News Karnataka Kannada
Tuesday, April 16 2024
Cricket
ತಮಿಳು

‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೈಲರ್ ಔಟ್

poster
Photo Credit : Twitter

ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಸಿನಿಮಾ ಜಗತ್ತಿಗೂ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ತಮ್ಮದೇ ಧೋನಿ ಎಂಟರ್‌ಟೈನ್ಮೆಂಟ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದು, ಈ ಸಂಸ್ಥೆಯಡಿ ಧೋನಿ ಪತ್ನಿ ಸಾಕ್ಷಿ ಧೋನಿ ‘ಲೆಟ್ಸ್ ಗೆಟ್ ಮ್ಯಾರೀಡ್’ ಎಂಬ ತಮಿಳು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್, ಆಡಿಯೋ ಬಿಡುಗಡೆ ಕಾರ್ಯಕ್ರಮ ಚೆನ್ನೈನಲ್ಲಿ ನೆರವೇರಿದೆ. ಕ್ಯಾಪ್ಟನ್ ಕೂಲ್ ತಮ್ಮದೇ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾದ ಟ್ರೈಲರ್ ಅನಾವರಣ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡರು.

ಎಂ.ಎಸ್.ಧೋನಿ ಮಾತನಾಡಿ, ನಾನು ಈ ಸಿನಿಮಾವನ್ನು ನೋಡಿದ್ದೇನೆ. ಸಿನಿಮಾದಲ್ಲಿ ತುಂಬಾ ಮನರಂಜನೆಯಿದೆ. ನಾನು ನನ್ನ ಮಗಳ ಜೊತೆ ಈ ಸಿನಿಮಾ ನೋಡಬಹುದು. ಅವಳು ತುಂಬಾ ಪ್ರಶ್ನೆಗಳನ್ನು ಕೇಳುತ್ತಾಳೆ. ಇಡೀ ಚಿತ್ರತಂಡ ಅದ್ಭುತ ಕೆಲಸ ಮಾಡಿದೆ. ಈ ಪ್ರಾಜೆಕ್ಟ್ ಅನ್ನು ಅವರು ನಿಭಾಯಿಸಿದ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಹೆಂಡತಿಗೆ ಸಿನಿಮಾ ಮಾಡಬೇಕು ಎಂದಾಗ ನಾನು ಹೇಳಿದ್ದು ಒಂದೇ, ಸಿನಿಮಾ ಮಾಡುವುದೆಂದರೆ ಮನೆ ವಿನ್ಯಾಸ ಮಾಡಿದಂತೆ ಅಲ್ಲ. ನೀವು ಗೋಡೆಗೆ ಬಣ್ಣ ಹಾಕುತ್ತೀರ. ನಿಮಗೆ ಇಷ್ಟವಿಲ್ಲ, ನೀವು ಬಣ್ಣವನ್ನು ಬದಲಾಯಿಸುತ್ತೀರಿ. ನಂತರ, ಮೊದಲ ಬಣ್ಣವು ಉತ್ತಮವಾಗಿದೆ ಎಂದು ನೀವು ಅರಿತುಕೊಳ್ಳುತ್ತೀರಿ. ನಂತರ ನೀವು ಅದನ್ನು ಮತ್ತೆ ಬಣ್ಣಿಸುತ್ತೀರಿ.. ಸಿನಿಮಾಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ಸ್ವಲ್ಪ ದಿನಗಳಲ್ಲಿ ಥಿಯೇಟರ್‌ಗೆ ಬರಲಿದೆ. ಅತ್ತೆ ಸೊಸೆ- ಮಗನ ನಡುವೆ ನಡೆಯುವ ಕಥೆ ಎಂದರು.

ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ಫ್ಯಾಮಿಲಿ ಮನರಂಜನೆಯ ಚಿತ್ರವಾಗಿರುವ ‘ಲೆಟ್ಸ್ ಗೆಟ್ ಮ್ಯಾರೀಡ್’ ಆದಷ್ಟು ಬೇಗ ತೆರೆಗೆ ಬರಲಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು