News Karnataka Kannada
Tuesday, April 23 2024
Cricket
ತೆಲುಗು

ಸಾವಿರ ಕೋಟಿ ಗಡಿಯಲ್ಲಿ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ!

Natu Naatu song from 'RRR' wins Oscar for Best Original Song
Photo Credit :

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾತೆರೆಗೆ ಬಂದು ಅನೇಕ ದಾಖಲೆಗಳನ್ನು ಪುಡಿಮಾಡಿದ್ದು,ಇದೀಗ ಚಿತ್ರದ ಕಲೆಕ್ಷನ್​ 1,000 ಕೋಟಿ ರೂಪಾಯಿ ಸಮೀಪಿಸಿದೆ.

ರಾಜಮೌಳಿ ಸಿನಿಮಾದ ಮೇಕಿಂಗ್​ಗೆ ಫ್ಯಾನ್ಸ್ ಫಿದಾ ಆಗಿದ್ದು, ಜ್ಯೂ.ಎನ್​ಟಿಆರ್​ ಹಾಗೂ ರಾಮ್​ ಚರಣ್​ ಅಭಿನಯದ ಈ ಚಿತ್ರ ಬಾಲಿವುಡ್​ ಅಂಗಳದಲ್ಲಿ, ವಿದೇಶದಲ್ಲಿ ಒಳ್ಳೆಯ ಕಮಾಯಿ ಮಾಡುತ್ತಿದೆ.

ಸಿನಿಮಾ ಅದ್ದೂರಿತನ ಕಂಡು ಅನೇಕರು ಮರಳಿಮರಳಿ ಚಿತ್ರಮಂದಿರಕ್ಕೆ ತೆರಳುತ್ತಿದ್ದು, ನಿಮಾ ವಿಶ್ವ ಮಟ್ಟದಲ್ಲಿ 969.2 ಕೋಟಿ ಬಾಚಿಕೊಂಡಿದೆ. ಈ ಮೂಲಕ ಹಲವು ಸಿನಿಮಾಗಳ ದಾಖಲೆಯನ್ನುಪುಡಿ ಮಾಡಿದೆ.

ಆಮಿರ್​ ನಟನೆಯ ‘ಪಿಕೆ’ ಚಿತ್ರದ ಲೈಫ್​ಟೈಮ್​ ಕಲೆಕ್ಷನ್​ 854 ಕೋಟಿ ರೂಪಾಯಿ. ಈ ಚಿತ್ರವನ್ನು ಕೆಲ ದಿನಗಳ ಹಿಂದೆಯೇ ಹಿಂದಿಕ್ಕಿತ್ತು ‘ಆರ್​ಆರ್​ಆರ್​’ ಚಿತ್ರ. ಆಮಿರ್ ಖಾನ್​ ಅಭಿನಯದ ‘ಸೀಕ್ರೆಟ್​ ಸೂಪರ್​ ಸ್ಟಾರ್​’ (966 ಕೋಟಿ ರೂಪಾಯಿ) ಹಾಗೂ ‘ಬಜರಂಗಿ ಭಾಯಿಜಾನ್’ (969 ಕೋಟಿ ರೂಪಾಯಿ) ಚಿತ್ರಗಳ ಲೈಫ್​ಟೈಮ್​ ಕಲೆಕ್ಷನ್​ ದಾಖಲೆಗಳನ್ನು ಬ್ರೇಕ್ ಮಾಡಿದೆ.

ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ರಾಜಮೌಳಿ ಅವರೇ ನಿರ್ದೇಶಿಸಿರುವ ‘ಬಾಹುಬಲಿ 2’ 1,810 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎರಡನೇ ಸ್ಥಾನದಲ್ಲಿದ್ದರೆ, ಆಮಿರ್ ಖಾನ್​ ಅಭಿನಯದ ‘ದಂಗಲ್​’ 2,024 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮೊದಲ ಸ್ಥಾನದಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು