ಬಾಲಿವುಡ್ನ ಖ್ಯಾತ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟ ಆಗಿದೆ. ಈಗಾಗಲೇ ಊರ್ಮಿಳಾ ಅವರು ಮುಂಬೈನ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪತಿ ಮೋಸಿನ್ ಅಖ್ತರ್ ಮೀರ್ ಜೊತೆಗಿನ ದಾಂಪತ್ಯಕ್ಕೆ ಅವರು ಅಂತ್ಯ ಹಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಹಲವು ವರ್ಷಗಳಿಂದ ಊರ್ಮಿಳಾ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಹಿಂದಿ, ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 2016ರಲ್ಲಿ ಕಾಶ್ಮೀರ ಮೂಲದ ಉದ್ಯಮಿ ಮೋಸಿನ್ ಅಖ್ತರ್ ಮೀರ್ ಜೊತೆ ಉರ್ಮಿಳಾ ಅವರ ಮದುವೆ ನಡೆದಿತ್ತು. ಕಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಅವರು ವಿವಾಹವಾಗಿದ್ದರು. ಆದರೆ ಈಗ ಅವರ ಸಂಸಾರದಲ್ಲಿ ಬಿರುಕು ಮೂಡಿದೆ ಎನ್ನಲಾಗಿದೆ.
Ad