ಸೂಪರ್ ಸ್ಟಾರ್ ರಜನಿಕಾಂತ್ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂಬ ಸುದ್ದಿ ಮೂಲಗಳು ತಿಳಿಸಿವೆ.
ನೆಲ್ಸನ್ ದಿಲೀಪ್ಕುಮಾರ್ ಅವರ ‘ಜೈಲರ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ವೆಟ್ಟೈಯನ್ ಸಿನಿಮಾದ ಬಿಡುಗಡೆಯ ಹಂತದಲ್ಲಿದ್ದಾರೆ. ಸದ್ಯ ರಜನಿಕಾಂತ್ಗೆ ಹೊಟ್ಟೆ ನೋವು ಕಾಡಿದೆ. ಅದರಿಂದ ಬಳಲುತ್ತಿದ್ದ ನಟ ಆಸ್ಪತ್ರೆ ಸೇರಿದ್ದಾರೆ. ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ ಸಾಯಿ ಸತೀಶ್ ಅವರ ಅಡಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಜನಿಕಾಂತ್ಗೆ ಕಾರ್ಡಿಯಾಕ್ ಕ್ಯಾಥ್ ಕ್ಯಾಬ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಸದ್ಯ ಅಭಿಮಾನಿಗಳ ತಲೈವಾ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
Ad