ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಜನಪ್ರಿಯತೆ ಪಡೆದಿರುವ ವರ್ಷ ಕಾವೇರಿ ನಿನ್ನೆ ತಮ್ಮ ಮಾಜಿ ಬಾಯ್‌ಫ್ರೆಂಡ್ ವರುಣ್ ಆರಾಧ್ಯ ವಿರುದ್ಧ ದೂರು ನೀಡಿದ್ದರು. 2019ರಿಂದ ವರ್ಷ ಕಾವೇರಿ ಮತ್ತು ವರುಣ್ ಅರಾಧ್ಯ ಪ್ರೀತಿಸುತ್ತಿದ್ದರು…ಎಲ್ಲಿ ನೋಡಿದರೂ ಅವರದ್ದೇ ರೀಲ್ಸ್ ಮತ್ತು ವಿಡಿಯೋ. ಒಂದು ಸಮಯದಲ್ಲಿ ಇವರಿಬ್ಬರ ಖಾಸಗಿ ವಿಡಿಯೋ ವೈರಲ್ ಆಗಿತ್ತು ಎಂದು ಟ್ರೋಲ್ ಪೇಜ್‌ಗಳು ಫೋಟೋ ವೈರಲ್ ಮಾಡಿದ್ದರು, ಆಗಲೂ ನಾವಲ್ಲ ನಾವು ಆ ರೀತಿ ಮಾಡುವುದಿಲ್ಲ ನಮ್ಮ ಬೆಳವಣಿಗೆಯನ್ನು ಯಾರೋ ಸಹಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ರೀಲ್ಸ್ ಮೂಲಕ ಫೇಮಸ್ ಆಗಿದ್ದ ಇವರು ನಂತರ ಕಲರ್ಸ್ ಕನ್ನಡದ ‘ಬೃಂದಾವನ’ ಧಾರಾವಾಹಿಯಲ್ಲಿ ನಟಿಸಿದರು. ಈಗ ಅವರು ಮಾಜಿ ಗೆಳೆತಿ ವರ್ಷಾ ಕಾವೇರಿಗೆ ಬ್ಲ್ಯಾಕ್ಮೇಲೆ ಮಾಡುತ್ತಿದ್ದಾರೆ ಎಂದು ವರದಿ ಆಗಿತ್ತು. ಆದರೆ, ಆ ರೀತಿ ಇಲ್ಲ ಎಂದು ವರ್ಷಾ ಕಾವೇರಿ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ. ತಾವು ದೂರು ನೀಡಿದ್ದು ಏಕೆ ಎಂಬ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ವರ್ಷ ಕಾವೇರಿ ಪೋಸ್ಟ್:
‘ಸಾಮಾಜಿಕ ಜಾಲತಾಣದಲ್ಲಿ ನೀವು ನೋಡುತ್ತಿರುವುದು ಫೇಕ್ ನ್ಯೂಸ್. ನಾನು ದೂರು ನೀಡಿರುವುದು ನಮ್ಮ ರೀಲ್ಸ್ ಮತ್ತು ಫೋಟೋಗಳನ್ನು ಗೂಗಲ್‌ನಿಂದ ಡಿಲೀಟ್ ಮಾಡುವುದಕ್ಕೆ. ದಯವಿಟ್ಟು ಫೇಕ್ ನ್ಯೂಸ್ ಹರಡಿಬೇಡಿ’ ಎಂದು ವರ್ಷ ಕಾವೇರಿ ಬರೆದುಕೊಂಡಿದ್ದಾರೆ.
‘ಯಾರೆಲ್ಲಾ ಹರಿದಾಡುತ್ತಿರುವ ನ್ಯೂಸ್ ನೋಡಿಕೊಂಡು ಕಾಮೆಂಟ್ ಮಾಡುತ್ತಿದ್ದೀರಿ ದಯವಿಟ್ಟು ಮೂರು ದಿನಗಳ ಕಾಯಬೇಕಿದೆ. ಸ್ಪಷ್ಟವಾಗಿ ಕ್ಲಾರಿಟಿ ಕೊಡಲು ನಿಮ್ಮ ಮುಂದೆ ಬರುತ್ತೀನಿ’ ಎಂದು ವರ್ಷ ಹೇಳಿದ್ದಾರೆ.