ನಟ ಯಶ್ ಅವರು ‘ಟಾಕ್ಸಿಕ್’ ಸಿನಿಮಾಗೂ ಮುನ್ನ ಸಲ್ಮಾನ್ ಖಾನ್ ಬ್ಯಾನರ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
‘ಆ್ಯಂಗ್ರಿ ಯಂಗ್ ಮ್ಯಾನ್’ ಬಾಲಿವುಡ್ ಟ್ರೈಲರ್‌ನಲ್ಲಿ ಯಶ್ ಕಾಣಿಸಿಕೊಳ್ಳುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ. ಸಲ್ಮಾನ್ ಖಾನ್ ನಿರ್ಮಾಣದಲ್ಲಿ ಬಾಲಿವುಡ್‌ನ ರೈಟರ್ ಸಲೀಂ ಖಾನ್ ಮತ್ತು ಜಾವೇದ್ ಕುರಿತು ಡಾಕ್ಯುಮೆಂಟರಿ ಟ್ರೈಲರ್ ಅನ್ನು ರಿಲೀಸ್ ಮಾಡಲಾಗಿದೆ. ಈ ಡಾಕ್ಯುಮೆಂಟರಿ ಬಗ್ಗೆ ಸಲ್ಮಾನ್ ಖಾನ್, ಹೃತಿಕ್ ರೋಷನ್, ಜಯಾ ಬಚ್ಚನ್, ಬಿಗ್ ಬಿ ಸೇರಿದಂತೆ ಅನೇಕರು ಸಲೀಂ ಮತ್ತು ಜಾವೇದ್ ಅವರ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಸೌತ್ ಚಿತ್ರರಂಗದಿಂದ ಯಶ್ ಒಬ್ಬರೇ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಆ.20ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ‘ಆ್ಯಂಗ್ರಿ ಯಂಗ್ ಮ್ಯಾನ್’ ಡಾಕ್ಯುಮೆಂಟರಿ ಬಗ್ಗೆ ಮಾತನಾಡಿದ ಯಶ್, ಇವತ್ತು ಜನ ಯಾಕೆ ಆ ಡೈಲಾಗ್ ಹೇಳುತ್ತಾರೆ. ಅದನ್ನು ನೆನಪಿಡುತ್ತಾರೆ ಗೊತ್ತಾ? ಯಾಕೆಂದರೆ ಅವುಗಳು ಡೈಲಾಗ್‌ಗಳಾಗಿರಲಿಲ್ಲ. ಅದು ಫಿಲಾಸಫಿ ಆಗಿತ್ತು ಎಂದು ಯಶ್ ಮಾತನಾಡಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಬ್ಯಾನರ್‌ನಲ್ಲಿ ರಾಕಿ ಬಾಯ್ ಕಾಣಿಸಿಕೊಂಡಿದ್ದಾರೆ.