ತೆಲುಗು

ಚೆಸ್‌ ಆಡುವ ಮೂಲಕ ನೊಬೆಲ್‌ ವಿಶ್ವ ದಾಖಲೆ ಮಾಡಿದ ಅಲ್ಲು ಅರ್ಜುನ್ ಪುತ್ರಿ

ಹೈದರಾಬಾದ್: ಟಾಲಿವುಡ್‌ನ ‘ಶಾಕುಂತಲಂ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿರುವ ಐದು ವರ್ಷದ ಪುಟಾಣಿ ಅರ್ಹಾ ಅರ್ಜುನ್‌ ಇದೀಗ ವಿಶ್ವದಾಖಲೆಯೊಂದನ್ನು ಮಾಡಿ ಗಮನ ಸೆಳೆದಿದ್ದಾಳೆ.

ನಟ ಅಲ್ಲು ಅರ್ಜುನ್ ಮಗಳಾದ ಅಲ್ಲು ಸಿನಿರಂಗಕ್ಕೆ ಪ್ರವೇಶಿಸುತ್ತಿರುವುದು ಈ ಕುಟುಂಬದ ನಾಲ್ಕನೆಯ ತಲೆಮಾರಿನ ಕುಡಿಯಾಗಿದ್ದಾಳೆ. ನಟನೆಯಲ್ಲಿಯೂ ಸೈ ಎನಿಸಿಕೊಂಡಿರುವ ಈಕೆ ಇದೀಗ ಚೆಸ್‌ ಆಡುವ ಮೂಲಕ ನೊಬೆಲ್‌ ವಿಶ್ವ ದಾಖಲೆ ಮಾಡಿದ್ದಾಳೆ. ಈಕೆ ಅತಿ ಚಿಕ್ಕ ವಯಸ್ಸಿಗೆ ಚೆಸ್ ಟ್ರೇನರ್ ಆಗಿದ್ದಾಳೆ.

ಈ ಕುರಿತು ಅಲ್ಲು ಅರ್ಜುನ್‌ ಪತ್ನಿ ಅಲ್ಲು ಸ್ನೇಹಾ ರೆಡ್ಡಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಶೇರ್‌ ಮಾಡಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ಅವರು, ತಮ್ಮ ಪುತ್ರಿಯ ಸಾಧನೆಯ ಕುರಿತು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಆಕೆ ಚೆಸ್‌ ಆಡುತ್ತಿರುವುದನ್ನು ನೋಡಬಹುದಾಗಿದೆ. ಜತೆಗೆ, ಅರ್ಹಾಗೆ ನೊಬೆಲ್ ವರ್ಲ್ಡ್​ ರೆಕಾರ್ಡ್ ನೀಡಿ ಗೌರವಿಸುವುದನ್ನು ನೋಡಬಹುದು.

ಸಮಂತಾ ಅಕ್ಕಿನೇನಿ ನಟನೆಯ ಶಾಕುಂತಲಂ ಸಿನಿಮಾದಲ್ಲಿ ಈಕೆಯದದ್ದು ಶಕುಂತಲೆ ಪುತ್ರ ಭರತನ ಪಾತ್ರ.’ಶಾಕುಂತಲಂ ಚಿತ್ರದೊಂದಿಗೆ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಸಂಗತಿ. ಇದು ನನ್ನ ಮಗಳಿಗೆ ಚೊಚ್ಚಲ ಸಿನಿಮಾವಾಗಿದೆ’ ಎಂದು ಬರೆದುಕೊಂಡ ಅಲ್ಲು ಅರ್ಜುನ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ಮಗಳು ದಾಖಲೆ ಮಾಡಿರುವುದನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.

Gayathri SG

Recent Posts

ಮಳೆಯಿಂದಾಗಿ ಪಂದ್ಯ ರದ್ದು; ಪ್ಲೇಆಫ್​ಗೇರಿದ್ದು ಯಾರು ?

ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್‌ಗೂ ಮುನ್ನವೇ…

10 mins ago

ಗುಡ್‌ ನ್ಯೂಸ್:‌ ಶುಗರ್‌, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ

ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ…

23 mins ago

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

9 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

10 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

10 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

11 hours ago