ತಮಿಳುನಾಡು: ತಮಿಳು ನಟ ವಿಜಯ್ ಸಕ್ರಿಯವಾಗಿ ರಾಜಕೀಯಕ್ಕೆ ಇಳಿದಿದ್ದು, ಸಿನಿಮಾದಿಂದ ದೂರಾಗಲು ಚಿಂತಿಸಿದ್ರು. ಹೀಗಾಗಿ ವಿಜಯ್ ನಟನೆಯ ಕೊನೆ ಸಿನಿಮಾದ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಮೂಲಗಳ ಪ್ರಕಾರ ‘ವಿಜಯ್ 69’ ಕೊನೆಯ ಸಿನಿಮಾ ಆಗಲಿದ್ದು, ಈ ಸಿನಿಮಾಗೆ ವಿಜಯ್ ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 200 ಕೋಟಿ.
‘ವಿಜಯ್ 69’ ಸಿನಿಮಾಗೆ ಡಿವಿವಿ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದ್ದು, ವೆಟ್ರಿ ಮಾರನ್ ಅಥವಾ ತ್ರಿವಿಕ್ರಮ್ ನಿರ್ದೇಶನ ಮಾಡುವ ಸಾಧ್ಯತೆಯಿದೆ.
ಇಷ್ಟು ಸಂಭಾವನೆ ಪಡೆಯುವ ಮೂಲಕ ಇಂಡಿಯಾದಲ್ಲೇ ಅತ್ಯಧಿಕ ಸಂಭಾವನೆ ಪಡೆದ ನಟ ಅನ್ನೋ ಖ್ಯಾತಿ ವಿಜಯ್ ಪಾಲಾಗಲಿದೆ.