ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್‌ಗೆ ಇಂದು 57ನೇ ಜನುಮದಿನದ ಸಂಭ್ರಮ. ಈ ವಿಶೇಷ ದಿನದಂದು ಫ್ಯಾನ್ಸ್‌ಗೆ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ. ಭೂತ್ ಬಂಗ್ಲಾ ಶೀರ್ಷಿಕೆಯ ತನ್ನ ಮುಂದಿನ ಹಾರರ್ ಕಾಮಿಡಿ ಸಿನಿಮಾವದ ಫಸ್ಟ್ ಲುಕ್ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.
ಫ್ಯಾನ್ಸ್‌ಗೆ ಗಿಫ್ಟ್ ಕೊಟ್ಟ ನಟ ಪೋಸ್ಟರ್ ಇದೀಗ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪಾಸಿಟಿವ್ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಆದರೆ ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಟ ಶೇರ್ ಮಾಡಿಕೊಂಡಿಲ್ಲ. ಕೇವಲ ಲುಕ್ ಮಾತ್ರ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ನಟ ಅಕ್ಷಯ್ ಕುಮಾರ್ ಪೋಸ್ಟರ್ ಹಂಚಿಕೊಂಡಿದ್ದಾರೆ. ” ನನ್ನ ಜನ್ಮದಿನದಂದು ಶುಭ ಹಾರೈಸಿದ ಎಲ್ಲರಿಗೂ, ನಿಮ್ಮ ಪ್ರೀತಿಗೂ ಧನ್ಯವಾದಗಳು! ‘ಭೂತ್ ಬಂಗ್ಲಾ’ದ ಮೊದಲ ಲುಕ್ ಈಗ ಔಟ್ ಆಗಿದೆ.14 ವರ್ಷಗಳ ನಂತರ ಮತ್ತೆ ಪ್ರಿಯದರ್ಶನ್ ಜತೆ ಜೈ ಜೋಡಿಸುತ್ತಿರುವುದು ತುಂಬ ಖುಷಿ ತಂದಿದೆ. ಈ ಅದ್ಭುತ ಪ್ರಯಾಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಸಖತ್ ಥ್ರಿಲ್ ಆಗಿದೆ ಹೊಸ ಲುಕ್! ಸಿನಿಮಾದ ಲುಕ್ ನೋಡಿದರೆ ಸಖತ್ ಥ್ರಿಲ್ ಆಗಿದೆ. ಅಕ್ಷಯ್ ಕುಮಾರ್ ಕೈಯಲ್ಲಿ ಹಾಲಿನ ಬೌಲ್ ಇದೆ. ನಟನ ಬೆನ್ನ ಹಿಂದೆ ಕಪ್ಪು ಬೆಕ್ಕು ಉಗ್ರವಾಗಿ ನಿಂತು ಪೋಸ್ ಕೊಟ್ಟಿದೆ. ಆದರೆ ಹಾಲು ಮಾತ್ರ ಬೆಕ್ಕು ಕುಡಿತಿಲ್ಲ, ನಟ ಹಾಲನ್ನು ಬೆಕ್ಕಿನಂತೆ ಕುಡಿಯುತ್ತಿದ್ದಾರೆ.