Bengaluru 24°C
Ad

ಜೂ. 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ “ತುಡರ್” ತುಳು ಚಿತ್ರ

ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಚಿತ್ರ ಜೂ. 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದ್ದೆ ಎಂದು ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದ ಮೋಹನ್ ರಾಜ್ ತಿಳಿಸಿದ್ದಾರೆ.

ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಚಿತ್ರ ಜೂ. 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದ್ದೆ ಎಂದು ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದ ಮೋಹನ್ ರಾಜ್ ತಿಳಿಸಿದ್ದಾರೆ.

ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಚಿತ್ರ ಬಿಡುಗಡೆಯ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ತುಡರ್ ಸಿನಿಮಾ ಈಗಾಗಲೇ ದೇಶ ವಿದೇಶಗಳಲ್ಲಿ ಪ್ರಿಮಿಯರ್ ಶೋ ಪ್ರದರ್ಶನಗೊಂಡಿದ್ದು ಸಾರ್ವತ್ರಿಕ ಶ್ಲಾಘನೆ ದೊಡ್ಡ ಮಟ್ಟದಲ್ಲಿ ಲಭ್ಯವಾಗಿದೆ.ಉತ್ತಮ ಚಿತ್ರಕಥೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಅಧಿಕ ಮಟ್ಟದಲ್ಲಿ ಆಕರ್ಷಿಸಿದೆ.

T (1)

ಇನ್ನೂ ಈ ಚಿತ್ರವು ಜೂನ್ ೧೪ ರಂದು ಕರಾವಳಿಯಾದ್ಯಂತ ಬಿಡುಗಡೆಯಾಗಲಿದ್ದು ನಗರದ ರೂಪವಾಣಿ,ಭಾರತ್ ಸಿನೆಮಾಸ್, ಪಿವಿಆರ್, ಸಿನಿಪೊಲಿಸ್,ಸುರತ್ಕಲ್ ಸಿನಿಗ್ಯಾಲಕ್ಸಿ, ಪಡುಬಿದ್ರೆ ಭಾರತ್ ಸಿನಿಮಾಸ್, ಉಡುಪಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದ ಐಕಾನ್ಸ್, ಭಾರತ್ ಸಿನಿಮಾಸ್, ಕಾರ್ಕಳದ ಪ್ಲಾನೆಟ್, ರಾಧಿಕಾ, ಪುತ್ತೂರಿನ ಭಾರತ್ ಸಿನಿಮಾಸ್, ಬೆಳ್ತಂಗಡಿಯ ಭಾರತ್ ಸಿನಿಮಾಸ್ ಚಿತ್ರ ಮಂದಿರದಲ್ಲಿ ಪ್ರದರ್ಶನಗಳಲಿದೆ‌.

ಕರಾವಳಿ ಪ್ರೇಕ್ಷಕರು ಭಯಸುವಂತಹ ಚಿತ್ರವನ್ನು ನಿರ್ಮಾನಿಸಿದ್ದೇವೆ ಪ್ರೇಕ್ಷಕರ ಸಹಕಾರ ಹೆಚ್ಚಿನ ಸಂಖ್ಯೆಯಲ್ಲಿ ಸಿಗಲಿ ಎಂದವರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಚಿತ್ರನಿರ್ಮಾಪಕ ವಿಲ್ಸನ್ ರೆಬೆಲ್ಲೊ, ಸಹ ನಿರ್ಮಾಪಕರಾದ ಹರೀಶ್ ಶೆಟ್ಟಿ, ವಿದ್ಯಾ ಸಂಪತ್, ನಿರ್ದೇಶಕರಾದ ತೇಜೇಶ್ ಪೂಜಾರಿ, ಎಲ್ಟನ್ ಮಸ್ಕರೇನ್ಹಸ್, ಚಿತ್ರ ನಟ ಸಿದ್ಧಾರ್ಥ್ ಎಚ್ ಶೆಟ್ಟಿ, ಚಿತ್ರದ ಕಲನಾಯಕ ವಿಕಾಸ್ ಪುತ್ರನ್,ಚಿತ್ರದ ಹಂಚಿಕೆದಾರ ಸಚಿನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Ad
Ad
Nk Channel Final 21 09 2023
Ad