ಬೆಂಗಳೂರು: ಸ್ಯಾಂಡಲ್‌ವುಡ್‌ನ ಭರವಸೆಯ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಲ್ ಮೊಂಥೆರೋ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತರುಣ್ ಮತ್ತು ಸೋನಲ್ ಸತಿ-ಪತಿ ಆಗಿದ್ದಾರೆ. ಹಿಂದೂ ಸಂಪ್ರದಾಯದಂತೆ ನಡೆಯಲಿರೋ ಈ ಮದುವೆಗೆ ಗಣ್ಯಾತಿ ಗಣ್ಯರು ಹಾಗೂ ಸಿನಿಮಾ ಗಣ್ಯರು ಆಗಮಿಸಿದ್ದರು. ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ತರುಣ್ ಮತ್ತು ಸೋನಲ್ ಮದುವೆ ನೆರವೇರಿದೆ.
ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್ಲೈನ್ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.
Ad