Ad

ಪೊಕೆಮೋನ್ ಮಿಸ್ಟಿ ಮತ್ತು ಜೆಸ್ಸಿ ಪಾತ್ರಗಳಿಗೆ ಧ್ವನಿ ನೀಡಿದ್ದ ರಾಚೆಲ್ ಲಿಲ್ಲಿ ನಿಧನ

Rachael Lillis

ಜನಪ್ರಿಯ ಮಲ್ಟಿಮೀಡಿಯಾಗಳಲ್ಲಿ ಒಂದಾದ ಪೊಕೆಮೋನ್ ದೂರದರ್ಶನ ಸರಣಿಯಲ್ಲಿ ಮಿಸ್ಟಿ ಮತ್ತು ಜೆಸ್ಸಿ ಪಾತ್ರಗಳಿಗೆ ಧ್ವನಿ ನೀಡುವ ಮೂಲಕ ಹೆಸರುವಾಸಿಯಾದ ರಾಚೆಲ್‌ ಲಿಲ್ಲಿಸ್(46) ನಿಧನರಾಗಿದ್ದಾರೆ.

ಆಕೆಯ ಸಹೋದ್ಯೋಗಿ ಮತ್ತು ಸ್ನೇಹಿತೆರಾದ ವೆರೋನಿಕಾ ಟೇಲರ್, ಆಶ್ ಕೆಚುಮ್ ಮತ್ತು ಅವರ ತಾಯಿ ಡೆಲಿಯಾಗೆ ಅನಿಮೆ ವರ್ಲ್ಡ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಶೋನ ಮೊದಲ ಎಂಟು ಸೀಸನ್‌ಗಳಿಗೆ ರಾಚೆಲ್‌ ಧ್ವನಿ ನೀಡುವ ಮೂಲಕ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದರು.

ಲಿಲ್ಲಿಸ್ ಅವರ ನಿಧನದ ಬಗ್ಗೆ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿರುವ ಟೇಲರ್‌ : “10 ಆಗಸ್ಟ್ 2024 ರ ಶನಿವಾರ ಸಂಜೆ ರಾಚೆಲ್ ಲಿಲ್ಲಿಸ್ ನಿಧನರಾದ ಸುದ್ದಿಯನ್ನು ನಾನು ತುಂಬಾ ಭಾರವಾದ ಹೃದಯದಿಂದ ಹಂಚಿಕೊಳ್ಳುತ್ತಿದ್ದೇನೆ.

ರಾಚೆಲ್ ಅಸಾಧಾರಣ ಪ್ರತಿಭೆ, ಅವರ ಧ್ವನಿಯಲ್ಲಿ ಎಲ್ಲರನ್ನು ರಂಜಿಸಿ, ಅವರಲ್ಲಿ ಹೊಸ ಬೆಳಕನ್ನು ತರುತ್ತಿದ್ದ ಅವರ ಅಸಾಮಾನ್ಯ ಪ್ರತಿಭೆ ನಿಜಕ್ಕೂ ಅವಿಸ್ಮರಣಿಯ. ಮಾತನಾಡುವುದು ಅಥವಾ ಹಾಡುವುದು ಎಲ್ಲದರಲ್ಲೂ ಅವರ ಪ್ರತಿಭೆ ಅದ್ಭುತ.

ಪೊಕೆಮೋನಿನ ಮಿಸ್ಟಿ ಮತ್ತು ಜೆಸ್ಸಿ ಎಂಬ ಅತ್ಯಂತ ಪ್ರೀತಿಯ ಪಾತ್ರಗಳಲ್ಲಿ ಅವರ ಅಪ್ರತಿಮ ಅಭಿನಯದೊಂದಿಗೆ ಅವರು ನಿರ್ವಹಿಸಿದ ಅನೇಕ ಅನಿಮೇಟೆಡ್ ಪಾತ್ರಗಳಿಗಾಗಿ ಅವರು ಶಾಶ್ವತವಾಗಿ ಅಭಿಮಾನಿಗಳ ನೆನಪಿನಲ್ಲಿ ಸದಾ ಉಳಿಯುತ್ತಾರೆ” ಎಂದಿದ್ದಾರೆ.

Ad
Ad
Nk Channel Final 21 09 2023