Bengaluru 22°C
Ad

ಅದ್ದೂರಿಯಾಗಿ ನಡೆದ ‘ಕೋಟಿ’ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮ

ಅದ್ದೂರಿಯಾಗಿ ನಡೆದ ಕೋಟಿ ಸಿನಿಮಾದ ವಿಶೇಷ ಪ್ರೀರಿಲೀಸ್ ಟೀವಿ ಕಾರ್ಯಕ್ರಮಕ್ಕೆ ಸುದೀಪ್  ಆಗಮಿಸಿದ್ದರು ಇದೆ ವೇಳೆ  ಡಾಲಿ‌ ಧನಂಜಯ ‘ಕೋಟಿ’  ಸಿನಿಮಾದ ಮೊದಲ‌ ಟಿಕೇಟನ್ನು ಚಿತ್ರತಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ನೀಡಿದೆ.

ಅದ್ದೂರಿಯಾಗಿ ನಡೆದ ಕೋಟಿ ಸಿನಿಮಾದ ವಿಶೇಷ ಪ್ರೀರಿಲೀಸ್ ಟೀವಿ ಕಾರ್ಯಕ್ರಮಕ್ಕೆ ಸುದೀಪ್  ಆಗಮಿಸಿದ್ದರು ಇದೆ ವೇಳೆ  ಡಾಲಿ‌ ಧನಂಜಯ ‘ಕೋಟಿ’  ಸಿನಿಮಾದ ಮೊದಲ‌ ಟಿಕೆಟ್ ನ್ನು ಚಿತ್ರತಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ನೀಡಿದೆ.

ಕಾರ್ಯಕ್ರಮಕ್ಕೆ ಸುದೀಪ್  ಆಗಮಿಸಿ ಸುಮಾರು ಒಂದು ಗಂಟೆಗಳಿಗೂ ಅಧಿಕ ಸಮಯ ವೇದಿಕೆಯ ಮೇಲಿದ್ದು‌ ನೆರೆದಿದ್ದ ಜನರ ರಂಜಿಸಿದರು. ಇದೇ ವೇದಿಕೆಯಲ್ಲಿ ಚಿತ್ರತಂಡ ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಕೋಟಿಯ ಮೊದಲ ಟಿಕೆಟ್ ನೀಡಿತು.

ಕೋಟಿ ಸಿನಿಮಾದ ವಿಶೇಷ ಪ್ರೀರಿಲೀಸ್ ಟೀವಿ ಚಿತ್ರದ ಹೊಸ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದ ಕಿಚ್ಚ ನಾಯಕನಟ ಧನಂಜಯ್ ಮತ್ತು ನಿರ್ದೇಶಕ ಪರಮ್ ಅವರಿಗೆ ಯಶಸ್ಸು‌ ಸಿಗಲಿ ಎಂದು ಶುಭ ಕೋರಿದರು.

ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್‌ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್‌ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್‌ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್‌ ಭಟ್‌ ಮತ್ತು ವಾಸುಕಿ ವೈಭವ್‌ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ನೊಬಿನ್‌ ಪೌಲ್‌ ಹೊತ್ತಿದ್ದಾರೆ. ಪ್ರತೀಕ್‌ ಶೆಟ್ಟಿಯವರು‌ ಕೋಟಿಯ ಸಂಕಲನಕಾರರಾದರೆ, ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಮನ್.

ಡಾಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ‌ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.

Ad
Ad
Nk Channel Final 21 09 2023
Ad