ನಿರ್ದೇಶಕನಿಗೆ ರಾಷ್ಟ್ರ ಪ್ರಶಸ್ತಿ ಹಿಂದಿರುಗಿಸಿ ವಿಶ್‌ ಮಾಡಿ ಕ್ಷಮೆಯಾಚಿಸಿದ ಕಳ್ಳರು!

ತಮಿಳುನಾಡು: ವಿಲಕ್ಷಣ ಘಟನೆಯೊಂದರಲ್ಲಿ, ದರೋಡೆಕೋರರ ಗುಂಪೊಂದು ತಮಿಳು ನಿರ್ದೇಶಕ ಮಣಿಕಂದನ್ ಅವರ ಮಧುರೈ ನಿವಾಸದಿಂದ ಕದ್ದ ರಾಷ್ಟ್ರೀಯ ಪ್ರಶಸ್ತಿ ಪದಕಗಳನ್ನು ಹಿಂದಿರುಗಿಸಿದ್ದೇ ಅಲ್ಲದೆ, ಜೊತೆಗೆ ಕ್ಷಮೆಯಾಚನೆಯ ಟಿಪ್ಪಣಿಯನ್ನು ಸಹ ಕಳುಹಿಸಿದ್ದಾರೆ.

ಕೆಲವು ದಿನಗಳ ಹಿಂದೆ ತಮಿಳುನಾಡಿನ ಮಧುರೈನಲ್ಲಿರುವ ಮಣಿಕಂದನ್ ಅವರ ಉಸಿಲಂಪಟ್ಟಿ ನಿವಾಸದಲ್ಲಿ ಕಳ್ಳತನ ನಡೆದಿತ್ತು. ಈ ಸಮಯದಲ್ಲಿ ಮನೆ ಮಂದಿಯೆಲ್ಲ ಚೆನ್ನೈಗೆ ತೆರಳಿದ್ದರು. ಈ ವೇಳೆ ನಗದು ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದ್ದು, ಪೊಲೀಸರು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕೆಲವು ದಿನಗಳ ಬಳಿಕ, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ, ಮನೆಯ ಕಾಂಪೌಂಡ್ ಗೋಡೆಗೆ ನೇತಾಡುತ್ತಿದ್ದ ಪಾಲಿಥಿನ್ ಬ್ಯಾಗ್, ಅದರೊಳಗೆ ಮಣಿಕಂದನ್ ಅವರ ರಾಷ್ಟ್ರೀಯ ಪ್ರಶಸ್ತಿ ಪದಕ ಮತ್ತು ಕ್ಷಮೆ ಯಾಚನೆಯ ಟಿಪ್ಪಣಿಯನ್ನು ಕಂಡುಕೊಂಡರು. ‘ಸರ್, ದಯವಿಟ್ಟು ನಮ್ಮನ್ನು ಕ್ಷಮಿಸಿ, ನಿಮ್ಮ ಶ್ರಮದ ಫಲ ನಿಮ್ಮದೇ’ ಎಂದು ಟಿಪ್ಪಣಿ ಬರೆಯಲಾಗಿದೆ.

ಕಳ್ಳರು, ನಿರ್ದೇಶಕರ ಮನೆಯ ಕಳ್ಳತನಕ್ಕೇ ಟ್ವಿಸ್ಟ್ ಕೊಟ್ಟು ಅವರಿಗೆ ಕ್ಷಮೆಯಾಚನೆ ಪತ್ರ ಬರೆದಿದ್ದಾರೆ. ಜೊತೆಗೆ, ರಾಷ್ಟ್ರ ಪ್ರಶಸ್ತಿ ಫಲಕ ಹಿಂದಿರುಗಿಸಿದ್ದಾರೆ. ಮಣಿಕಂದನ್ ಅವರು ‘ಕಾಕ ಮುತ್ತೈ’ ಚಿತ್ರದ ನಿರ್ದೇಶನದೊಂದಿಗೆ ಗುರುತಿಸಿಕೊಂಡರು. ಇದು ಅತ್ಯುತ್ತಮ ಮಕ್ಕಳ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿತು. ಅವರ ಕೊನೆಯ ಚಿತ್ರ ‘ಕಡೈಸಿ ವಿವಸಾಯಿ’ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Ashitha S

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

3 mins ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

8 mins ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

22 mins ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

43 mins ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

1 hour ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

1 hour ago