಾ ಸ್ಕೂಟರ್‌ ಬುಕ್ಕಿಂಗ್‌ ಆರಂಭವಾದ ಎರಡೇ ದಿನಗಳಲ್ಲಿ ಅಡ್ವಾನ್ಸ್‌ ಮೊತ್ತವೇ ಸುಮಾರು 1,100 ಕೋಟಿ ರೂ. ಕಂಪನಿಗೆ ಸಂಗ್ರಹವಾಗಿದೆ. ಇದು ದೇಶದ ಎಲೆಕ್ಟ್ರಿಕ್‌ ಸ್ಕೂಟರ್‌ ಬುಕ್ಕಿಂಗ್‌ ಕ್ಷೇತ್ರದ ದಾಖಲೆ ಕೂಡ ಎನಿಸಿದೆ.

ನವೆಂಬರ್‌ 1 ರಿಂದ ಓಲಾ ಸ್ಕೂಟರ್‌ ಖರೀದಿಗೆ ಪುನಃ ಕಂಪನಿಯು ಅವಕಾಶ ನೀಡಲಿದೆ. ಆಸಕ್ತರು ಓಲಾ ಆಯಪ್‌ ಡೌನ್‌ಲೋಡ್‌ ಮಾಡಿಕೊಂಡು ಹೆಸರು, ಫೋನ್‌ ನಂಬರ್‌ ಮೂಲಕ ನೋಂದಣಿ ಮಾಡಿಕೊಂಡರೆ ಸಾಕಾಗುತ್ತದೆ. ಸ್ಕೂಟರ್‌ ಬಣ್ಣ, ವೈಶಿಷ್ಟ್ಯತೆಗಳನ್ನು ನಿರ್ಧರಿಸಿದ ಬಳಿಕ 20 ಸಾವಿರ ರೂ. ಅಡ್ವಾನ್ಸ್‌ ಮೊತ್ತ ಪಾವತಿಸಿ ಬುಕ್ಕಿಂಗ್‌ ಮಾಡಲು ಅವಕಾಶವಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 181 ಕಿ.ಮೀ. ವರೆಗೆ ಕ್ರಮಿಸಬಹುದು ಎನ್ನಲಾಗುತ್ತಿರುವ ಓಲಾ ಎಸ್‌1 ಸ್ಕೂಟರ್‌ನ ಬೆಲೆಯು 85,099 ರೂ.ನಿಂದ 1.10 ಲಕ್ಷ ರೂ. (ಎಕ್ಸ್‌ಶೋರೂಂ- ದಿಲ್ಲಿ) ಎಂದು ಕಂಪನಿ ಹೇಳಿದೆ.

Gayathri SG

Recent Posts

ಬಹುಭಾಷೆಯಲ್ಲಿ ಡಬ್ ಆಗಿದೆ ದೊಡ್ಮನೆ ಕುಡಿಯ ‘ಯುವ’ ಸಿನಿಮಾ

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…

18 mins ago

ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಂತ್ಯಗೊಳಿಸಿದ ಮುಂಬೈ ಇಂಡಿಯನ್ಸ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ  ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ  ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.

46 mins ago

8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌: ಗುಡುಗು, ಮಿಂಚು ಸಹಿತ ಮಳೆ ಸಾಧ್ಯತೆ

ರಾಜ್ಯಾದ್ಯಂತ ಪ್ರತ್ಯೇಕವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು,  40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಿ, ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

1 hour ago

ಸ್ವಾತಿ ಮಲಿವಾಲ್‌ ಮೇಲೆ ದೂರು ದಾಖಲಿಸಿದ ಆರೋಪಿ ಬಿಭವ್‌

ಆಪ್‌ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್‌ ಕುಮಾರ್‌ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…

1 hour ago

ತಾಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿವ್ಯವಸ್ಥೆ ಪರಿಶೀಲಿಸಿದ ಡಿವೈಎಸ್ಪಿ

ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ…

2 hours ago

ಪವಿತ್ರಾ ಜಯರಾಂ ಮೃತಪಟ್ಟ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ

ಇತ್ತೀಚೆಗಷ್ಟೇ ತ್ರಿನಯನಿ ಧಾರಾವಾಹಿಯ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ  ತೆಲುಗು ಧಾರಾವಾಹಿ ನಟ…

2 hours ago