Ad

ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಕೆಲಸ ಮಾಡುವುದು ತುಂಬಾ ಸುಲಭ : ಕಂಗನಾ ರಣಾವತ್

2024ರ ಲೋಕಸಭಾ ಚುನಾವಣೆಯಲ್ಲಿ ಕಂಗನಾ ರಣಾವತ್ ಅವರು ಮಂಡಿ ಕ್ಷೇತ್ರದಿಂದ ಗೆದ್ದಿದ್ದಾರೆ. ಇದೀಗ ಕಂಗನಾ ಅವರು ಸಂದರ್ಶನವೊಂದರಲ್ಲಿ ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಕೆಲಸ ಮಾಡುವುದು ತುಂಬಾ ಸುಲಭ ಎಂದು ಹೇಳಿಕೊಂಡಿದ್ದಾರೆ.

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಕಂಗನಾ ರಣಾವತ್ ಅವರು ಮಂಡಿ ಕ್ಷೇತ್ರದಿಂದ ಗೆದ್ದಿದ್ದಾರೆ. ಇದೀಗ ಕಂಗನಾ ಅವರು ಸಂದರ್ಶನವೊಂದರಲ್ಲಿ ರಾಜಕೀಯಕ್ಕಿಂತ ಸಿನಿಮಾಗಳಲ್ಲಿ ಕೆಲಸ ಮಾಡುವುದು ತುಂಬಾ ಸುಲಭ ಎಂದು ಹೇಳಿಕೊಂಡಿದ್ದಾರೆ.

Ad
300x250 2

ಕಂಗನಾ ಮಾತನಾಡಿ, ರಾಜಕೀಯಕ್ಕೆ ಸೇರಲು ನನ್ನನ್ನು ಸಂಪರ್ಕಿಸಿದ್ದು ಇದೇನು ಮೊದಲಲ್ಲ. ನಾನು ಈ ಹಿಂದೆ ಹಲವಾರು ಇತರ ಆಫರ್‌ಗಳನ್ನು ಸ್ವೀಕರಿಸಿದ್ದೇನೆ. ʻಗ್ಯಾಂಗ್‌ಸ್ಟರ್ʼ ಸಿನಿಮಾ ಬಳಿಕವೇ ನನಗೆ ಆಫರ್‌ ಬಂದಿತ್ತು.

ನನ್ನ ದೊಡ್ಡಪ್ಪ ಕೂಡ ಶಾಸಕರಾಗಿದ್ದರು. ಹಾಗಾಗಿ ರಾಜಕೀಯ ಹಿನ್ನೆಲೆಯ ಕುಟುಂಬ ನಮ್ಮದಾಗಿದ್ದರಿಂದ ಹಲವು ನಾಯಕರು ನಮ್ಮನ್ನು ಸಂಪರ್ಕಿಸುತ್ತಾರೆ. ಇದು ತುಂಬಾ ಸಾಮಾನ್ಯವಾಗಿದೆ. ವಾಸ್ತವವಾಗಿ, ನನ್ನ ತಂದೆಗೆ ಆಫರ್ ಬಂದಿತ್ತು. ನನ್ನ ತಂಗಿ ಆ್ಯಸಿಡ್ ದಾಳಿಯಿಂದ ಬದುಕುಳಿದ ನಂತರ ರಾಜಕೀಯ ಸೇರಲು ಆಫರ್ ಬಂದಿತ್ತು ಎಂದು ಹೇಳಿಕೊಂಡಿದ್ದಾರೆ.

Ad
Ad
Nk Channel Final 21 09 2023
Ad