Bengaluru 20°C
Ad

ಪತ್ನಿಯೊಂದಿಗೆ ತೆರಳುತ್ತಿದ್ದ ತಮಿಳು ನಟ ಜೀವ ಕಾರು ಅಪಘಾತ

ಕಾಲಿವುಡ್ ಖ್ಯಾತ ನಟ ಜೀವ ಕಾರು ಅಪಘಾತವಾಗಿದೆ. ಪತ್ನಿಯೊಂದಿಗೆ ನಟ ಜೀವ ಪ್ರಯಾಣಿಸುತ್ತಿದ್ದ ವೇಳೆ, ಕಲ್ಲಕುರಿಚಿ ಜಿಲ್ಲೆಯ ಚಿನ್ನಸೇಲಂ ಬಳಿ ಕಾರು ಅಪಘಾತ ಸಂಭವಿಸಿದೆ. 

ಚೆನ್ನೈ: ಕಾಲಿವುಡ್ ಖ್ಯಾತ ನಟ ಜೀವ ಕಾರು ಅಪಘಾತವಾಗಿದೆ. ಪತ್ನಿಯೊಂದಿಗೆ ನಟ ಜೀವ ಪ್ರಯಾಣಿಸುತ್ತಿದ್ದ ವೇಳೆ, ಕಲ್ಲಕುರಿಚಿ ಜಿಲ್ಲೆಯ ಚಿನ್ನಸೇಲಂ ಬಳಿ ಕಾರು ಅಪಘಾತ ಸಂಭವಿಸಿದೆ.

ಇಂದು (ಸೆ.11) ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅನಿರೀಕ್ಷಿತವಾಗಿ ಓರ್ವ ವ್ಯಕ್ತಿ ಅಡ್ಡ ಬಂದಿದ್ದಾನೆ. ಆತನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಟ ಜೀವ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ನಟ ಜೀವ ಮತ್ತು ಪತ್ನಿ ಸುಪ್ರಿಯಾಗೆ ಯಾವುದೇ ಗಾಯವಾಗಿಲ್ಲ. ಅವಘಡದಿಂದ ಇಬ್ಬರೂ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಜೀವ ದಂಪತಿಯನ್ನು ಬೇರೆ ಕಾರಿನಲ್ಲಿ ಚೆನ್ನೈಗೆ ಕಳುಹಿಸಿ ಕೊಟ್ಟಿದ್ದಾರೆ.

Ad
Ad
Nk Channel Final 21 09 2023