Bengaluru 24°C
Ad

ರೀ-ರಿಲೀಸ್ ಆಗುತ್ತಿದೆ ‘ಜಿಂದಗಿ ನ ಮಿಲೇಗಿ ದೋಬಾರಾ’ ಸಿನಿಮಾ

ಹಿಂದಿ ಚಿತ್ರರಂಗದ ಸಿನಿಮಾಗಳು ರೀ-ರಿಲೀಸ್ಗೆ ತಯಾರಾಗುತ್ತಿದ್ದು, ಪಿವಿಆರ್​​ ಐನಾಕ್ಸ್ ಸಿನಿಮಾಸ್​ ಕಡೆಯಿಂದ ‘ಜಿಂದಿಗಿ ನ ಮಿಲೇಗಿ ದೋಬಾರಾ’  ಸಿನಿಮಾ ರೀ-ರಿಲೀಸ್ ಮಾಡುವ ಘೋಷಣೆ ಆಗಿದೆ.

ಹಿಂದಿ ಚಿತ್ರರಂಗದ ಸಿನಿಮಾಗಳು ರೀ-ರಿಲೀಸ್ ಗೆ ತಯಾರಾಗುತ್ತಿದ್ದು, ಪಿವಿಆರ್​​ ಐನಾಕ್ಸ್ ಸಿನಿಮಾಸ್​ ಕಡೆಯಿಂದ ‘ಜಿಂದಿಗಿ ನ ಮಿಲೇಗಿ ದೋಬಾರಾ’  ಸಿನಿಮಾ ರೀ-ರಿಲೀಸ್ ಮಾಡುವ ಘೋಷಣೆ ಆಗಿದೆ.

ನಿರ್ದೇಶಕಿ ಜೋಯಾ ಅಖ್ತರ್ ನಿರ್ದೇಶಿಸಿದ ಈ ಚಿತ್ರ ರಿಲೀಸ್ ಆಗಿ 13 ವರ್ಷಗಳು ಕಳೆಯುತ್ತಾ ಬಂದಿವೆ. ಜೊತೆಗೆ ಜೋಯಾ ಅಖ್ತರ್ ಅವರ ನಿರ್ದೇಶನದ ಇತರ ಸಿನಿಮಾಗಳು ರಿಲೀಸ್ ಆಗಿವೆ.

‘ಜಿಂದಗಿ ನ ಮಿಲೇಗಿ ದೋಬಾರಾ’ ಸಿನಿಮಾದಲ್ಲಿ ಹೃತಿಕ್ ರೋಷನ್, ಕತ್ರಿನಾ ಕೈಫ್, ಫರ್ಹಾನ್ ಅಖ್ತರ್, ಅಭಯ್ ಡಿಯೋಲ್, ಕಲ್ಕಿ ಕೋಕ್ಲಿನ್ ಸೇರಿ ಅನೇಕರು ನಟಿಸಿದ್ದರು.

ಬೆಂಗಳೂರಿನಲ್ಲಿ ಕೋರಮಂಗಲ, ಮೈಸೂರು​ ರಸ್ತೆ ಹಾಗೂ ಡೈರೆಕ್ಟರ್ಸ್ ಕಟ್ ಫೋರಂ ರೆಕ್ಸ್ ವಾಕ್​ನಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇವುಗಳ ಜೊತೆಗೆ ‘ತಲಾಶ್’, ‘ಗಲ್ಲಿಬಾಯ್’, ‘ದಿಲ್ ದಡಕ್​ನೇದೋ’ ಸಿನಿಮಾಗಳು ಕೂಡ ಪಿವಿಆರ್​ನಲ್ಲಿ ಪ್ರದರ್ಶನ ಕಾಣಲಿವೆ.

‘ಜಿಂದಗಿ ನ ಮಿಲೇಗಿ ದೋಬಾರಾ’ ಸಿನಿಮಾ ಜೀವನದ ಜರ್ನಿ ಬಗ್ಗೆ ಈ ಚಿತ್ರ ಇತ್ತು. ಹಾಸ್ಯ, ಮೋಜು ಮಸ್ತಿಯಲ್ಲಿ ಸಾಗುವ ಸಿನಿಮಾದ ಕಥೆ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿತ್ತು.

Ad
Ad
Nk Channel Final 21 09 2023
Ad