Bengaluru 22°C
Ad

ʼಯುಐʼ ಚಿತ್ರದಲ್ಲಿ ರಿಯಲ್ ಸ್ಟಾರ್ ಜೊತೆ ಹಾಟ್ ಬ್ಯೂಟಿ ಸನ್ನಿ ಲಿಯೋನ್

Ui

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಯುಐ ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಯುಐಯ ಪ್ರತಿ ವಿಷಯ ಭಾರೀ ನಿರೀಕ್ಷೆ ಮೂಡಿಸುತ್ತಿದೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾದ ಮತ್ತೊಂದು ಅಪ್​ಡೇಟ್​ ಸಿಕ್ಕಿದ್ದು, ಇದು ನವಯುವಕರ ಮನಸು ಕದಡೋ ಸಂಗತಿಯಾಗಿದೆ.

ಹೌದು. . ಉಪ್ಪಿ ಏನೇ ಮಾಡಿದರೂ ಅದನ್ನು ವಿಭಿನ್ನವಾಗಿ ಮಾಡಿ ತೋರಿಸುತ್ತಾರೆ. ಉಪೇಂದ್ರ ನಿರ್ದೇಶನ ಎಂದರೆ ಯಾರೂ ಊಹೆ ಮಾಡದಂತಹ ಸೀನ್​ಗಳು ಇದ್ದೆ ಇರುತ್ತವೆ. ಯುಐ ಮೂಲಕ ಜನರಿಗೆ ಏನೋ ಸಂದೇಶ ನೀಡಲು ಹೊರಟಿದ್ದಾರೆ ಎಂದು ಅಭಿಮಾನಿಗಳ ಕುತೂಹಲ. ಇದೆಲ್ಲದರ ನಡುವೆ ಬಾಲಿವುಡ್ ಬ್ಯೂಟಿ ಸಖತ್ ಹಾಟ್​ ಹಾಟ್ ಎನಿಸಿರುವ ಸನ್ನಿ ಲಿಯೋನ್ ಯುಐ ಸಿನಿಮಾದಲ್ಲಿ ಆ್ಯಕ್ಟ್ ಮಾಡುತ್ತಿದ್ದಾರಂತೆ. ಅಂದ್ಹಾಗೆ ಸನ್ನಿ ಲಿಯೋನ್​ ಕನ್ನಡದಲ್ಲಿ ನಟಿಸುತ್ತಿರುವ 3ನೇ ಸಿನಿಮಾ ಇದಾಗಿದೆ.

Ad
Ad
Nk Channel Final 21 09 2023