Bengaluru 25°C
Ad

ಟರ್ಕಿಯ ಟಿಕ್​​​​ಟಾಕ್​​ ಸ್ಟಾರ್ 5ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ

ವರನಿಲ್ಲದೇ ತನ್ನನ್ನು ತಾನೇ ಮದುವೆಯಾಗಿ ಅಂತರ್ಜಾಲದಲ್ಲಿ ಸುದ್ದಿಯಾಗಿದ್ದ 26 ವರ್ಷದ ಟರ್ಕಿಯ ಟಿಕ್​​​​ಟಾಕ್​​ ಸ್ಟಾರ್ ಕುಬ್ರಾ ಅಯ್ಕುತ್ ಅಪಾರ್ಟ್ಮೆಂಟ್ ನ 5ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ನವದೆಹಲಿ : ವರನಿಲ್ಲದೇ ತನ್ನನ್ನು ತಾನೇ ಮದುವೆಯಾಗಿ ಅಂತರ್ಜಾಲದಲ್ಲಿ ಸುದ್ದಿಯಾಗಿದ್ದ 26 ವರ್ಷದ ಟರ್ಕಿಯ ಟಿಕ್​​​​ಟಾಕ್​​ ಸ್ಟಾರ್ ಕುಬ್ರಾ ಅಯ್ಕುತ್ ಅಪಾರ್ಟ್ಮೆಂಟ್ ನ 5ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕುಬ್ರಾ ಅಯ್ಕುತ್ 2023ರಲ್ಲಿ ಅದ್ದೂರಿಯಾಗಿ ವಿವಾಹ ಸಮಾರಂಭದಲ್ಲಿ ತನ್ನನ್ನೇ ತಾನು ಮದುವೆಯಾಗುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡಿದ್ದಳು. ಕುಬ್ರಾ ಅಯ್ಕುತ್ ಕಳೆದ ವಾರ ಇಸ್ತಾನ್‌ಬುಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದು, ಇದೀಗ ಬೆಳಕಿಗೆ ಬಂದಿದೆ.

ಟಿಕ್‌ಟಾಕ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್​​​​​ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 200,000 ಕ್ಕೂ ಹೆಚ್ಚು ಹಿಂಬಾಲಕರನ್ನು ಅಯ್ಕುತ್ ಹೊಂದಿದ್ದಳು. ಇತ್ತೀಚೆಗೆ ತೂಕ ಹೆಚ್ಚಿಸಲು ಆಕೆ ಹೆಣಗಾಡುತ್ತಿರುವ ಕುರಿತು ಹಲವಾರು ಪೋಸ್ಟ್‌ಗಳನ್ನು ಸಹ ಮಾಡಿದ್ದಳು. ತನ್ನ ಸಾವಿನ ಮೊದಲು ಆಕೆ ಟಿಕ್‌ಟಾಕ್‌ನಲ್ಲಿ ಅಪಾರ್ಟ್ಮೆಂಟ್ ಅನ್ನು ಸ್ವಚ್ಛಗೊಳಿಸುತ್ತಿದ್ದದನ್ನು ಪೋಸ್ಟ್​ ಮಾಡಿದ್ದಳು

Ad
Ad
Nk Channel Final 21 09 2023