Categories: ಇತರೆ

ಆನ್‌ಲೈನ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚಳ

ಆನ್‌ಲೈನ್ ವಂಚನೆಯ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಪ್ರತಿದಿನ ಬ್ಯಾಂಕಿನ ಹೆಸರಿನಲ್ಲಿ ವಂಚನೆ ಸಂದೇಶಗಳನ್ನ ಕಳುಹಿಸುವ ಮೂಲಕ ಜನರನ್ನ ಮಾಡಲಾಗ್ತಿದೆ. ಕೆಲವೊಮ್ಮೆ ಲಿಂಕ್ ಮೇಲೆ ಕ್ಲಿಕ್ ಮಾಡುವಂತೆ ಕೇಳುವ ಮೂಲಕ ಖಾತೆಯಲ್ಲಿನ ಪೂರ್ತಿ ಹಣವನ್ನ ಕದಿಯಲಾಗುತ್ತೆ. ಡಿಜಿಟಲ್ ಬ್ಯಾಂಕಿಂಗ್ ಜೊತೆಗೆ, ಇಂತಹ ಆನ್‌ಲೈನ್ ಫಿಶಿಂಗ್ ಪ್ರಕರಣಗಳು ಹೆಚ್ಚಾಗಿವೆ. ನಿಮ್ಗೂ ಕೂಡ ಕ್ಯಾಶ್‌ಬ್ಯಾಕ್ ಅಥವಾ ಉಚಿತ ಉಡುಗೊರೆ ನೀಡುತ್ತೇವೆ. ಈ ಲಿಂಕ್ ಅನ್ನೋ ಮೆಸೇಜ್‌ ಬಂದಿದ್ರೆ ಜಾಗರೂಕರಾಗಿರಿ. ಯಾಕಂದ್ರೆ, ಇಂತಹ ಸಂದೇಶ ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನ ಕೆಲವೇ ನಿಮಿಷಗಳಲ್ಲಿ ಖಾಲಿ ಮಾಡುತ್ತೆ.

ತನ್ನ ಗ್ರಾಹಕರನ್ನ ಎಚ್ಚರಿಸಿದ ಎಸ್‌ಬಿಐ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರನ್ನು ಆನ್‌ಲೈನ್ ಫಿಶಿಂಗ್ ತಪ್ಪಿಸಲು ಟ್ವೀಟ್ ಮಾಡುವ ಮೂಲಕ ಎಚ್ಚರಿಸಿದೆ. ನಕಲಿ ಸಂದೇಶಗಳನ್ನ ಕಳುಹಿಸುವ ಮೂಲಕ ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಟ್ವೀಟ್ ಮೂಲಕ ತಿಳಿಸಿದೆ. ಹಾಗಾಗಿ ಅಂತಹ ಯಾವುದೇ ಸಂದೇಶಕ್ಕೆ ಉತ್ತರಿಸಬೇಡಿ. ನೀವು ಅಂತಹ ಲಿಂಕ್‌ಗಳನ್ನ ಪಡೆಯುತ್ತಿದ್ದೀರಾ? ಅವರಿಂದ ದೂರವಿರಿ! ಈ ಫಿಶಿಂಗ್ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ನಿಮ್ಮ ವೈಯಕ್ತಿಕ ಮತ್ತು ಗೌಪ್ಯ ಮಾಹಿತಿಯನ್ನು ನಾಶಪಡಿಸಬಹುದು. ಆದ್ದರಿಂದ ಜಾಗರೂಕರಾಗಿರಿ. ಮತ್ತು ನೀವು ಕ್ಲಿಕ್ ಮಾಡುವ ಮೊದಲು ಯೋಚಿಸಿ ಎಂದು ಎಸ್‌ಬಿಐ ಹೇಳಿದೆ.

ಆನ್‌ಲೈನ್ ಫಿಶಿಂಗ್ ಪ್ರಕರಣಗಳು ಹೆಚ್ಚುತ್ತಿವೆ..!
ವಾಸ್ತವವಾಗಿ ಜನರು ಫಿಶಿಂಗ್ ಮಾಡುವುದನ್ನ ತಪ್ಪಿಸಬೇಕು. ಹ್ಯಾಪರ್‌ಗಳು ಕೂಪನ್‌ಗಳ ಆಕರ್ಷಕ ಸಂದೇಶಗಳು, ಕ್ಯಾಶ್‌ಬ್ಯಾಕ್ ಮತ್ತು ಉಚಿತ ಉಡುಗೊರೆಗಳೊಂದಿಗೆ, ತಮ್ಮ ಬಲೆಗೆ ಯಾರನ್ನೂ ಸುಲಭವಾಗಿ ಆಕರ್ಷಿಸಬೋದು ಎಂಬ ಅಂಶವನ್ನ ಚೆನ್ನಾಗಿ ತಿಳಿದಿದ್ದಾರೆ. ಹಾಗಾಗಿ ಬ್ಯಾಂಕಿನ ಹೆಸ್ರಿನಲ್ಲಿ ಜನರನ್ನ ದೋಚಲು ಯೋಜನೆ ಮಾಡಲಾಗುತ್ತದೆ. ನೀವು ಅಂತಹ ಸಂದೇಶಗಳನ್ನು ಪಡೆಯುತ್ತಿದ್ದರೆ, ನಿಮ್ಮ ಯಾವುದೇ ಮಾಹಿತಿಯನ್ನು ತಪ್ಪಾಗಿ ಕೂಡ ಹಂಚಿಕೊಳ್ಳಬೇಡಿ.

ನೀವು ಗಮನ ಹರಿಸದಿದ್ದರೆ ನಷ್ಟವಾಗುತ್ತೆ..!
ಯಾವುದೇ ಅನುಮಾನಾಸ್ಪದ ಇಮೇಲ್ ವಿವರಗಳನ್ನ ಸರಿಯಾಗಿ ಪರೀಕ್ಷಿಸಲು ಮರೆಯದಿರಿ. ತಿಳಿಯದೆ ಇಂತಹ ಸಂದೇಶಗಳಿಗೆ ಉತ್ತರಿಸುವುದನ್ನ ತಪ್ಪಿಸಿ. ನೀವು ಗಮನ ಹರಿಸಿದ್ರೆ, ಅಂತಹ ಮೇಲ್‌ನಲ್ಲಿ ಖಂಡಿತವಾಗಿಯೂ ಕೆಲವು ಕಾಗುಣಿತ ತಪ್ಪುಗಳಿರುತ್ವೆ. ಅದು ನಿಮಗೆ ಅರ್ಥವಾಗುತ್ತದೆ. ನಕಲಿ ಜನರನ್ನ ಫಿಶಿಂಗ್‌ನಲ್ಲಿ ಬಳಸಲಾಗುತ್ತದೆ. ನೀವು ಅದನ್ನ ಗುರುತಿಸಿದರೆ, ಸೈಬರ್ ವಂಚನೆಯನ್ನ ತಪ್ಪಿಸಬಹುದು.

Gayathri SG

Recent Posts

ವೀಕ್ಷಕರ ಗಮನ ಸೆಳೆದ ನಾಣ್ಯ ಮತ್ತು ನೋಟುಗಳ ಪ್ರದರ್ಶನ

ನಗರದ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಪುರಾತತ್ವ ಸಂಗ್ರಹಾಲಯಗಳು ಮತ್ತು  ಪರಂಪರೆ ಇಲಾಖೆಯಲ್ಲಿ  ಆಯೋಜಿಸಿರುವ ಅಪೂರ್ವ ನಾಣ್ಯ ಮತ್ತು ನೋಟುಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

6 mins ago

ಬೀದಿಗಳಲ್ಲಿ ಹಸುಗಳ ಕಾದಾಟ: ಬಾಲಕಿಯರ ಮೇಲೆ ಬಿದ್ದ ಹಸು, ವಿಡಿಯೋ ವೈರಲ್

ಸಿಸಿಟಿವಿಯಲ್ಲಿ ಆಘಾತಕಾರಿ ಘಟನೆಯೊಂದು ಸೆರೆಯಾಗಿದ್ದು ಬೀದಿಯಲ್ಲಿ ಬಾಲಕಿಯರ ಗುಂಪಿನ ಮೇಲೆ ಎರಡು ಹಸುಗಳು ಬಿದ್ದು ಉರುಳಾಡುವುದು ವೀಕ್ಷಕರನ್ನು ಬೆಚ್ಚಿ ಬೀಳಿಸಿದೆ,…

7 mins ago

ಅಂಜಲಿ ಹತ್ಯೆ ಪ್ರಕರಣ : ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ…

30 mins ago

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ : ಬಿಜೆಪಿ ಮಾಜಿ ಸರಪಂಚ್ ಸಾವು

ಜಮ್ಮು-ಕಾಶ್ಮೀರದಲ್ಲಿ ಇನ್ನು ಎರಡು ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ನಿನ್ನೆ ಶನಿವಾರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ…

41 mins ago

ವಿಮಾನ ಇಂಜಿನ್‌ನಲ್ಲಿ ಬೆಂಕಿ : ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಬೆಂಗಳೂರಿನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದ ಏರ್‌ ಇಂಡಿಯಾ ಎಕ್ಸಪ್ರೆಸ್‌ ವಿಮಾನವು ಶನಿವಾರ ತಡರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದೆ.…

48 mins ago

ಸಿಂಗಾಪುರದಲ್ಲಿ ಹೆಚ್ಚುತ್ತಿರುವ ಕೊರೊನಾ ಅಲೆ ಭೀತಿ : ಮಾಸ್ಕ್‌ ಧರಿಸುವಂತೆ ಆದೇಶ

ಸಿಂಗಾಪುರದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಭೀತಿ ಎದುರಾಗಿದ್ದು, ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಜನರಿಗೆ ಮಾಸ್ಕ್‌…

51 mins ago