News Karnataka Kannada
Tuesday, April 23 2024
Cricket
ತಮಿಳು

ಜೈ ಬೀಮ್‌ ಚಿತ್ರದ ವಿರುಧ್ಧ ಮತ್ತೆ ಎಫ್‌ ಐ ಆರ್‌ ದಾಖಲಿಸುವಂತೆ ಕೋರ್ಟ್ ಆದೇಶ

Jai Bhim
Photo Credit :

ತಮಿಳುನಾಡು : ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡುವ ವಕೀಲನೊಬ್ಬನ ಕಥೆಯಾದ ಜೈ ಬೀಮ್‌ ಚಿತ್ರದ ವಿರುಧ್ಧ ಮತ್ತೆ ಆಕ್ಷೇಪ ವ್ಯಕ್ತವಾಗಿದ್ದು ನಟ ಸೂರ್ಯ, ಮತ್ತು ಅವರ ಪತ್ನಿ ಜ್ಯೋತಿಕಾ ಹಾಗೂ ನಿರ್ದೇಶಕ ಗ್ನಾನವೇಲ್‌ ವಿರುದ್ಧ ಎಫ್‌ ಐ ಆರ್‌ ದಾಖಲಿಸುವಂತೆ ತಮಿಳುನಾಡು ಕೋರ್ಟ್ ಆದೇಶ ಮಾಡಿದೆ. ‌

ಚಿತ್ರದಲ್ಲಿ ವನ್ನಿಯಾರ್‌ ಸಮುದಾಯವನ್ನು ಕೀಳಾಗಿ ತೋರಿಸಲಾಗಿದೆ ಎಂದು ಆರೋಪಿಸಿ ರುದ್ರ ವನ್ನಿಯಾರ್‌ ಸೇನೆಯು ದೂರು ನೀಡಿದ್ದು ಚಿತ್ರತಂಡವು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಈ ಹೀಂದ ಚಿತ್ರವನ್ನು ಬಿಡುಗಡೆ ಮಾಡುವಾಗಲೂ ʼವಿವಾದಿತʼ ದೃಶ್ಯಗಳನ್ನು ಕಟ್‌ ಮಾಡುವಂತೆ ವನ್ನಿಯಾರ್‌ ಸಮುದಾಯವು ಆಗ್ರಹಿಸಿತ್ತು. ಜೊತೆ 5 ಕೋಟಿ ಪರಿಹಾರ ನೀಡಿ ಚಿತ್ರತಂಡವು ಸಮುದಾಯದವರ ಬಳಿ ಬೇಷರತ್‌ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿತ್ತು.

ಈ ಹಿಂದೆಯೂ ಚಿತ್ರವು ಆಕ್ಷೇಪ ಎದುರಿಸಿದ್ದು ಚಿತ್ರದಲ್ಲಿ ಪ್ರಕಾಶ್‌ ರಾಜ್‌ ಹೀಮದಿ ಮಾತನಾಡಿದ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಹೊಡೆಯುವ ದೃಶ್ಯವು ಹಿಂದಿ ಭಾಷಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಹಲವರು ಚಿತ್ರದ ಕುರಿತು ಪ್ರಶಂಸನೆ ಮಾಡಿದ್ದರು, ಚಿತ್ರರಂಗವೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಆಸ್ಕರ್‌ ಆಯ್ಕೆಪಟ್ಟಿಗೂ ಕಳುಹಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು