ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ದೂರು ದಾಖಲಾಗಿದೆ. ಮಾರ್ಚ್ 12 ರಂದು ಮುಂಬೈನಲ್ಲಿ ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ರಾಂಪ್ ವಾಕ್ ನಲ್ಲಿ ಪಾಲ್ಗೊಂಡ ವಿಡಿಯೋ, ಚಿತ್ರವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಈ ವಿರುದ್ಧ ಹಿಂದ್ ರಕ್ಷಕ ಸಂಘಟನೆಯು ಪನ್ನು ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದು ಮತ್ತು ಅಶ್ಲೀಲ ವರ್ತನೆ ಆರೋಪದ ಮೇಲೆ ದೂರು ದಾಖಲಿಸಿದೆ.
ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರರೂ ಆಗಿರುವ ಇಂದೋರ್ ಹಿಂದ್ ರಕ್ಷಕ ಸಂಘಟನೆಯ ಸಂಚಾಲಕ ಏಕಲವ್ಯ ಸಿಂಗ್ ಗೌರ್ ಈ ಆರೋಪ ಮಾಡಿದ್ದಾರೆ. ನಟಿ ತಾಪ್ಸಿ ಪನ್ನು ವಿರುದ್ಧ ಧಾರ್ಮಿಕ ಭಾವನೆ ಮತ್ತು ಧಾರ್ಮಿಕ ನಂಬಿಕೆ ಘಾಸಿಗೊಳಿಸಿದ್ದಕ್ಕಾಗಿ ದೂರು ಸ್ವೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ಕ್ರಮದ ಕುರಿತು ತಾಪ್ಸಿ ಇನ್ನೂ ಪ್ರತಿಕ್ರಿಯಿಸಿಲ್ಲ.