Categories: ತಮಿಳು

ಆಸ್ಕರ್​​ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದ ಕೂಜಂಗಲ್

ತಮಿಳು ನಿರ್ದೇಶಕ ಪಿ.ಎಸ್.ವಿನೋತ್‌ರಾಜ್ ಅವರ ಚೊಚ್ಚಲ ಚಿತ್ರ ಕೂಜಂಗಲ್ (ಪೆಬಲ್ಸ್) ಆಸ್ಕರ್​​ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. 94ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಈ ಸಿನಿಮಾ ಭಾರತವನ್ನು ಪ್ರತಿನಿಧಿಸಲಿದೆ.

15 ಸದಸ್ಯರ ಆಯ್ಕೆ ಸಮಿತಿಯ ಅಧ್ಯಕ್ಷರಾದ ಶಾಜಿ ಎನ್ ಕರುಣ್ ಅವರು ಇಂದು ಈ ಘೋಷಣೆ ಮಾಡಿದ್ದಾರೆ. ಈ ನಿರ್ಧಾರವು ಸರ್ವಾನುಮತದಿಂದ ಕೂಡಿದೆ ಎಂದು ಎಫ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಸುಪ್ರಾನ್ ಸೇನ್ ಹೇಳಿದ್ದಾರೆ.

ಮಾರ್ಚ್​ 27, 2022ರಂದು ಕ್ಯಾಲಿಫೋರ್ನಿಯಾದ ಐಕಾನಿಕ್ ಡಾಲ್ಬಿ ಥಿಯೇಟರ್​ನಲ್ಲಿ ನಡೆಯಲಿರುವ ವಿಶ್ವದ ಅತಿದೊಡ್ಡ ಸಿನಿಮಾ ಕಾರ್ನೀವಲ್​ ಆಸ್ಕರ್​​ನಲ್ಲಿ ಕೂಜಂಗಲ್ ಚಿತ್ರ ಭಾರತವನ್ನು ಪ್ರತಿನಿಧಿಸಲಿದೆ.

ವಿನೋತ್​ರಾಜ್​ ಅವರ ಮೊದಲ ನಿರ್ದೇಶನದ ಈ ಚಿತ್ರ ರೋಟರ್​ ಡ್ಯಾಮ್​ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಟೈಗರ್ ಪ್ರಶಸ್ತಿಯನ್ನು ಪಡೆದುಕೊಂಡಿತು. 2017ರಲ್ಲಿ ಸನಲ್ ಕುಮಾರ್ ಶಶಿಧರನ್ ಅವರ ಸೆಕ್ಸಿ ದುರ್ಗಾ ನಂತರ ಟೈಗರ್ ಅವಾರ್ಡ್ ಪಡೆದ ಎರಡನೇ ಭಾರತೀಯ ಸಿನಿಮಾ ಕೂಜಂಗಲ್.

ಹಿಂದಿ ಚಲನಚಿತ್ರಗಳಾದ ಸರ್ದಾರ್ ಉದಾಮ್, ಶೆರ್ನಿ, ಮಲಯಾಳಂನ ನಯಟ್ಟು ಮತ್ತು ತಮಿಳಿನ ಮಂಡೇಲಾ ಸೇರಿದಂತೆ 15 ಚಿತ್ರಗಳನ್ನು ಸಮಿತಿ ಆಯ್ಕೆ ಮಾಡಿತ್ತು. ಆ ಪೈಕಿ ಕೂಜಂಗಲ್ ಚಿತ್ರವು ಅಧಿಕೃತವಾಗಿ ಆಸ್ಕರ್​​​​ ಅವಾರ್ಡ್​ಗೆ ಆಯ್ಕೆಯಾಗಿದೆ.

ಕೂಜಂಗಲ್​​, ವಿನೋತ್​ ರಾಜ್​ ಕುಟುಂಬದ ನೈಜ ಘಟನೆಯಾಗಿದೆ. ಈ ಚಿತ್ರವು ಮದ್ಯವ್ಯಸನಿ ಗಂಡ, ಹೆಂಡತಿಗೆ ಹೊಡೆಯುವ ಕಥೆಯಾಗಿದೆ. ಚಿತ್ರದಲ್ಲಿ ಆಕೆ ತವರು ಮನೆ ಸೇರಿದ ನಂತರ ಅವಳನ್ನು ಮರಳಿ ಮನೆಗೆ ತರಲು ಪತಿ ಚಿಕ್ಕ ಮಗನೊಂದಿಗೆ ಪ್ರಯಾಣ ಬೆಳೆಸುತ್ತಾನೆ. ಚಿತ್ರದಲ್ಲಿ ನಯನ ತಾರಾ, ವಿಘ್ನೇಶ್ ಶಿವನ್ ಅಭಿನಯಿಸಿದ್ದು, ಯುವನ್ ಶಂಕರ್​ ರಾಜ ಸಂಗೀತ ನೀಡಿದ್ದಾರೆ.

Sneha Gowda

Recent Posts

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

20 mins ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

36 mins ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

2 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

2 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

3 hours ago

ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿ

ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ  ಮಕ್ಕಳ ಮೇಲೆ ಬೀದಿ ನಾಯಿಗಳ  ಗ್ಯಾಂಗ್  ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…

3 hours ago