ತಮಿಳು, ತೆಲಗು ಸಿನಿಮಾಗಳ ಪ್ರಮುಖ ನಟಿಯಾಗಿರುವ ಸಮಂತಾ, ಚೆನ್ನೈನ ಪಲ್ಲವರಂನಲ್ಲಿ ಜನಿಸಿ ಬೆಳೆದ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ವರ್ಷಗಳು ಕಳೆದರೂ ನಟಿ ಸಮಂತಾ ವಿಚ್ಛೇದನದ ಸುದ್ದಿ ಇನ್ನೂ ತಣ್ಣಗಾಗಿಲ್ಲ. ಹೀಗಿರುವಾಗ ಇತ್ತೀಚೆಗೆ ಸಮಂತಾ ಮದುವೆ ಸಮಾರಾಂಭವೊಂದರಲ್ಲಿ ಪಾಲ್ಗೊಂಡಿದ್ದಾರೆ.
ಸಮಂತಾರ ಅಣ್ಣ ಡೇವಿಡ್ ವಿದೇಶದಲ್ಲಿ ವಿದೇಶಿ ಮಹಿಳೆಯೊಟ್ಟಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದು, ವಿವಾಹ ಕಾರ್ಯಕ್ರಮದಲ್ಲಿ ನಟಿ ಸಮಂತಾ ಭಾಗಿಯಾಗಿದ್ದರು.ಮದುವೆ ಸಮಾರಂಭದಲ್ಲಿ ತಮ್ಮ ಕುಟುಂಬದ ಜೊತೆಗೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ ಸಮಂತಾ. ತಾಯಿ, ತಂದೆ, ಸಹೋದರರು ಇನ್ನೂ ಕೆಲವು ಹತ್ತಿರದ ಬಂಧುಗಳು, ಗೆಳೆಯರೊಟ್ಟಿಗೆ ಸಮಂತಾ ಸಮಯ ಕಳೆದಿದ್ದಾರೆ. ಸಮಂತಾಗೆ ಇಬ್ಬರು ಸಹೋದರರು ಡೇವಿಡ್ ಪ್ರಭು ಹಾಗೂ ಜಾನಥನ್ ಪ್ರಭು. ಇದೀಗ ಡೇವಿಡ್ ಪ್ರಭು ನಿಖೋಲೆ ಜೊತೆಗೆ ಯುಎಸ್ನಲ್ಲಿ ವಿವಾಹವಾಗಿದ್ದಾರೆ.
Ad