Ad

ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್​ ಸಿನಿಮಾಗೆ ಅಭಿಮಾನಿ ಕೈಯಲ್ಲಿ ಕ್ಲ್ಯಾಪ್

Yash (2)

ಬೆಂಗಳೂರು: ಯಶ್ ಅಭಿನಯದ 19ನೇ ಸಿನಿಮಾ ಟಾಕ್ಸಿಕ್ ಕಥೆ ಏನಿರಬಹುದು ಎಂದೂ ಫ್ಯಾನ್ಸ್​ ವಲಯದಲ್ಲಿ ಕುತೂಹಲವಿದೆ. ಯಶ್ ಅವರ ಹೊಸ ಸಿನಿಮಾದ ಅಪ್​ಡೇಟ್ ಏನಾದರೂ ಸಿಗುತ್ತೆಂದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಬೆನ್ನಲ್ಲೇ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್​ ಸಿನಿಮಾಗೆ ಅಭಿಮಾನಿ ಕೈಯಲ್ಲಿ ಕ್ಲ್ಯಾಪ್ ಮಾಡಿಸಿದ್ದಾರೆ.

Gubvuyhw4aefy6j

ಕಳೆದೆರಡು ದಿನಗಳಿಂದ ಟೆಂಪಲ್‌ ರನ್‌ ಮಾಡಿದ ಯಶ್‌ ಇದೀಗ ಭರ್ಜರಿ ಸಿಹಿ ಸುದ್ದಿ ಕೊಟ್ಟಿದ್ದಾರೆ. ಬಹು ನಿರೀಕ್ಷಿತ ಮೂವಿ ಟಾಕ್ಸಿಕ್​ಗೆ ಮುಹೂರ್ತ ಇಟ್ಟ ಸರಿಯಾದ ಸಮಯಕ್ಕೆ ಪೂಜೆ ನೆರವೇರಿಸಿದ್ದಾರೆ. ಟಾಕ್ಸಿಕ್ ಅದ್ಧೂರಿಯಾಗಿ ಸೆಟ್ಟೇರಿದೆ. ಚಿತ್ರತಂಡ- ಆಪ್ತರ ಸಮ್ಮುಖದಲ್ಲಿ ಟಾಕ್ಸಿಕ್ ಮೂವಿ ಮುಹೂರ್ತದ ದೇವರ ಪೂಜೆ ಮಾಡಲಾಯಿತು. ಇಲ್ಲಿ ಇನ್ನೊಂದು ವಿಶೇಷ ಎಂದರೆ ಟಾಕ್ಸಿಕ್​ಗೆ ಅಭಿಮಾನಿ ಕೈಯಿಂದಲೇ ಕ್ಲ್ಯಾಪ್ ಮಾಡಿಸಲಾಗಿದೆ.

ಹೌದು. . ಸುನೀಲ್ ಎನ್ನುವ ಅಭಿಮಾನಿ ಕ್ಲ್ಯಾಪ್ ಮಾಡಿಸಿದ್ದಾರೆ. ಯಶ್ ಅವರ ಬಹುತೇಕ ಸಿನಿಮಾಗಳಿಗೆ ಸುನೀಲ್ ಅವರೇ ಕೆಲಸ ಮಾಡಿದ್ದಾರೆ. ಒಳ್ಳೆಯ ಕೆಲಸಗಾರ. ಯಶ್ ಅವರ ಮಾತನ್ನು ತೆಗೆದು ಹಾಕದೆ ಕೆಲಸ ಮಾಡುತ್ತಾರೆ. ಅಲ್ಲದೇ ಸುನೀಲ್, ಯಶ್​​ಗೆ ದೊಡ್ಡ ಅಭಿಮಾನಿ ಕೂಡ ಆಗಿದ್ದಾರೆ. ಈ ಎಲ್ಲ ಕಾರಣಗಳಿಂದ ಯಶ್ ಅವರು ಅಭಿಮಾನಿ ಸನೀಲ್​ರಿಂದ ಕ್ಲ್ಯಾಪ್ ಮಾಡಿಸಿದ್ದಾರೆ.

Ad
Ad
Nk Channel Final 21 09 2023