Ad

ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿಗೆ ಒಲಿದ ಅವಾರ್ಡ್

Sringeri

ಬೆಂಗಳೂರು: ಸ್ಯಾಂಡಲ್​ವುಡ್​​ ನಟಿ, ಬಿಗ್​ಬಾಸ್​ ಬೆಡಗಿ ಸಂಗೀತಾ ಶೃಂಗೇರಿ ಅಭಿಮಾನಿಗಳು ಸದ್ಯ ಫುಲ್​ ಖುಷ್​ ಆಗಿದ್ದಾರೆ. ಚಾರ್ಲಿ ನಟಿ ಬಿಗ್​ಬಾಸ್​ಗೆ ಹೋದ ಮೇಲೆ ಸಖತ್​ ಫೇಮಸ್​ ಆಗಿದ್ದರು.

ಇತ್ತೀಚೆಗೆ ಅನುಬಂಧ ಅವಾರ್ಡ್ ಯೂತ್ ಐಕಾನ್​ಗೆ ಹೆಸರು ಬಹಿರಂಗವಾಗಿತ್ತು. 9 ಮಂದಿ ನಾಮಿನೇಟ್‌ ಆಗಿದ್ದರು. ಅದರಲ್ಲಿ ಭಾಗ್ಯ, ವೈಷ್ಣವ್‌, ರಚನಾ, ಅಪ್ಪು, ರಾಮಚಾರಿ, ಕರ್ಣ, ಆರಾಧನಾ, ತೀರ್ಥ ಮತ್ತು ಸಂಗೀತಾ ಶೃಂಗೇರಿ ನಾಮಿನೇಟ್ ಆದ ಸಾಲಿನಲ್ಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಸಂಗೀತಾ ಶೃಂಗೇರಿ ಹೆಸರು ಕಾಣಿಸಿರುವುದು ಅಭಿಮಾನಿಗಳಿಗೆ ಇನ್ನಿಲ್ಲದ ಸಂಭ್ರಮಕ್ಕೆ ಕಾರಣವಾಗಿತ್ತು.

ಸದ್ಯ ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಕಲರವ ಶುರುವಾಗಿದೆ. ನಟಿ ಸಂಗೀತಾ ಶೃಂಗೇರಿಗೆ ಅನುಬಂಧ ಕಾರ್ಯಕ್ರಮದಲ್ಲಿ ಅವಾರ್ಡ್​ವೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅನುಬಂಧ ಅವಾರ್ಡ್ಸ್ 2024 ನಡೆದಿದೆ. ಆದರೆ ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ನಟಿ ಸಂಗೀತಾ ಶೃಂಗೇರಿ ಅವರ ಫೋಟೋ ವೈರಲ್​ ಆಗಿದೆ. ಅನುಬಂಧ ಅವಾರ್ಡ್ಸ್ 2024 ಕಾರ್ಯಕ್ರಮದಲ್ಲಿ ನಟಿ ಜನ ಮೆಚ್ಚಿದ YOUTH ICON ಅವಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ ಎನ್ನಲಾಗುತ್ತಿರುವ ಫೋಟೋ ವೈರಲ್ ಆಗಿದೆ.

Ad
Ad
Nk Channel Final 21 09 2023