News Karnataka Kannada
Thursday, April 18 2024
Cricket
ತಮಿಳು

ತಮಿಳು ಸ್ಟಾರ್ ನಟ ಧನುಶ್​ಗೆ ನಿರ್ಮಾಪಕರ ಸಂಘದಿಂದ ನೊಟೀಸ್

Dhanush
Photo Credit : By Author

ದಕ್ಷಿಣ ಭಾರತದ ಪ್ರತಿಭಾವಂತ ನಟ, ಬಾಲಿವುಡ್​ನಲ್ಲೂ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ತಮಿಳು ಸ್ಟಾರ್ ಧನುಶ್​ ಹಾಲಿವುಡ್​ನಲ್ಲೂ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾನಲ್ಲಿ ಹಾಲಿವುಡ್ ಸ್ಟಾರ್ ನಟರೊಡನೆ ನಟಿಸಿ ಬಂದಿದ್ದಾರೆ. ಆದರೆ ಇದೀಗ ಹಠಾತ್ತನೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಧನುಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ನೊಟೀಸ್ ಜಾರಿ ಮಾಡಿದೆ. ತಮಿಳು ಚಿತ್ರರಂಗದಿಂದ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ನಟ ಧನುಶ್ ಮಾತ್ರವೇ ಅಲ್ಲದೆ ಇತರೆ ಕೆಲವು ಜನಪ್ರಿಯ ತಮಿಳು ನಟರಿಗೂ ನೊಟೀಸ್ ನೀಡಲಾಗಿದೆ ಎನ್ನಲಾಗುತ್ತಿದೆ. ನಟ ಧನುಶ್ ನಿರ್ಮಾಪಕರೊಬ್ಬರಿಗೆ ಮುಂಗಡ ಹಣ ಪಡೆದು ಈಗ ಸಿನಿಮಾದಲ್ಲಿ ನಟಿಸಲು ಸೂಕ್ತ ಡೇಟ್ಸ್ ನೀಡುತ್ತಿಲ್ಲವಂತೆ ಮಾತ್ರವಲ್ಲದೆ ಸಬೂಬುಗಳನ್ನು ಹೇಳುತ್ತಿದ್ದಾರಂತೆ.

ನಟ ಧನುಶ್, ತಮಿಳಿನ ಶ್ರೀ ತೆನಂದಾಲ್ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಒಂದಕ್ಕಾಗಿ ಮುಂಗಡ ಪಡೆದಿದ್ದರು. ಆದರೆ ಆ ಸಿನಿಮಾದಲ್ಲಿ ಈ ವರೆಗೆ ನಟಿಸಿಲ್ಲ. ಹಾಗಾಗಿ ತೆನಂದಾಲ್ ನಿರ್ಮಾಣ ಸಂಸ್ಥೆಯು ತಮಿಳು ಫಿಲಂ ಪ್ರೊಡ್ಯೂಸರ್ಸ್ ಕೌನ್ಸಿಲ್​ಗೆ (ಟಿಎಫ್​ಪಿಸಿ) ದೂರು ನೀಡಿತ್ತು. ಹಾಗಾಗಿ ಈಗ ಟಿಎಫ್​ಪಿಸಿಯು ಧನುಶ್​ಗೆ ನೊಟೀಸ್ ಜಾರಿ ಮಾಡಿದ್ದು, ನಿರ್ಮಾಪಕರ ಸಂಘದಿಂದ ನಿಷೇಧ ಹೇರುವ ಎಚ್ಚರಿಕೆಯನ್ನು ಸಹ ನೀಡಿದೆ ಎಂದು ಫಿಲ್ಮಿ ಮೂಲಗಳು ವರದಿ ಮಾಡಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು