Bengaluru 22°C
Ad

56ನೇ ಜನ್ಮದಿನದ ಸಂಭ್ರಮದಲ್ಲಿ ರಿಯಲ್‌ ಸ್ಟಾರ್‌, ನಿರ್ದೇಶಕ ಉಪೇಂದ್ರ

Uppi

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೇ ಇಡೀ ಭಾರತೀಯ ಚಿತ್ರರಂಗದಲ್ಲಿ ‘ರಿಯಲ್‌ ಸ್ಟಾರ್‌’ ಎಂದು ಖ್ಯಾತಿಯಾಗಿರುವ ಉಪೇಂದ್ರ ಅವರಿಗೆ ಇಂದು (ಸೆಪ್ಟೆಂಬರ್ 18) 56 ನೇ ಹುಟ್ಟುಹಬ್ಬದ ಸಂಭ್ರಮ.

ಈ ಹಿನ್ನೆಲೆಯಲ್ಲಿ ನಟನಿಗೆ ಸಿನಿಮಾರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಉಪೇಂದ್ರ ಅವರಿಗೆ ಚಂದನವನದ ತಾರೆಯರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಇನ್ನು ಅವರ ಬರ್ತ್​ಡೇನ ಫ್ಯಾನ್ಸ್ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಅವರ ಮನೆಯ ಎದುರು ಶಾಮಿಯಾನ ಹಾಕಿ ಕೇಕ್ ಕಟ್ ಮಾಡಲಾಗಿದೆ. ರಾತ್ರಿಯಿಂದಲೇ ಉಪ್ಪಿ ಮನೆ ಎದುರು ಫ್ಯಾನ್ಸ್ ಹಾಜರಿ ಹಾಕೋಕೆ ಆರಂಭಿಸಿದ್ದರು.

ಸದ್ಯ ಉಪೇಂದ್ರ ಅವರು ತಮ್ಮ ಬಹುನಿರೀಕ್ಷಿತ ಯುಐ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೇ ಅವರ ‘ತ್ರಿಶೂಲಂ’, ‘ಬುದ್ಧಿವಂತ 2’ ಸಿನಿಮಾಗಳು ನಿರ್ಮಾಣ ಹಂತದಲ್ಲಿವೆ. ಇದರ ನಡುವೆಯೇ ಅವರು ರಜನಿಕಾಂತ್ ಜೊತೆ ಕೂಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಆ ಚಿತ್ರದಲ್ಲಿ ಅವರು ಕಾಳೀಶ್ ಎಂಬ ಪಾತ್ರ ಮಾಡುತ್ತಿದ್ದಾರೆ.

Gxuywtwxmaevl1z

1968 ರಲ್ಲಿ ಉಡುಪಿಯ ಕೋಟೇಶ್ವರದಲ್ಲಿ ಜನಿಸಿದ ಉಪೇಂದ್ರ ಅವರು ‘ಅನಂತನ ಅವತಾರ’ ಚಿತ್ರದಲ್ಲಿ ನಟಿಸುವ ಮೂಲಕ ಉಪೇಂದ್ರ ಬೆಳ್ಳಿತೆರೆ ಪ್ರವೇಶಿಸಿದರು. ಇದು ತೆರೆಕಂಡಿದ್ದು 1989ರಲ್ಲಿ. ಅವರು ನಿರ್ದೇಶಿಸಿದ ಮೊದಲ ಚಿತ್ರ ‘ತರ್ಲೆ ನನ್ಮಗ’. ಬಳಿಕ ಹಲವು ಸಿನಿಮಾಗಳನ್ನು ನಿರ್ದೇಶಿಸಿದ ಅವರು ‘ಎ’ ಸಿನಿಮಾದ ಮೂಲಕ ನಾಯಕ ನಟನಾದರು. ಉಪ್ಪಿ ನಿರ್ದೇಶಿಸಿದ ‘ಓಂ’ ಸಿನಿಮಾ ಇಂದಿಗೂ ಸಿನಿಪ್ರಿಯರ ಮನದಲ್ಲಿ ಅಚ್ಚಳಿಯದೆ ಉಳಿದಿದೆ.

Ad
Ad
Nk Channel Final 21 09 2023