Bengaluru 22°C
Ad

ಲೇಟೆಸ್ಟ್​ ಅಪ್​ಡೇಟ್: ಟಾಕ್ಸಿಕ್ ಟೀಂ ಸೇರಿಕೊಂಡ ಅಮೆರಿಕದ ಖ್ಯಾತ ನಟ

Toxic

ರಾಕಿ ಭಾಯ್ ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಆದರೂ ಏನು ಎಂಬುವುದು ಅಭಿಮಾನಿಗಳಲ್ಲಿ ಕುತೂಹಲ ಇದೆ. KGF ಸಿನಿಮಾದ ನಂತರ ಯಶ್ ಮತ್ತೆ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದು ಬೇರೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಕೆವಿಎನ್​ ನಿರ್ಮಾಣದಲ್ಲಿ ತಯಾರಾಗ್ತಿರುವ ಟಾಕ್ಸಿಕ್ ಸಿನಿಮಾವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಡೈರೆಕ್ಟ್ ಮಾಡುತ್ತಿದ್ದಾರೆ.

ಇದೀಗ ಟಾಕ್ಸಿಕ್ ಸಿನಿಮಾ ಕುರಿತು ಲೇಟೆಸ್ಟ್​ ಅಪ್​ಡೇಟ್​ವೊಂದು ಸಿಕ್ಕಿದ್ದು, ಈ ಸಿನಿಮಾಗೆ ಮತ್ತೊಂದು ರೋಲ್ ಯಾರೆಂಬುದು ರಿವೀಲ್ ಆಗಿದೆ. ಬಾಲಿವುಡ್​​, ಕಾಲಿವುಡ್ ಆಯ್ತು, ಈಗ ಹಾಲಿವುಡ್​ನಿಂದ ಸ್ಟಾರ್​​ ನಟನೊಬ್ಬ ಕನ್ನಡದ ಟಾಕ್ಸಿಕ್ ಸಿನಿಮಾದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ಹೌದು, ಅಮೆರಿಕಾದ ಖ್ಯಾತ ನಟ ಕಿಲಿ ಪೌಲ್ ಟಾಕ್ಸಿಕ್ ಟೀಂ ಸೇರಿಕೊಂಡಿದ್ದಾರೆ.

ಈಗಾಗಲೇ ಸ್ಟಾರ್ ನಟ ಕಿಲಿ ಪೌಲ್ ಟಾಕ್ಸಿಕ್ ಸಿನಿಮಾ ಶೂಟಿಂಗ್​ನಲ್ಲು ಭಾಗಿಯಾಗಿದ್ದು, ಒಂದಷ್ಟು ಸಿನಿಮಾ ಶೂಟಿಂಗ್​ ನಡೆಲಾಗಿದೆ. ಕಿಲಿ ಪೌಲ್ ಜೊತೆಗೆ ಬೆನೆಡಿಕ್ಟ್ ಗ್ಯಾರೆಟ್ ಕೂಡ ಪ್ರಮುಖ ಪಾತ್ರವನ್ನು ನಿಭಾಯಿಸ್ತಿದ್ದಾರೆ.

Ad
Ad
Nk Channel Final 21 09 2023