ಬೆಂಗಳೂರು: ಹಿರಿಯ ನಟಿ ಸುಷ್ಮಾ ಸೇಠ್ ಅವರ ಮೊಮ್ಮಗಳು, ನಟಿ ದಿವ್ಯಾ ಸೇಠ್ ಶಾ ಅವರ ಪುತ್ರಿ ಮಿಹಿಕಾ ಶಾ ಸೋಮವಾರ ನಿಧನರಾದರು. ಆಕೆಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಈ ದುಃಖದ ಸುದ್ದಿಯನ್ನು ದಿವ್ಯಾ ಅವರು ಮಂಗಳವಾರ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ದಿವ್ಯಾ ಬರೆದುಕೊಂಡಿದ್ದಾರೆ, “ಆಗಸ್ಟ್ 8 ರಂದು ಮಿಹಿಕಾ ಸೇಠ್ ಗೌರವ ನಮನ ಪ್ರಾರ್ಥನೆ ನಡೆಯಲಿದೆ ಎಂದು ಪೋಸ್ಟ್ ಮೂಲಕ ತಿಳಿಸಿದ್ದಾರೆ.” ನೋಟಿನಲ್ಲಿ ದಿವ್ಯಾ ಮತ್ತು ಆಕೆಯ ಪತಿ ಸಿದ್ಧಾರ್ಥ್ ಶಾ ಸಹಿ ಕೂಡ ಇದೆ. ಮಗಳ ಸಾವಿಗೆ ಕಾರಣವನ್ನು ಅವರು ಟಿಪ್ಪಣಿಯಲ್ಲಿ ಬಹಿರಂಗಪಡಿಸಿಲ್ಲ.
ವರದಿಯು ಪ್ರಕಾರ ಮಿಹಿಕಾಗೆ ಮೊದಲು ಜ್ವರ ಮತ್ತು ನಂತರ ಮೂರ್ಛೆ ರೋಗ ಇತ್ತು ಎಂದು ವರದಿಯಾಗಿದೆ. ಇದೀಗ ಮಗಳ ಸಾವಿನಿಂದ ಕುಟುಂಬ ಇನ್ನೂ ಆಘಾತದಲ್ಲಿದೆ. ಕಳೆದ ವಾರವಷ್ಟೇ, ಕುಟುಂಬದ ಮೂರು ತಲೆಮಾರಿನ ಫೋಟೊವನ್ನು ದಿವ್ಯಾ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದರು.
Ad